ಸೆಲೆಬ್ರಿಟಿ ಆಗಿರೋದು ಅಷ್ಟು ಸುಲಭದ ಮಾತಲ್ಲ. ಏನೇ ಮಾಡಿದರೂ ಅದನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಅವರು ನಡೆದುಕೊಂಡ ರೀತಿ ಇಷ್ಟವಾಗದಿದ್ದರೆ ನೇರವಾಗಿ ಟ್ರೋಲ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತದೆ. ಈಗ ನಟಿ ಸಾರಾ ಅಲಿ ಖಾನ್ (Sara Ali Khan) ವಿಚಾರದಲ್ಲೂ ಹೀಗೆಯೇ ಆಗಿದೆ. ಪ್ರ್ಯಾಂಕ್ ಮಾಡೋಕೆ ಹೋಗಿ ಅವರು ಟೀಕೆಗೆ ಗುರಿಯಾಗಿದ್ದಾರೆ. ಸ್ವಿಮ್ಮಿಂಗ್ ಪೂಲ್ ಎದುರಲ್ಲಿ ಸಾರಾ ಪ್ರ್ಯಾಂಕ್ ಮಾಡೋಕೆ ಹೋಗಿದ್ದಾರೆ. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸ್ವಿಮ್ಮಿಂಗ್ ಪೂಲ್ ಒಂದರ ಮೇಲೆ ಸಾರಾ ಅಲಿ ಖಾನ್ ಬಿಕಿನಿ ತೊಟ್ಟು ನಿಂತಿದ್ದರು. ಅವರ ಪಕ್ಕದಲ್ಲಿ ಮತ್ತೊಂದು ಮಹಿಳೆಯೂ ನಿಂತಿದ್ದರು. ಫೋಟೋಗೆ ಪೋಸ್ ಕೊಡುವಂತೆ ನಾಟಕ ಮಾಡಿದ ಸಾರಾ, ಆ ಮಹಿಳೆಯನ್ನು ನೀರಿಗೆ ತಳ್ಳಿದರು. ನಂತರ ತಾವೂ ನೀರಿಗೆ ಇಳಿದಿದ್ದಾರೆ. ಸ್ವಿಮಿಂಗ್ ಪೂಲ್ನಲ್ಲಿ ಆಳ ಇರುವ ಕಡೆ ಆ ಮಹಿಳೆಯನ್ನು ಕರೆದುಕೊಂಡು ಹೋಗುವ ಪ್ರಯತ್ನವನ್ನು ಸಾರಾ ಅಲಿ ಖಾನ್ ಮಾಡಿದರು. ಆದರೆ, ಅದು ಯಶಸ್ವಿ ಆಗಲೇ ಇಲ್ಲ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
‘ಇದೆಂಥಾ ಮಕ್ಕಳಾಟ? ಒಂದೊಮ್ಮೆ ತಳ್ಳುವಾಗ ಆ ಮಹಿಳೆಯ ತಲೆ ಕಟ್ಟೆಗೆ ಹೊಡೆದಿದ್ದರೆ ಏನು ಗತಿ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ನೀವು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ’ ಎಂದು ಪ್ರಶ್ನಿಸಿದ್ದಾರೆ. ‘ಆ ಮಹಿಳೆಗೆ ನೀರಿಗೆ ಇಳಿಯುವ ಆಲೋಚನೆಯೇ ಇರಲಿಲ್ಲ. ಆದರೂ ಅವರನ್ನು ನೀವು ನೀರಿಗೆ ಇಳಿಸಿದ್ದೀರಿ. ನಿಮಗೆ ಏನು ಅನಿಸುತ್ತಿಲ್ಲವೇ? ನಿಮಗೂ ಯಾರಾದರೂ ಇದೇ ರೀತಿ ಮಾಡಿದ್ದರೆ ಹೇಗನಿಸುತ್ತಿತ್ತು’ ಎಂದು ಪ್ರಶ್ನೆ ಮಾಡಲಾಗಿದೆ.
ಮದುವೆ ಬಗ್ಗೆ ಮಾತನಾಡಿದ್ದ ಸಾರಾ:
ಸಾರಾ ಅಲಿ ಖಾನ್ ‘ಅಂತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದಿತ್ತು. ಅಕ್ಷಯ್ ಕುಮಾರ್, ತಮಿಳು ನಟ ಧನುಷ್, ಸಾರಾ ಅಲಿ ಖಾನ್ ಚಿತ್ರದಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಆನಂದ್ ಎಲ್. ರಾಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಅವರು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳುವುದರ ಜತೆಗೆ ಅವರ ಷರತ್ತು ಏನು ಎಂಬುದನ್ನು ಹೇಳಿದ್ದರು. ‘ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜತೆ ಇರಬೇಕು’ ಎಂದಿದ್ದರು ಅವರು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ. ಸೈಫ್ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜತೆ ಇದ್ದಾರೆ. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜತೆ ವಾಸ ಮಾಡಬೇಕು ಎಂಬುದು ಅವರ ಆಸೆ.
ಇದನ್ನೂ ಓದಿ: Sara Ali Khan: ಮಾಲ್ಡೀವ್ಸ್ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್
Published On - 5:05 pm, Fri, 4 February 22