‘ಶರಣಾಗತಿ’ ಟೀಸರ್: ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದರ ಜೀವನಾಧಾರಿತ ಎಐ ಸಿನಿಮಾ

ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದ ಅವರ ಜೀವನಾಧಾರಿತ 'ಶರಣಾಗತಿ' ಹೈಬ್ರಿಡ್ ಎಐ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬೆಂಬಲವಿರುವ ಈ ಚಿತ್ರವು ಎಐ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ಮೂಡಿಬರುತ್ತಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ 'ಹರೇ ಕೃಷ್ಣ ಚಳವಳಿ' ಬೆಳೆದ ಹಾದಿಯನ್ನು ತೆರೆಯ ಮೇಲೆ ಅನಾವರಣಗೊಳಿಸಲಿದೆ.

‘ಶರಣಾಗತಿ’ ಟೀಸರ್: ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದರ ಜೀವನಾಧಾರಿತ ಎಐ ಸಿನಿಮಾ
ಶರಣಾತಿ ಟೀಸರ್
Image Credit source: Hombale Films
Edited By:

Updated on: Nov 10, 2026 | 5:38 PM

ಮುಖ್ಯಾಂಶಗಳು

  • ಇಸ್ಕಾನ್ ಸಂಸ್ಥಾಪಕರ ಕಥೆ
  • ತೆರೆಗೆ ಬರಲಿದೆ ಸ್ವಾಮಿ ಪ್ರಭುಪಾದರ ಜೀವನಾಧಾರಿತ ಸಿನಿಮಾ
  • ತಾಂತ್ರಿಕ ವೈಭವದೊಂದಿಗೆ ಮೂಡಿಬಂದ 'ಶರಣಾಗತಿ'

ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದ ಅವರ ಜೀವನ ಚರಿತ್ರೆ ಆಧರಿಸಿದ ‘ಶರಣಾಗತಿ’ ಸಿನಿಮಾದ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ಹೈಬ್ರಿಡ್ ಎಐ’ ತಾಂತ್ರಿಕತೆಯಲ್ಲಿ ನಿರ್ಮಿಸಲಾಗುತ್ತಿರುವುದು ವಿಶೇಷ. ಕೃತಕ ಬುದ್ಧಿಮತ್ತೆ ಹಾಗೂ ಮಾನವ ಸೃಜನಶೀಲತೆಯ ಸಮ್ಮಿಲನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಆಧ್ಯಾತ್ಮಿಕ ಜಗತ್ತಿನ ಕಥೆಯನ್ನು ತಾಂತ್ರಿಕ ವೈಭವದೊಂದಿಗೆ ಬೆಳ್ಳಿಪರದೆಗೆ ತರಲಾಗುತ್ತಿದೆ.

1965ರಲ್ಲಿ ಸ್ವಾಮಿ ಪ್ರಭುಪಾದ ಅವರು ಅಮೆರಿಕಾಗೆ ನೀಡಿದ ಭೇಟಿಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ‘ಹರೇ ಕೃಷ್ಣ ಚಳವಳಿ’ ಹೇಗೆ ಜನಪ್ರಿಯವಾಯಿತು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. 1970ರಲ್ಲಿ ಪ್ರಭುಪಾದ ಅವರ ಶಿಷ್ಯರಾಗಿದ್ದ ಗೌರ ಶಕ್ತಿ ದಾಸ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರೊಂದಿಗೆ ವಿ ಕೆ ಹಾಗೂ ರುದ್ರ ವೃಕ್ಷ ನಿರ್ದೇಶನ ತಂಡದಲ್ಲಿದ್ದಾರೆ. ರಾಜೇಶ್ ಸಿಂಗ್ ಮತ್ತು ಲೋಹಿತ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Loading...

ಚಿತ್ರದ ದೃಶ್ಯಗಳು ಎಐ ತಂತ್ರಜ್ಞಾನದಿಂದ ರೂಪಿತವಾಗಿವೆ. ಆದರೆ ಸಂಗೀತ ಹಾಗೂ ಶಬ್ದ ಗ್ರಹಣವನ್ನು ಸಾಂಪ್ರದಾಯಿಕ ರೀತಿಯಲ್ಲೇ ಮಾಡಲಾಗಿದೆ. ಮಾನವ ಕಲಾವಿದರ ಚಲನವಲನಗಳನ್ನು ಡಿಜಿಟಲ್ ರೂಪಕ್ಕೆ ತರಲು ‘ಎಐ ಮೋಷನ್ ಕ್ಯಾಪ್ಚರ್’ ಬಳಸಲಾಗಿದೆ. ಈ ತಂತ್ರಜ್ಞಾನವು ತೆರೆಯ ಮೇಲಿನ ಪಾತ್ರಗಳಿಗೆ ನೈಜ ಸ್ಪರ್ಶ ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ.

YouTube video player

ಈ ವಿಶೇಷ ಸಿನಿಮಾಗೆ ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಸಾಥ್ ನೀಡಿದೆ. ಕಾಂತಾರ, ಮಹಾವತಾರ್ ನರಸಿಂಹ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಸಂಸ್ಥೆ ಇದಾಗಿದೆ. ಇತ್ತೀಚೆಗೆ ಯಶಸ್ಸು ಕಂಡಿದ್ದ ‘ಹನುಮಾನ್ ಅಂಶ’ ಸಿನಿಮಾದ ಪ್ರಾದೇಶಿಕ ವಿತರಣೆಯನ್ನೂ ಹೊಂಬಾಳೆ ಫಿಲ್ಮ್ಸ್ ವಹಿಸಿಕೊಂಡಿತ್ತು. ಇದೀಗ ‘ಶರಣಾಗತಿ’ ಚಿತ್ರವನ್ನು ಪ್ರೆಸೆಂಟ್ ಮಾಡುವುದರ ಜೊತೆಗೆ ಹಂಚಿಕೆ ಮಾಡುತ್ತಿದೆ.

ಇದನ್ನೂ ಓದಿ:  ಒಟಿಟಿಗೆ ಬರುತ್ತಿದೆ ‘ಹನುಮಾನ್ ಅಂಶ್’: ಯಾವಾಗ? ಎಲ್ಲಿ ನೋಡಬಹುದು?

ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿತ ‘ಹನುಮಾನ್ ಅಂಶ’ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಆ ಸಿನಿಮಾ 453.26 ಕೋಟಿ ರೂಪಾಯಿ ಗಳಿಸಿತ್ತು. ಈ ಯಶಸ್ಸು ಆಧ್ಯಾತ್ಮಿಕ ಗುರುಗಳ ಜೀವನಾಧಾರಿತ ಸಿನಿಮಾಗಳಿಗೆ ಹೊಸ ಹಾದಿ ತೆರೆದಿದೆ. ಪ್ರಸ್ತುತ ‘ಶರಣಾಗತಿ’ ಸಿನಿಮಾ ಕೂಡ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us