ಬಾಲಿವುಡ್ ಅಂಗಳದಿಂದ ಕನ್ನಡಕ್ಕೆ ಬಂದ ಖಳನಟ ಪ್ರಶಾಂತ್
ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟ-ನಟಿಯರು ಬರುವುದು ಹೊಸದೇನೂ ಅಲ್ಲ. ದಶಕಗಳಿಂದಲೂ ಹಲವಾರು ಬಾಲಿವುಡ್ ನಟ, ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ನಟಿಸುತ್ತಲೇ ಇದ್ದಾರೆ. ಇದೀಗ ಬಾಲಿವುಡ್ ಅಂಗಳದಿಂದ ಹೊಸ ನಟರೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಿರುವ ಯುವ ನಟ ಪ್ರಶಾಂತ್ ಬಜಾಜ್ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದು, ‘ದ್ರೌಪದಿ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

ಮುಖ್ಯಾಂಶಗಳು
- ಕನ್ನಡಕ್ಕೆ ಬಂದ ಬಾಲಿವುಡ್ ನಟ
- ‘ದ್ರೌಪದಿ’ ಸಿನಿಮಾನಲ್ಲಿ ನಟನೆ
- ‘ದ್ರೌಪದಿ’ ಸಿನಿಮಾನಲ್ಲಿ ಬಾಲಿವುಡ್ ಖಳನಟ
ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟ-ನಟಿಯರು ಬರುವುದು ಹೊಸದೇನೂ ಅಲ್ಲ. ದಶಕಗಳಿಂದಲೂ ಹಲವಾರು ಬಾಲಿವುಡ್ ನಟ, ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ನಟಿಸುತ್ತಲೇ ಇದ್ದಾರೆ. ಇದೀಗ ಬಾಲಿವುಡ್ ಅಂಗಳದಿಂದ ಹೊಸ ನಟರೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಿರುವ ಯುವ ನಟ ಪ್ರಶಾಂತ್ ಬಜಾಜ್ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದು, ‘ದ್ರೌಪದಿ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದ ಪ್ರಶಾಂತ್ ಬಜಾಜ್, ನಟನೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಇದೀಗ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖಳನಾಯಕನ ಪಾತ್ರಗಳಿಗೆ ಬೇಕಾದ ಹುರಿಗಟ್ಟಿದ ದೇಹ, ಖಡಕ್ ಮೈಮಾಟ, ಮುಖ, ಆಟಿಟ್ಯೂಡ್ ಹೊಂದಿರುವ ಪ್ರಶಾಂತ್ ಇದೀಗ ಕನ್ನಡ ಸಿನಿಮಾ ‘ದ್ರೌಪದಿ’ಯಲ್ಲಿ ನಟನೆ ಮಾಡಲಿದ್ದಾರೆ. ನಿರ್ಮಾಪಕ ವೆಂಕಟ್ ಗೌಡ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಸಿನಿಮಾನಲ್ಲಿ ಖಳನಟನ ಪಾತ್ರ ಬಹಳ ಪ್ರಮುಖವಾದುದು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪ್ರಶಾಂತ್ ವಿಶೇಷ ತಯಾರಿಯನ್ನೂ ನಡೆಸಿದ್ದಾರಂತೆ.
ಇದನ್ನೂ ಓದಿ:‘ಕನ್ನಡ ಚಿತ್ರರಂಗದ ಭಾಗವಾಗಿರುವದಕ್ಕೆ ಹೆಮ್ಮೆ ಇದೆ’; ಅಮೆರಿಕದಲ್ಲಿ ಹೇಳಿದ ಯಶ್
‘ದ್ರೌಪದಿ’ ಸಿನಿಮಾದ ಜೊತೆಗೆ ಕನ್ನಡದಲ್ಲಿ ಇನ್ನೂ ಎರಡು ಸಿನಿಮಾಗಳಲ್ಲೂ ಪ್ರಶಾಂತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ಒಂದು ಸಿನಿಮಾನಲ್ಲಿ ಯುವ ರಾಜಕೀಯ ಮುಖಂಡನ ಪಾತ್ರವಂತೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುವ ಆಸೆ ಹೊಂದಿರುವ ಪ್ರಶಾಂತ್, ಕನ್ನಡ ಅಷ್ಟೇ ಅಲ್ಲದೆ, ಮಲಯಾಳಂ ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ. ದುಲ್ಖರ್ ಸಲ್ಮಾನ್ ಅವರ ಮುಂಬರುವ ಮಲಯಾಳಂ ಸಿನಿಮಾದಲ್ಲಿಯೂ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿಜಯ್ ಸೇತುಪತಿ ನಟಿಸಿರುವ ತಮಿಳು ಸಿನಿಮಾ ‘ಟ್ರೈನ್’ನಲ್ಲೂ ನಟನೆ ಮಾಡಲಿದ್ದಾರೆ. ಈಗಾಗಲೇ ತೆಲುಗಿನ ಮೆಗಾ ಕುಟುಂಬದ ಹೀರೋ ಸಾಯಿ ಧರಂ ತೇಜ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸುತ್ತಿರುವ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ಬಜಾಜ್ ಈಗಾಗಲೇ ಸನ್ನಿ ಡಿಯೋಲ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಜಾಟ್’ನಲ್ಲಿ ಖಳ ನಟರಾಗಿ ನಟಿಸಿದ್ದಾರೆ. ಈಗ ದಕ್ಷಿಣದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




