Kartik Aaryan: ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಲಿದೆ ‘ಸತ್ಯಪ್ರೇಮ್​ ಕಿ ಕಥಾ’? ಇಲ್ಲಿದೆ ಬಾಕ್ಸ್​ ಆಫೀಸ್​ ಭವಿಷ್ಯದ ಲೆಕ್ಕಾಚಾರ

Satyaprem Ki Katha: ಕಾರ್ತಿಕ್​ ಆರ್ಯನ್​ ನಟನೆಯ ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದ ಬುಕಿಂಗ್​ಗೆ ಜನರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಆದ್ದರಿಂದ ಚಿತ್ರತಂಡದವರಿಗೆ ಭರವಸೆ ಚಿಗುರಿದೆ.

Kartik Aaryan: ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಲಿದೆ ‘ಸತ್ಯಪ್ರೇಮ್​ ಕಿ ಕಥಾ’? ಇಲ್ಲಿದೆ ಬಾಕ್ಸ್​ ಆಫೀಸ್​ ಭವಿಷ್ಯದ ಲೆಕ್ಕಾಚಾರ
ಕಿಯಾರಾ ಅಡ್ವಾಣಿ, ಕಾರ್ತಿಕ್​ ಆರ್ಯನ್​

Updated on: Jun 28, 2023 | 6:20 PM

ನಟ ಕಾರ್ತಿಕ್​ ಆರ್ಯನ್​ (Kartik Aaryan) ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಬಾಲಿವುಡ್​ನಲ್ಲಿ ಅವರು ಬಹುಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಸ್ಟಾರ್​ ನಟನಾದರೂ ಕೂಡ ಅವರು ಸರಳತೆ ಮರೆತಿಲ್ಲ. ಬಾಲಿವುಡ್​ನ ಮೂವೀ ಮಾಫಿಯಾವನ್ನೂ ಎದುರು ಹಾಕಿಕೊಂಡು ಅವರು ಬೆಳೆದಿದ್ದಾರೆ. 2022ರಲ್ಲಿ ಅವರಿಗೆ ‘ಭೂಲ್​ ಭುಲಯ್ಯ 2’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಸಿಕ್ಕಿತು. ಗಲ್ಲಾಪೆಟ್ಟಿಗೆಯಲ್ಲಿ ಆ ಸಿನಿಮಾ ಮೋಡಿ ಮಾಡಿತು. ಕಿಯಾರಾ ಅಡ್ವಾಣಿ (Kiara Advani) ಮತ್ತು ಕಾರ್ತಿಕ್​ ಆರ್ಯನ್​ ಅವರು ಜೋಡಿಯಾಗಿ ನಟಿಸಿದ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿತು. ಈಗ ಅವರಿಬ್ಬರು ಮತ್ತೆ ಒಂದಾಗಿದ್ದು, ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾದಲ್ಲಿ ನಟಿಸಿದ್ದಾರೆ. ಜೂನ್​ 29ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಇದರ ಬಾಕ್ಸ್​ ಆಫೀಸ್​ ಭವಿಷ್ಯ ಏನಾಗಲಿದೆ ಎಂಬ ಕೌತುಕ ಮೂಡಿದೆ. ಆ ಬಗ್ಗೆ ಫ್ಯಾನ್ಸ್​ ವಲಯದಲ್ಲಿ ಚರ್ಚೆ ಆಗುತ್ತಿದೆ.

‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾಗೆ ಎರಡು ದಿನಗಳ ಹಿಂದೆ ಬುಕಿಂಗ್​ ಶುರುವಾಯಿತು. ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್​ ಆರ್ಯನ್​ ಅವರ ಹಿಟ್​ ಕಾಂಬಿನೇಷನ್​ ಈ ಸಿನಿಮಾದಲ್ಲಿ ಇರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಮನೆ ಮಾಡಿದೆ. ಮೀಡಿಯಂ ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಿದೆ. ಹಾಗಾಗಿ ಒಂದು ಹಂತದ ಕಲೆಕ್ಷನ್​ ಮಾಡಿದರೂ ಕೂಡ ನಿರ್ಮಾಪಕರಿಗೆ ಲಾಭ ಆಗಲಿದೆ. ಬುಕಿಂಗ್​ಗೆ ಜನರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಆದ್ದರಿಂದ ಚಿತ್ರತಂಡದವರಿಗೆ ಭರವಸೆ ಚಿಗುರಿದೆ.

ಇದನ್ನೂ ಓದಿ: Kiara Advani: ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಸಖತ್ ಗ್ಲಾಮರಸ್ ಆಗಿ ಬಂದ ಕಿಯಾರಾ ಅಡ್ವಾಣಿ

ಮೂಲಗಳ ಪ್ರಕಾರ, ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರದ 40 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಬುಕ್​ ಆಗಿವೆ. ಪಿವಿಆರ್​, ಐನಾಕ್ಸ್​ ಮತ್ತು ಸಿನಿಪೊಲಿಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಿಮಾದ ಅಡ್ವಾನ್ಸ್​ ಬುಕಿಂಗ್​ಗೆ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಮೊದಲ ದಿನ ಅಂದಾಜು 8ರಿಂದ 10 ಕೋಟಿ ರೂಪಾಯಿ ಕಲೆಕ್ಷನ್​ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಇದನ್ನೂ ಓದಿ: Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​; ವಿಡಿಯೋ ವೈರಲ್​

ವೀಕೆಂಡ್​ನಲ್ಲಿ ಖಂಡಿತವಾಗಿಯೂ ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾಗೆ ಉತ್ತಮ ಕಮಾಯಿ ಆಗಲಿದೆ ಎಂದು ಟ್ರೇಡ್​ ವಿಶ್ಲೇಷಕರು ಅಂದಾಜಿಸಿದ್ದಾರೆ. ಆದರೆ ಸೋಮವಾರದ ಬಳಿಕ ಯಾವ ರೀತಿ ರೆಸ್ಪಾನ್ಸ್​ ಸಿಗಲಿದೆ ಎಂಬುದು ಮುಖ್ಯವಾಗಲಿದೆ. ಈ ಚಿತ್ರಕ್ಕೆ ಸಮೀರ್​ ವಿದ್ವಾಂಸ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಕಾರ್ತಿಕ್​ ಆರ್ಯನ್​ ಅವರ ಹವಾ ಇನ್ನಷ್ಟು ಹೆಚ್ಚಾಗಲಿದೆ. ಅವರಿಗೆ ಇನ್ನಷ್ಟು ಒಳ್ಳೆಯ ಆಫರ್​ಗಳು ಸಿಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us