ಹುಡುಗಿ ಪರಿಚಯಿಸಲು ಮುಂದಾದ ಸಲ್ಮಾನ್​ ಖಾನ್​; ಭಾಯ್​ ಮದುವೆ ಅಂತ ಖುಷಿಪಟ್ಟ ಫ್ಯಾನ್ಸ್​

Salman Khan Viral Photo: ಹುಡುಗಿಯ ಜೊತೆ ಸಲ್ಮಾನ್​ ಖಾನ್​ ಅವರು ಆಪ್ತವಾಗಿ ನಿಂತಿರುವ ಫೋಟೋ ವೈರಲ್​ ಆಗಿದೆ. ಹೊಸ ಸಮಾಚಾರ ತಿಳಿಸುವುದಾಗಿ ಅವರು ಹೇಳಿದ್ದಾರೆ. ‘ಅತ್ತಿಗೆಯನ್ನು ಅಣ್ಣ ಪರಿಚಯಿಸಲಿದ್ದಾರೆ’ ಎಂದು ಅಭಿಮಾನಿಗಳು ಊಹಿಸಿದ್ದಾರೆ. ‘ಕಡೆಗೂ ಅಣ್ಣನ ಮದುವೆ ಆಗುತ್ತಿದೆ’ ಎಂದು ಕೂಡ ಅನೇಕರು ಕಮೆಂಟ್​ ಮಾಡಿದ್ದಾರೆ.

ಹುಡುಗಿ ಪರಿಚಯಿಸಲು ಮುಂದಾದ ಸಲ್ಮಾನ್​ ಖಾನ್​; ಭಾಯ್​ ಮದುವೆ ಅಂತ ಖುಷಿಪಟ್ಟ ಫ್ಯಾನ್ಸ್​
ಸಲ್ಮಾನ್​ ಖಾನ್​ ವೈರಲ್​ ಫೋಟೋ

Updated on: Oct 08, 2023 | 5:49 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಈಗ 57 ವರ್ಷ ವಯಸ್ಸು. ಅವರ ಪ್ರಾಯದ ಇತರೆ ನಟರು ಮದುವೆ, ಮಕ್ಕಳು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​ ಆಗಿಯೇ ಉಳಿದುಕೊಂಡಿದ್ದಾರೆ. ಸಲ್ಲು ಯಾವಾಗ ಮದುವೆ (Salman Khan Marriage) ಆಗುತ್ತಾರೆ ಎಂಬ ಪ್ರಶ್ನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಈಗ ಸಲ್ಮಾನ್​ ಖಾನ್​ ಕಡೆಯಿಂದ ಒಂದು ಹೊಸ ನ್ಯೂಸ್​ ಸಿಕ್ಕಿದೆ. ಶೀರ್ಘದಲ್ಲೇ ಅವರು ಹುಡುಗಿಯನ್ನು ಜಗತ್ತಿಗೆ ಪರಿಚಯ ಮಾಡಿಸಲಿದ್ದಾರೆ. ಈ ಸುದ್ದಿ ಕೇಳಿದ ಬಳಿಕ ಖಂಡಿತವಾಗಿಯೂ ಇದು ಮದುವೆ ಸಂಬಂಧಿಸಿದ ಸುದ್ದಿ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ. ಸಲ್ಮಾನ್​ ಖಾನ್ ಮಾಡಲಿರುವ ಮಹತ್ವದ ಘೋಷಣೆ ಬಗ್ಗೆ ಎಲ್ಲರೂ ಕಾಯುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಲ್ಮಾನ್​ ಖಾನ್​ ಅವರು ಒಂದು ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಹುಡುಗಿಯ ಜೊತೆ ಅವರು ಆಪ್ತವಾಗಿ ನಿಂತಿದ್ದಾರೆ. ಯುವತಿಯ ಹೆಗಲ ಮೇಲೆ ಕೈ ಹಾಕಿ ಪೋಸ್​ ನೀಡಿದ್ದಾರೆ. ಈ ಫೋಟೋದ ಮೇಲೆ ಇರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ನನ್ನ ಹೃದಯದ ಚಿಕ್ಕ ಭಾಗವನ್ನು ನಿಮಗೆ ನಾಳೆ ಪರಿಚಯಿಸುತ್ತೇನೆ’ ಎಂದು ಬರೆಯಲಾಗಿದೆ. ಇದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಅತ್ತಿಗೆಯನ್ನು ಅಣ್ಣ ಪರಿಚಯಿಸಲಿದ್ದಾರೆ’ ಎಂದು ಅಭಿಮಾನಿಗಳು ಊಹಿಸಿದ್ದಾರೆ. ‘ಕಡೆಗೂ ಅಣ್ಣನ ಮದುವೆ ಆಗುತ್ತಿದೆ’ ಎಂದು ಕೂಡ ಅನೇಕರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಗುಮಾನಿ ವ್ಯಕ್ತಪಡಿಸಿದ್ದಾರೆ. ಯಾವುದೋ ಪ್ರಾಜೆಕ್ಟ್​ನ ಪ್ರಚಾರದ ಸಲುವಾಗಿ ಈ ರೀತಿ ಗಿಮಿಕ್​ ಮಾಡಿರಬಹುದು ಎಂದು ಅನುಮಾನ ಮೂಡಿದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಬ್ರ್ಯಾಂಡ್​ ಪ್ರಮೋಷನ್​ ಸಲುವಾಗಿ ಇಂಥ ಗಿಮಿಕ್​ ಮಾಡಿದ ಉದಾಹರಣೆಗಳು ಸಾಕಷ್ಟು ಇವೆ.

Tiger 3 Teaser: ದೇಶದ ವಿರುದ್ಧವೇ ತಿರುಗಿ ನಿಂತ ಟೈಗರ್​; ಭರ್ಜರಿ ಟ್ವಿಸ್ಟ್​ ನೀಡಿದ ಸಲ್ಮಾನ್​ ಖಾನ್​

ಸಿನಿಮಾ ವಿಚಾರಕ್ಕೆ ಬರೋದಾದರೆ ಸಲ್ಮಾನ್​ ಖಾನ್​​ ಅವರು ‘ಟೈಗರ್​ 3’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರಲ್ಲಿ ಕತ್ರಿನಾ ಕೈಫ್​, ಇಮ್ರಾನ್​ ಹಷ್ಮಿ ಕೂಡ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಇದರ ಒಂದು ಟೀಸರ್​ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಕಥೆಯ ಎಳೆ ಏನೆಂಬುದನ್ನು ಬಿಟ್ಟುಕೊಡಲಾಗಿತ್ತು. ‘ಜವಾನ್​, ‘ಪಠಾಣ್​’ ರೀತಿ ‘ಟೈಗರ್​ 3’ ಸಿನಿಮಾ ಕೂಡ ಸಾವಿರಾರು ಕೋಟಿ ಗಳಿಸಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us