ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​

ಆ ಒಂದು ವಿಚಾರ ಸಹಿಸಲಾಗದೆ ಶಾರುಖ್​ರನ್ನು​ ಬಿಟ್ಟು ಹೋಗಲು ರೆಡಿ ಆಗಿದ್ದ ಗೌರಿ ಖಾನ್​

ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು.

TV9kannada Web Team

| Edited By: Rajesh Duggumane

Mar 11, 2022 | 1:56 PM

ನಟ ಶಾರುಖ್​ ಖಾನ್​ (Shah Rukh Khan) ಹಾಗೂ ಗೌರಿ ಖಾನ್ (Gouri Khan)​ ಬಾಲಿವುಡ್​ನ ಕ್ಯೂಟ್ ಕಪಲ್​ಗಳಾಗಿದ್ದಾರೆ. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂರು ಮಕ್ಕಳು. ಮಕ್ಕಳನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅಚ್ಚರಿ ಎಂದರೆ, ಶಾರುಖ್​ ಖಾನ್​ ಅವರನ್ನು ಬಿಟ್ಟುಹೋಗಲು ಗೌರಿ ಖಾನ್​ ನಿರ್ಧಾರ ಮಾಡಿದ್ದರು. ಏಕೆಂದರೆ, ಶಾರುಖ್​ ಖಾನ್​ ಅವರು ತುಂಬಾನೇ ಪೊಸೆಸಿವ್​ ಆಗಿದ್ದರು. ಇದರಿಂದ ಗೌರಿ ​ ಬೇಸತ್ತು ಹೋಗಿದ್ದರು. ಈ ಬಗ್ಗೆ ‘ಕಾಫಿ ವಿತ್ ಕರಣ್​ ಶೋ’ನಲ್ಲಿ ಗೌರಿ ಖಾನ್ ಹೇಳಿಕೊಂಡಿದ್ದರು ​. ಹೃತಿಕ್​ ರೋಷನ್​​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಜತೆ ‘ಕಾಫಿ ವಿತ್​ ಕರಣ್​’ (Coffee With Karan)ಶೋನಲ್ಲಿ ಗೌರಿ ಪಾಲ್ಗೊಂಡಿದ್ದರು. ಈ ಎಪಿಸೋಡ್​ನಲ್ಲಿ ಅವರು ಶಾರುಖ್​ ಖಾನ್​ ಬಗ್ಗೆ ಮಾತನಾಡಿದ್ದರು. ಅಲ್ಲದೆ, ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದರು. ‘ನನಗೆ ಆಗಿನ್ನೂ ಹದಿನಾಲ್ಕುವರೆ ವರ್ಷ. ನನಗೆ ಬೇರೆ ಯಾವುದೇ ರಿಲೇಶನ್​ಶಿಪ್​ ಇರಲಿಲ್ಲ. ಆದರೆ, ಮದುವೆ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಸು ನನಗೆ ಆಗಿರಲ್ಲ’ ಎಂದಿದ್ದರು ಗೌರಿ.

‘ನಾನು ಒಂದು ಬ್ರೇಕ್​ ಪಡೆದುಕೊಂಡೆ. ಗೆಳೆಯರ ಜತೆ ಹೆಚ್ಚು ಸಮಯ ಕಳೆದೆ. ಶಾರುಖ್​ ತುಂಬಾನೇ ಪೊಸೆಸಿವ್​ ಆಗಿದ್ದರು. ನನ್ನ ಬಳಿ ಇದನ್ನು ಹ್ಯಾಂಡಲ್​ ಮಾಡೋಕೆ ಆಗುವುದಿಲ್ಲ ಎಂದುಕೊಂಡಿದ್ದೆ. ನನಗೆ ನನ್ನದೇ ಸ್ಪೇಸ್​ ಬೇಕು ಅನಿಸಿತು. ಆದರೆ, ಮತ್ತೆ ಅವರ ಬಳಿಯೇ ತೆರಳಿದೆ’ ಎಂದು ಗೌರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಶಾರುಖ್​ ಖಾನ್​ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಪತ್ನಿ ಗೌರಿ ಖಾನ್​ ಬಗ್ಗೆ ತಾವು ತುಂಬಾನೇ ಪೊಸೆಸಿವ್​ ಆಗಿರುವ ಬಗ್ಗೆ ಹೇಳಿದ್ದರು. ‘ಗೌರಿ ಪಾಲಕರಿಗೆ ನಾನು ಇಷ್ಟವಾಗಿರಲಿಲ್ಲ. ಹೀಗಾಗಿ ಅವರು ನನ್ನ ಪ್ರಪೋಸಲ್​ ರಿಜೆಕ್ಟ್​ ಮಾಡಿದ್ದರು’ ಎಂದು ಶಾರುಖ್​ ಹೇಳಿರುವುದಾಗಿ ದಿ ಇಂಡಿಯನ್​ ಎಕ್ಸ್​ಪ್ರೆಸ್ ಈ ಮೊದಲು ವರದಿ ಮಾಡಿತ್ತು.

ಬ್ರೇಕ್​ ಪಡೆದ ನಂತರದಲ್ಲಿ ಗೌರಿ ಖಾನ್​ಗೆ ಶಾರುಖ್​ ಮತ್ತೆ ಪ್ರಪೋಸ್​ ಮಾಡಿದ್ದರು. ಆಗಲೂ ಅವರು ಇದನ್ನು ರಿಜೆಕ್ಟ್​ ಮಾಡಿದ್ದರು. ಆದರೆ, ಶಾರುಖ್​ ಖಾನ್​ ತಾಯಿ ಮೃತಪಟ್ಟಾಗ ಗೌರಿ ಮರಳಿ ಬಂದರು ಮತ್ತು ಶಾರುಖ್​ ಅವರನ್ನು ಮದುವೆ ಆಗೋಕೆ ಒಪ್ಪಿದರು.  1991ರಲ್ಲಿ ಅಕ್ಟೋಬರ್​ನಲ್ಲಿ ಇಬ್ಬರೂ ಮದುವೆ ಆದರು. ಈ ದಂಪತಿಗೆ ಸುಹಾನಾ, ಆರ್ಯನ್​ ಹಾಗೂ ಅಬ್ರಾಮ್​ ಹೆಸರಿನ ಮಕ್ಕಳಿದ್ದಾರೆ.

ಶಾರುಖ್​ ಖಾನ್​ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಸೋಲುಗಳನ್ನು ಕಂಡಿದ್ದಾರೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ಈಗ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರು ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಕೇಳಿಸಿದೆ. ಆದರೆ ಲುಕ್​ ಬಹಿರಂಗ ಆಗಿಲ್ಲ. 2023ರ ಜ.25ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ: ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?

80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

Follow us on

Related Stories

Most Read Stories

Click on your DTH Provider to Add TV9 Kannada