ಯೂಟ್ಯೂಬ್ ಚಾನೆಲ್ ಆರಂಭಿಸಿದ ಸಲ್ಮಾನ್ ಖಾನ್; ಮೊದಲ ವಿಡಿಯೋದಲ್ಲಿ ನಟನೆಯ ಪಾಠ

ಸಿನಿಮಾ ಮತ್ತು ಕಿರುತೆರೆಯ ಆಚೆಗೆ ಅಭಿಮಾನಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಬಾಲಿವುಡ್ ಸೆಲೆಬ್ರಿಟಿಗಳು ಈಗ ಯೂಟ್ಯೂಬ್ ಅನ್ನು ಪ್ರಮುಖ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಟರು ಮತ್ತು ನಿರ್ಮಾಪಕರು ತಮ್ಮ ವೈಯಕ್ತಿಕ ಜೀವನದ ಕ್ಷಣಗಳನ್ನು ಪ್ರೇಕ್ಷಕರಿಗೆ ತೋರಿಸಲು ಯೂಟ್ಯೂಬ್ ಬಳಸುತ್ತಿದ್ದಾರೆ. ಅಂಥವರ ಸಾಲಿಗೆ ಸಲ್ಮಾನ್ ಖಾನ್ ಕೂಡ ಸೇರ್ಪಡೆ ಆಗಿದ್ದಾರೆ.

ಯೂಟ್ಯೂಬ್ ಚಾನೆಲ್ ಆರಂಭಿಸಿದ ಸಲ್ಮಾನ್ ಖಾನ್; ಮೊದಲ ವಿಡಿಯೋದಲ್ಲಿ ನಟನೆಯ ಪಾಠ
Salman Khan
Image Credit source: Being Salman Khan

Updated on: Oct 11, 2026 | 7:38 AM

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಈಗ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಡಿಜಿಟಲ್ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಆದ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಅವರು ತಮ್ಮ ಸಿಗ್ನೇಚರ್ ಶೈಲಿ, ನಟನೆ ಮತ್ತು ಬಾಡಿ ಲ್ಯಾಂಗ್ವೇಜ್‌ನ ಪಾಠಗಳನ್ನು ಹೇಳಿಕೊಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅಕ್ಟೋಬರ್ 9ರ ಶುಕ್ರವಾರದಂದು ತಮ್ಮ ಹೊಸ ಪ್ರಯತ್ನ ಆರಂಭಿಸಿರುವ ಸಲ್ಮಾನ್ ಖಾನ್ ಅವರು ‘ಬೀಯಿಂಗ್ ಸಲ್ಮಾನ್ ಖಾನ್’ ಹೆಸರಿನ ಯೂಟ್ಯೂಬ್ ಚಾನೆಲ್ ಶುರುಮಾಡಿದ್ದಾರೆ.

ಈ ಚಾನೆಲ್‌ನಲ್ಲಿ ತಮ್ಮ ಮೊದಲ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಲ್ಮಾನ್ ಖಾನ್ ಅವರ ವಿಶಿಷ್ಟ ಶೈಲಿಯ ನಟನೆ, ಬಾಡಿ ಲ್ಯಾಂಗ್ವೇಜ್‌ ಮತ್ತು ತೆರೆಯ ಮೇಲಿನ ಅವರ ಮ್ಯಾನರಿಸಮ್‌ಗಳನ್ನು ಹೇಗೆ ಕರಗತ ಮಾಡಿಕೊಳ್ಳಬೇಕು ಎಂಬುದನ್ನು ತಮಾಷೆಯಾಗಿ ಹೇಳಿಕೊಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಾನೆಲ್‌ನ ಲಿಂಕ್ ಹಂಚಿಕೊಂಡಿದ್ದಾರೆ.

Salman Sir Ki Class: Body Parts 📚 | Teacher bhi main, student bhi main 😂

‘ಶುರುವಿನಿಂದ ಪ್ರಾರಂಭಿಸೋಣ. ಇದು ನನ್ನ ಅಧಿಕೃತ ಯೂಟ್ಯೂಬ್ ಚಾನೆಲ್. ಇಲ್ಲಿ ನಿಮಗೆ A ಯಿಂದ Z ವರೆಗೆ ಎಲ್ಲವೂ ಸಿಗುತ್ತದೆ’ ಎಂದು ಸಲ್ಮಾನ್ ಖಾನ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ವಿಶೇಷವೆಂದರೆ, ಚಾನೆಲ್ ಆರಂಭವಾದ ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಕರನ್ನು ಪಡೆದು ಮುನ್ನಡೆಯುತ್ತಿದೆ.

ಸಲ್ಮಾನ್ ಖಾನ್ ಹಂಚಿಕೊಂಡಿರುವ ಮೊದಲ ವಿಡಿಯೋದಲ್ಲಿ ಸ್ವತಃ ಅವರೇ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬರು ತರಬೇತುದಾರನ ಪಾತ್ರದಲ್ಲಿದ್ದರೆ, ಇನ್ನೊಬ್ಬರು ವಿದ್ಯಾರ್ಥಿಯ ಪಾತ್ರದಲ್ಲಿದ್ದಾರೆ. ಈ ತಮಾಷೆಯ ವಿಡಿಯೋದಲ್ಲಿ, ತರಬೇತುದಾರನು ವಿದ್ಯಾರ್ಥಿಗೆ ಸಲ್ಮಾನ್ ಅವರ ಪ್ರಸಿದ್ಧ ಬಾಡಿ ಲ್ಯಾಂಗ್ವೇಜ್ ಮತ್ತು ಡೈಲಾಗ್ ಡೆಲಿವರಿಯನ್ನು ಹೇಗೆ ಮಾಡಬೇಕೆಂದು ಪಾಠ ಮಾಡುತ್ತಾನೆ. ಇದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.

ಇದನ್ನೂ ಓದಿ: ‘ನನಗೆ ಈಗ 6 ಪ್ಯಾಕ್ ಇಲ್ಲ’: ನೇರವಾಗಿ ಒಪ್ಪಿಕೊಂಡ ಸಲ್ಮಾನ್ ಖಾನ್

ವರುಣ್ ಧವನ್, ಕೃತಿ ಸನೋನ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಜೋನಸ್, ಕಾರ್ತಿಕ್ ಆರ್ಯನ್ ಸೇರಿದಂತೆ ಅನೇಕ ಪ್ರಮುಖ ನಟ-ನಟಿಯರು ಯೂಟ್ಯೂಬ್ ಚಾನೆಲ್ಗಳನ್ನು ಹೊಂದಿದ್ದಾರೆ. ಖ್ಯಾತ ನಿರ್ಮಾಪಕಿ ಮತ್ತು ನೃತ್ಯ ನಿರ್ದೇಶಕಿ ಫರಾ ಖಾನ್ ಕೂಡ ತಮ್ಮ ಅಡುಗೆಯ ವ್ಲಾಗ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಸೆಲೆಬ್ರಿಟಿಗಳ ಮನೆಗಳಿಗೆ ಭೇಟಿ ನೀಡುವುದು, ಅವರೊಂದಿಗೆ ಅಡುಗೆ ಮಾಡುವುದು ಮತ್ತು ಅವರ ಸಿನಿಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡುವ ಇವರ ಚಾನೆಲ್ ಲಕ್ಷಾಂತರ ಚಂದಾದಾರರನ್ನು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us