Salman Khan: ಮಮತಾ ಬ್ಯಾನರ್ಜಿ ಜತೆ ಕೈ ಜೋಡಿಸಿದ ಸಲ್ಮಾನ್​ ಖಾನ್​; ರಾಜಕೀಯದ ಮುನ್ಸೂಚನೆಯೇ?

Salman Khan Meets Mamata Banerjee: ತಮ್ಮನ್ನು ಭೇಟಿ ಆಗಲು ಬಂದ ಸಲ್ಮಾನ್​ ಖಾನ್​ಗೆ ಮಮತಾ ಬ್ಯಾನರ್ಜಿ ಅವರು ಶಾಲು ಹೊದಿಸಿ ಸ್ವಾಗತಿಸಿದ್ದಾರೆ. ಈ ಭೇಟಿಯ ಕಾರಣ ಏನು?

Salman Khan: ಮಮತಾ ಬ್ಯಾನರ್ಜಿ ಜತೆ ಕೈ ಜೋಡಿಸಿದ ಸಲ್ಮಾನ್​ ಖಾನ್​; ರಾಜಕೀಯದ ಮುನ್ಸೂಚನೆಯೇ?
ಮಮತಾ ಬ್ಯಾನರ್ಜಿ, ಸಲ್ಮಾನ್ ಖಾನ್

Updated on: May 14, 2023 | 9:58 AM

ಮುಖ್ಯಾಂಶಗಳು

  • ಸಲ್ಮಾನ್​ ಖಾನ್​ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ
  • ಕೊಲ್ಕತ್ತಾದಲ್ಲಿ ಸಲ್ಮಾನ್​ ಖಾನ್​ ಅವರು ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ
  • ಸಲ್ಮಾನ್​ ಖಾನ್​ ಅವರು ಈಗ ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ

ಎಲ್ಲೆಲ್ಲೂ ಈಗ ರಾಜಕೀಯದ್ದೇ ಚರ್ಚೆ. ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಬಗ್ಗೆಯೂ ಭಾರಿ ಕೌತುಕ ಮೂಡಿದೆ. ಈ ಸಂದರ್ಭದಲ್ಲಿ ರಾಜಕೀಯ ನಾಯಕರ ಜೊತೆ ಸಿನಿಮಾ ತಾರೆಯರು ಕಾಣಿಸಿಕೊಂಡರೆ ಬೇರೆ ಬೇರೆ ಅನುಮಾನಗಳಿಗೆ ಕಾರಣ ಆಗುತ್ತದೆ. ನಟ ಸಲ್ಮಾನ್​ ಖಾನ್​ ಅವರು ಈಗ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಭೇಟಿ ಆಗಿದ್ದಾರೆ. ಇಬ್ಬರು ಜೊತೆಗಿರುವ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ತಮ್ಮನ್ನು ಭೇಟಿ ಆಗಲು ಬಂದ ಸಲ್ಮಾನ್​ ಖಾನ್​ಗೆ ಮಮತಾ ಬ್ಯಾನರ್ಜಿ ಅವರು ಶಾಲು ಹೊದಿಸಿ ಸ್ವಾಗತಿಸಿದ್ದಾರೆ. ಈ ಭೇಟಿಯ ಕಾರಣ ಏನು? ಸಲ್ಮಾನ್​ ಖಾನ್​ (Salman Khan) ಅವರು ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾರಾ? ಇಲ್ಲಿದೆ ಅಸಲಿ ಕಹಾನಿ..

ಸಲ್ಮಾನ್​ ಖಾನ್​ ಅವರು ಸಿನಿಮಾ ಮಾತ್ರವಲ್ಲದೇ ಲೈವ್​ ಕಾರ್ಯಕ್ರಮಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಾರೆ. ‘ದಬಂಗ್​ ಟೂರ್​’ ಮಾಡುವ ಮೂಲಕ ಬೇರೆ ಬೇರೆ ನಗರ ಮತ್ತು ದೇಶಗಳಿಗೆ ತೆರಳಿ ಅವರು ಮನರಂಜನೆ ನೀಡುತ್ತಾರೆ. ಅವರ ಜೊತೆ ಬಾಲಿವುಡ್​ನ ಅನೇಕ ತಾರೆಯರು ಸಾಥ್​ ನೀಡುತ್ತಾರೆ. ಈಗ ಅವರು ಪಶ್ಚಿಮ ಬಂಗಾಳಕ್ಕೆ ಹೋಗಿರುವುದು ಕೂಡ ಅದೇ ಕಾರಣಕ್ಕೆ.

ಇದನ್ನೂ ಓದಿ
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಪಶ್ಚಿಮ ಬಂಗಾಳಕ್ಕೆ ತೆರಳಿದ ಸಲ್ಮಾನ್​ ಖಾನ್​ ಅವರು ಸೌಹಾರ್ದಯುತವಾಗಿ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ ಅಷ್ಟೇ. ಸದ್ಯಕ್ಕಂತೂ ಅವರು ರಾಜಕೀಯದ ವಿಚಾರದಲ್ಲಿ ತಲೆ ಹಾಕಿಲ್ಲ. ಸಲ್ಮಾನ್​ ಖಾನ್​ ಅವರನ್ನು ಬರಮಾಡಿಕೊಳ್ಳಲು ಮಮತಾ ಬ್ಯಾನರ್ಜಿ ಅವರು ತಮ್ಮ ಮನೆ ಎದುರು ನಿಂತಿದ್ದರು. 30 ನಿಮಿಷಗಳ ಕಾಲ ಇಬ್ಬರೂ ಮಾತುಕಥೆ ನಡೆಸಿದ್ದಾರೆ.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್​; ನಿರ್ಧಾರಕ್ಕೆ ಕಾರಣ ತಿಳಿಸಿದ ಮಮತಾ ಬ್ಯಾನರ್ಜಿ

ಕೊಲ್ಕತ್ತಾದಲ್ಲಿ ಶನಿವಾರ ಸಲ್ಮಾನ್​ ಖಾನ್​ ಅವರು ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಅವರಿಗೆ ಬೆದರಿಕೆ ಇರುವ ವಿಚಾರ ಗೊತ್ತೇ ಇದೆ. ಆದ್ದರಿಂದ ಕೊಲ್ಕತ್ತಾದಲ್ಲಿ ಸಲ್ಮಾನ್​ ಖಾನ್​ ಉಳಿದುಕೊಂಡಿರುವ ಹೋಟೆಲ್​ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಸೋನಾಕ್ಷಿ ಸಿನ್ಹಾ, ಪೂಜಾ ಹೆಗ್ಡೆ ಮುಂತಾದ ತಾರೆಯರು ಕೂಡ ‘ದಬಂಗ್​ ಟೂರ್​’ನಲ್ಲಿ ಸಲ್ಲು ಜೊತೆ ಭಾಗಿ ಆಗಿದ್ದಾರೆ.

ಇದನ್ನೂ ಓದಿ: Salman Khan: ಸೋಲಿನ ನೋವು ಮರೆತು ಪೋಸ್​ ಕೊಟ್ಟ​ ಸಲ್ಮಾನ್​ ಖಾನ್​; ‘ಘರ್ಜಿಸಲು ಟೈಗರ್​ ರೆಡಿ’ ಎಂದ ಫ್ಯಾನ್ಸ್​

ಸಲ್ಮಾನ್​ ಖಾನ್​ ಅವರು ಈಗ ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ಹಲವು ಕಾರಣಗಳಿಂದ ಈ ಸಿನಿಮಾದ ಮೇಲೆ ಹೈಪ್​ ಸೃಷ್ಟಿ ಆಗಿದೆ. ಮನೀಶ್​ ಶರ್ಮಾ ಅವರು ‘ಟೈಗರ್​ 3’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಕತ್ರಿನಾ ಕೈಫ್​ ನಟಿಸುತ್ತಿದ್ದಾರೆ. ಸಲ್ಲು ಮತ್ತು ಕತ್ರಿನಾ ಜೋಡಿಯನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us