19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ

Salman Khan: ಸಲ್ಮಾನ್ ಖಾನ್ ಅವರು ಮುಂಬೈನ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಮುಂಬೈನ ಹೊರವಲಯದಲ್ಲಿ ಫಾರ್ಮ್​ಹೌಸ್ ಇದೆ. ಈಗ ಸಲ್ಲು ಅವರು ಹೋಟೆಲ್ ಬಿಸ್ನೆಸ್​ ಕಡೆ ಗಮನ ನೀಡುತ್ತಿದ್ದಾರೆ.

19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ
ಸಲ್ಮಾನ್ ಖಾನ್
Edited By:

Updated on: May 21, 2023 | 6:30 AM

ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಸಾವಿರಾರ ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಆದಾಯದ ಮೂಲಕ್ಕೆ ಸಲ್ಮಾನ್ ಖಾನ್ ಕೇವಲ ಸಿನಿಮಾ ನಂಬಿಕೊಂಡಿಲ್ಲ. ಅವರು ಅನೇಕ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್​ ಬಗ್ಗೆ ಸಲ್ಲುಗೆ ವಿಶೇಷ ಆಸಕ್ತಿ ಇದೆ. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ಆಸ್ತಿ ಖರೀದಿ ಮಾಡುತ್ತಾರೆ. ಈಗ ಸಲ್ಲು ಐಷಾರಾಮಿ ಹೋಟೆಲ್ ನಿರ್ಮಿಸಲು ರೆಡಿ ಆಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಅವರು ಹೊಸ ಬಿಸ್ನೆಸ್​ಗೆ ಇಳಿಯುತ್ತಿದ್ದಾರೆ.

ಸಲ್ಮಾನ್ ಖಾನ್ ಅವರು ಮುಂಬೈನ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಮುಂಬೈನ ಹೊರವಲಯದಲ್ಲಿ ಫಾರ್ಮ್​ಹೌಸ್ ಇದೆ. ಈಗ ಸಲ್ಲು ಅವರು ಹೋಟೆಲ್ ಬಿಸ್ನೆಸ್​ ಕಡೆ ಗಮನ ನೀಡುತ್ತಿದ್ದಾರೆ. ಬಾಂದ್ರಾದಲ್ಲಿ 19 ಅಂತಸ್ತಿನ ಕಟ್ಟಡ ಹೊಂದಿದ್ದಾರೆ ಸಲ್ಮಾನ್ ಖಾನ್. ಇದನ್ನು ಅವರು ಹೋಟೆಲ್ ಆಗಿ ಬದಲಾಯಿಸುವ ಆಲೋಚನೆಯಲ್ಲಿದ್ದಾರೆ.

ವಾಸಕ್ಕೆ ಯೋಗ್ಯವಾದ ಮನೆಯನ್ನು ಕಮರ್ಷಿಯಲ್ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಒಪ್ಪಿಗೆ ಪಡೆಯಬೇಕು. ಸಲ್ಮಾನ್ ಖಾನ್ ವರ್ಷದ ಹಿಂದೆಯೇ ಒಪ್ಪಿಗೆ ಕೋರಿ ಮನವಿ ಸಲ್ಲಿಕೆ ಮಾಡಿದ್ದರು. ಮುಂಬೈ ಬೃಹತ್ ಮಹಾನಗರ ಪಾಲಿಕೆ ಇದಕ್ಕೆ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ವಾಸಕ್ಕೆ ಯೋಗ್ಯವಾಗಿರುವ ಕಟ್ಟಡವನ್ನು ಹೋಟೆಲ್ ಆಗಿ ಬದಲಾಯಿಸುವ ಕೆಲಸ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Shehnaaz Gill: ಸಲ್ಮಾನ್ ಖಾನ್ ಜೊತೆ ನಟಿಸಿದ ಬಳಿಕ ಬದಲಾಯ್ತು ಶೆಹನಾಜ್ ಗಿಲ್ ಅದೃಷ್ಟ

ಮೊದಲ ಎರಡು ಅಂತಸ್ತಿನಲ್ಲಿ ಕೆಫೆ ಹಾಗೂ ರೆಸ್ಟೋರೆಂಟ್​ ಇರಲಿದೆ. ಮೂರನೇ ಫ್ಲೋರ್​ನಲ್ಲಿ ಸ್ವಿಮಿಂಗ್ ಪೂಲ್ ಹಾಗೂ ಜಿಮ್ ಇರಲಿದೆ. ನಾಲ್ಕನೇ ಫ್ಲೋರ್​ನಲ್ಲಿ ಸರ್ವಿಸ್ ಹಾಲ್ ಇರಲಿದೆ. ಐದು ಹಾಗೂ ಆರನೇ ಫ್ಲೋರ್​ನಲ್ಲಿ ಸಮಾರಂಭ ಮಾಡಲು ಹಾಲ್​ಗಳು ಇರಲಿವೆ. 7-19ನೇ ಫ್ಲೋರ್​​ಗಳು ಹೋಟೆಲ್​​ ಕೆಲಸಕ್ಕೆ ಬಳಕೆ ಆಗಲಿದೆ.

ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಸಾಧಾರಣ ಗಳಿಕೆ ಮಾಡಿದೆ. ‘ಟೈಗರ್ 3’ ಸಿನಿಮಾ ಕೆಲಸಗಳಲ್ಲಿ ಸಲ್ಮಾನ್ ಖಾನ್ ತೊಡಗಿಕೊಂಡಿದ್ದಾರೆ. ಇದಲ್ಲದೆ, ಕರಣ್ ಜೋಹರ್ ಜೊತೆ ಅವರು ಹೊಸ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us