‘ಕನ್ನಡ ಚಿತ್ರರಂಗದ ಭಾಗವಾಗಿರುವದಕ್ಕೆ ಹೆಮ್ಮೆ ಇದೆ’; ಅಮೆರಿಕದಲ್ಲಿ ಹೇಳಿದ ಯಶ್
ಲಾಸ್ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆದ ರಾಮಾಯಣ ಚಿತ್ರದ ವಿಶ್ವ ಪ್ರೀಮಿಯರ್‌ನಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಪಾಲ್ಗೊಂಡರು. ರೆಡ್ ಕಾರ್ಪೆಟ್‌ನಲ್ಲಿ ಕಂಗೊಳಿಸಿದ ತಾರೆಯರನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾದ ಮೇಲೆ ಜಾಗತಿಕ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.

ಮುಖ್ಯಾಂಶಗಳು
- ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ಜರುಗಿದ ರಾಮಾಯಣ ಪ್ರೀಮಿಯರ್
- ಕನ್ನಡಿಗನೆಂದು ಹೆಮ್ಮೆಯಿಂದ ಘೋಷಿಸಿದ ಗಣ್ಯ ನಟ ಯಶ್
- ಎಐ ಡಬ್ಬಿಂಗ್ ಗೊಂದಲಕ್ಕೆ ತೆರೆ ಎಳೆದ ಚಿತ್ರತಂಡದ ಸ್ಪಷ್ಟನೆ
ಭಾರತೀಯ ಸಿನಿಮಾರಂಗದ ಅತ್ಯಂತ ನಿರೀಕ್ಷಿತ ಪೌರಾಣಿಕ ಚಿತ್ರ ಎಂದರೆ ಅದು ‘ರಾಮಾಯಣ’. ಈ ಚಿತ್ರದ ವಿಶೇಷ ಪ್ರೀಮಿಯರ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ನೆರವೇರಿತು. ಚಿತ್ರಮಂದಿರ ಸಂಪೂರ್ಣವಾಗಿ ತುಂಬಿತ್ತು. ನಿದೇರ್ಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ಸ್ಟಾರ್ ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಈ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗಿ ಆದರು. ವೇದಿಕೆ ಮೇಲೆ ಯಶ್ ಮಾತನಾಡಿದ್ದಾರೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಅದು ಯಶ್. ರಾಮನ ಪಾತ್ರಧಾರಿ ರಣಬೀರ್ ಕಪೂರ್, ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ವೇದಿಕೆ ಮೇಲೆ ಇದ್ದರೂ ಎಲ್ಲರೂ ಯಶ್ ಎಂದೇ ಕೂಗುತ್ತಿದ್ದರು. ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದರು. ಯಶ್ ಹಾಗೂ ರಾವಣ ಎಂದು ಅಭಿಮಾನಿಗಳು ಕೂಗಿ ಯಶ್ ಅವರನ್ನು ಕರೆದರು.
Yash – Today am proud being a member of KANNADA Film Industry And Indian Film Industry
❤️🔥🫡 @TheNameIsYash
#Yash #YashBOSS #Ramayana https://t.co/1J4hrqAOB7
— Adheera (@adheeraeditz) October 28, 2026
ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಟ ಯಶ್ ಮಾತನಾಡಿದ ಮಾತುಗಳು ಎಲ್ಲರ ಗಮನ ಸೆಳೆದಿವೆ. ‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲೇ ಮಾತು ಆರಂಭಿಸಿದರು. ಆ ಬಳಿಕ ಇಂಗ್ಲಿಷ್ ಭಾಷೆಗೆ ಸ್ವಿ್ ಆದರು. ‘ನಾವು ಬಂದ ನೆಲವನ್ನು ಎಂದಿಗೂ ಮರೆಯಬಾರದು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಭಾಗ ಆಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ‘ರಾಮಾಯಣ’ ಅಬ್ಬರಕ್ಕೆ ಗಾಡ್ಜಿಲ್ಲಾ ಸಿನಿಮಾ ಮುಂದಕ್ಕೆ? ಇದು ಯಶ್ ಚಿತ್ರದ ಅಬ್ಬರ
‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಕೃತಕ ಬುದ್ಧಿಮತ್ತೆ ಅಂದರೆ ಎಐ ಬಳಕೆಯ ಬಗ್ಗೆ ವಿವಾದಗಳು ಹುಟ್ಟಿಕೊಂಡಿವೆ. ಚಿತ್ರದಲ್ಲಿ ಎಐ ಬಳಸಿ ಡಬ್ಬಿಂಗ್ ಮಾಡಲಾಗಿದೆ ಎಂಬ ತಪ್ಪು ತಿಳಿವಳಿಕೆಯಿಂದ ಕೆಲ ಇಂಗ್ಲಿಷ್ ವಿಮರ್ಶಕರು ಶೋ ನೋಡಲು ಬಂದಿಲ್ಲ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ, ಇದು ಸುಳ್ಳು ಎಂಬುದನ್ನು ತಂಡ ಸ್ಪಷ್ಟಪಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




