AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​​ಗಿಂತಲೂ ದಕ್ಷಿಣ ಭಾರತ ಚಿತ್ರೋದ್ಯಮ ಗ್ರೇಟ್: ನಟಿ ಸಮೀರಾ ರೆಡ್ಡಿ

ಇತ್ತೀಚೆಗೆ ನಟಿ ರಾಧಿಕಾ ಆಪ್ಟೆ, ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಸಾಕಷ್ಟು ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದು, ದಕ್ಷಿಣ ಭಾರತ ಚಿತ್ರರಂಗ ಕೆಟ್ಟದ್ದು ಎಂಬ ಭಾವನೆ ಬಿತ್ತುವ ಪ್ರಯತ್ನ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹಲವು ನಟಿಯರು ಮಾತನಾಡುತ್ತಿದ್ದಾರೆ. ಇದೀಗ ನಟಿ ಸಮೀರಾ ರೆಡ್ಡಿ ಬಾಲಿವುಡ್​​ಗಿಂತಲೂ ದಕ್ಷಿಣ ಭಾರತ ಚಿತ್ರರಂಗ ಉತ್ತಮ ಎಂದಿದ್ದಾರೆ.

ಬಾಲಿವುಡ್​​ಗಿಂತಲೂ ದಕ್ಷಿಣ ಭಾರತ ಚಿತ್ರೋದ್ಯಮ ಗ್ರೇಟ್: ನಟಿ ಸಮೀರಾ ರೆಡ್ಡಿ
Sameera Reddy
ಮಂಜುನಾಥ ಸಿ.
|

Updated on: Nov 20, 2026 | 9:32 AM

Share

ಸಮೀರಾ ರೆಡ್ಡಿ ಮೂಲತಃ ಬಾಲಿವುಡ್ ನಟಿ, ಹುಟ್ಟಿದ್ದು ಮುಂಬೈನಲ್ಲಿ ಆದರೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ. ಕಳೆದ ಕೆಲವಾರು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿರುವ ಸಮೀರಾ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟಿ ರಾಧಿಕಾ ಆಪ್ಟೆ, ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಸಾಕಷ್ಟು ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದು, ದಕ್ಷಿಣ ಭಾರತ ಚಿತ್ರರಂಗ ಕೆಟ್ಟದ್ದು ಎಂಬ ಭಾವನೆ ಬಿತ್ತುವ ಪ್ರಯತ್ನ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹಲವು ನಟಿಯರು ಮಾತನಾಡುತ್ತಿದ್ದಾರೆ. ಇದೀಗ ನಟಿ ಸಮೀರಾ ರೆಡ್ಡಿ ಬಾಲಿವುಡ್​​ಗಿಂತಲೂ ದಕ್ಷಿಣ ಭಾರತ ಚಿತ್ರರಂಗ ಉತ್ತಮ ಎಂದಿದ್ದಾರೆ.

2002 ರಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ ಸಮೀರಾ ರೆಡ್ಡಿ ಹಿಂದಿ, ಇಂಗ್ಲೀಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲೂ ನಟಿ ಸಮೀರಾ ಹಿಂದಿಯ ಸಿನಿಮಾಗಳಲ್ಲಿ ತುಸು ಹೆಚ್ಚು ಸಿನಿಮಾಗಳಲ್ಲಿಯೇ ನಟಿಸಿದ್ದಾರೆ ಆದರೆ ಸಮೀರಾಗೆ ದಕ್ಷಿಣ ಭಾರತ ಚಿತ್ರರಂಗ ಹೆಚ್ಚು ಉತ್ತಮ ಎನಿಸಿತಂತೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಸಮೀರಾ ರೆಡ್ಡಿ, ‘ದಕ್ಷಿಣ ಭಾರತೀಯ ಚಿತ್ರರಂಗದಲ್ಲಿನ ನನ್ನ ಅನುಭವ ಅತ್ಯುತ್ತಮವಾಗಿತ್ತು. ಚಿರಂಜೀವಿ, ಜೂನಿಯರ್ ಎನ್‌ಟಿಆರ್, ಸೂರ್ಯ, ಅಜಿತ್ ಮತ್ತು ಮೋಹನ್‌ಲಾಲ್ ಸೇರಿದಂತೆ ಅನೇಕ ಅಗ್ರಗಣ್ಯ ನಟರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರೊಂದಿಗಿನ ನನ್ನ ವೈಯಕ್ತಿಕ ಅನುಭವಗಳು ಅದ್ಭುತವಾಗಿದ್ದವು. ಪ್ರತಿಯೊಬ್ಬರ ವೃತ್ತಿಜೀವನದ ಹಾದಿಯೂ ಭಿನ್ನವಾಗಿರುತ್ತದೆ, ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿನ ನನ್ನ ಅನುಭವವು ಬಾಲಿವುಡ್‌ಗಿಂತಲೂ ಎಷ್ಟೋ ಪಟ್ಟು ಉತ್ತಮವಾಗಿತ್ತು’ ಎಂದಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಅಂಗಳದಿಂದ ಕನ್ನಡಕ್ಕೆ ಬಂದ ಖಳನಟ ಪ್ರಶಾಂತ್

‘ದಕ್ಷಿಣ ಭಾರತದಲ್ಲಿ ನನಗೆ ಸಿಕ್ಕ ಗೌರವ, ಕಲಾತ್ಮಕ ಮೌಲ್ಯ, ಹಣ ಮತ್ತು ಜನಪ್ರಿಯತೆ ಇವೆಲ್ಲವೂ ಹಿಂದಿ ಚಿತ್ರರಂಗದಲ್ಲಿ ನಾನು ಪಡೆದಿದ್ದಕ್ಕಿಂತಲೂ ಬಹಳ ಹೆಚ್ಚಾಗಿದ್ದವು. 18 ವರ್ಷಗಳು ಕಳೆದಿದೆ, ಇಂದಿಗೂ, ದಕ್ಷಿಣ ಭಾರತದ ನನ್ನ ಅಭಿಮಾನಿಗಳಿಂದ ನನಗೆ ಸಿಗುತ್ತಿರುವ ಪ್ರೀತಿ ಮತ್ತು ಗೌರವ ಅಭೂತಪೂರ್ವವಾಗಿದೆ. ಬಾಲಿವುಡ್‌ನ ಒಬ್ಬ ಅಭಿಮಾನಿ ಬಹುಶಃ ‘ಓಹ್ ಹೌದು, ಸಮೀರಾ ರೆಡ್ಡಿ ಅಂತ ಒಬ್ಬರಿದ್ದರು’ ಎಂದು ನೆನಪಿಸಿಕೊಳ್ಳಬಹುದು, ಆದರೆ ದಕ್ಷಿಣ ಭಾರತದ ಅಭಿಮಾನಿಗಳು ಇಂದಿಗೂ ನನ್ನನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ‘ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನೀವು ‘ವಾರಣಮ್ ಆಯಿರಮ್’ ಚಿತ್ರದ ನಮ್ಮ ಮೇಘನಾ’ ಎಂದು ಹೇಳುತ್ತಾರೆ. ನನ್ನ ದಕ್ಷಿಣ ಭಾರತೀಯ ಚಲನಚಿತ್ರಗಳಿಗಾಗಿ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾದ ಸ್ಥಾನವಿರುತ್ತದೆ ಮತ್ತು ನನ್ನ ಮನಸ್ಸಿನಲ್ಲಿ, ನಾನು ಯಾವಾಗಲೂ ಮೊದಲು ಒಬ್ಬ ದಕ್ಷಿಣ ಭಾರತೀಯ ನಟಿ ಎಂದೇ ಪರಿಗಣಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

ಅಂದಹಾಗೆ ಸಮೀರಾ ರೆಡ್ಡಿ ಕೊನೆಯದಾಗಿ ಸಂಜಯ್ ದತ್ ನಿರ್ಮಾಣ ಮಾಡಿ ನಟನೆ ಮಾಡುತ್ತಿರುವ ‘ಆಖಿರಿ ಸವಾಲ್’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. 2013 ರಲ್ಲಿ ಕನ್ನಡದ ‘ವರದನಾಯಕ’ ಸಿನಿಮಾ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು ಸಮೀರಾ, ಬಳಿಕ ಇದೀಗ ‘ಆಖಿರಿ ಸವಾಲ್’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಆ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More