
ನಟ ಶಾರುಖ್ ಖಾನ್ (Shah Rukh Khan) ಅವರು ಅಪ್ಪಟ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳು ಇಲ್ಲದಿರುವಾಗ ಅವರು ಕುಟುಂಬದ ಜೊತೆ ಕಾಲ ಕಳೆಯಲು ಬಯಸುತ್ತಾರೆ. 1991ರಲ್ಲಿ ಗೌರಿ ಖಾನ್ (Gauri Khan) ಜೊತೆ ಶಾರುಖ್ ಖಾನ್ ಮದುವೆ ನೆರವೇರಿತು. ಅಂದಿನಿಂದ ಇಂದಿನ ತನಕ ಇವರಿಬ್ಬರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳು. ಮದುವೆ ಆಗಿ 32 ವರ್ಷಗಳು ಕಳೆದ ಬಳಿಕ ಶಾರುಖ್ ಮತ್ತು ಗೌರಿ ಖಾನ್ ಅವರ ಒಂದು ಫೋಟೋ (Shah Rukh Khan Photo) ವೈರಲ್ ಆಗಿದೆ. ಇದು ಅವರ ಹನಿಮೂನ್ ವೇಳೆ ಕ್ಲಿಕ್ಕಿಸಿದ ಫೋಟೋ ಎಂಬುದು ವಿಶೇಷ. ಈ ಕ್ಯೂಟ್ ಫೋಟೋ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂದಹಾಗೆ, ಈ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದು ಶಾರುಖ್ ಖಾನ್ ಅವರ ಸ್ನೇಹಿತ ವಿವೇಕ್ ವಸ್ವಾನಿ. ಗೌರಿ ಖಾನ್ ಮತ್ತು ಶಾರುಖ್ ಖಾನ್ ಅವರು ಮದುವೆಯ ನಂತರದ ದಿನಗಳು ಹೇಗಿತ್ತು ಎಂಬುದನ್ನು ವಿವೇಕ್ ವಿವರಿಸಿದ್ದಾರೆ.
1991 ಎಂದರೆ ಅದು ಶಾರುಖ್ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸಂದರ್ಭ. ಆಗ ‘ರಾಜು ಬನ್ಗಯಾ ಜಂಟಲ್ಮ್ಯಾನ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಮದುವೆ ಬಳಿಕ ಹನಿಮೂನ್ಗೆ ತೆರಳಲು ಶಾರುಖ್ ಖಾನ್ ಅವರಿಗೆ ಸಮಯ ಇರಲಿಲ್ಲ. ಮದುವೆ ಮುಗಿಸಿಕೊಂಡು ಪತ್ನಿ ಸಮೇತರಾಗಿ ಅವರು ‘ರಾಜು ಬನ್ಗಯಾ ಜಂಟಲ್ಮ್ಯಾನ್’ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದರು. ಆಗ ತೆಗೆದ ಫೋಟೋ ಈಗ ವೈರಲ್ ಆಗಿದೆ.
‘ದೆಹಲಿಗೆ ಹೋದೆವು. ಅಲ್ಲಿ ಅವರ ಮದುವೆ ಆಯಿತು. ಅಲ್ಲಿಂದ ನಾವು ಮಧುಮಗಳ ಜೊತೆ ನೇರವಾಗಿ ಡಾರ್ಜಲಿಂಗ್ಗೆ ಬಂದೆವು. ರಾಜು ಬನ್ಗಯಾ ಜಂಟಲ್ಮ್ಯಾನ್ ಚಿತ್ರದ ಮೊದಲ ಹಾಡಿನ ಶೂಟಿಂಗ್ ನಡೆಯುತ್ತಿರುವಾಗಲೇ ಹನಿಮೂನ್’ ಎಂದು ವಿವೇಕ್ ವಸ್ವಾನಿ ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.
ಇದನ್ನೂ ಓದಿ: Gauri Khan: ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಆರೋಪ; ಶಾರುಖ್ ಪತ್ನಿ ಗೌರಿ ಖಾನ್ ಮೇಲೆ ಎಫ್ಐಆರ್ ದಾಖಲು
ಶಾರುಖ್ ಖಾನ್ ಇಂದು ಬಹುಕೋಟಿ ರೂಪಾಯಿ ಒಡೆಯನಾಗಿದ್ದಾರೆ. ಹಲವಾರು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಸಿನಿಮಾಗಳಿಂದ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಆರಂಭದ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆರ್ಯನ್ ಖಾನ್ ಜನಿಸುವುದಕ್ಕೂ ಮುನ್ನ ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ಹೊಸ ಮನೆ ಖರೀದಿಸಿದ್ದರು. ಆಗ ಇಂಟೀರಿಯರ್ ಡಿಸೈನ್ ಮಾಡಿಸಲು ಅವರ ಬಳಿ ಹಣ ಇರಲಿಲ್ಲ. ಹಾಗಾಗಿ ಸ್ವತಃ ಗೌರಿ ಖಾನ್ ಅವರೇ ಒಳಾಂಗಣ ವಿನ್ಯಾಸ ಮಾಡಿದ್ದರು. ನಂತರ ಅದನ್ನೇ ಅವರು ಉದ್ಯೋಗವಾಗಿ ಮಾಡಿಕೊಂಡರು. ಆ ಹಳೇ ದಿನಗಳನ್ನು ಶಾರುಖ್ ಅವರು ಇತ್ತೀಚೆಗೆ ನೆನಪಿಸಿಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.