AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಶಿಲ್ಪಾ ಶೆಟ್ಟಿಗೆ ಮುಗಿಯದ ಸಂಕಷ್ಟ; ₹ 21 ಲಕ್ಷ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಕುಟುಂಬ, ಮೇಲ್ಮನವಿ ಸಲ್ಲಿಕೆ

Shamita Shetty | Sunanda Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ವಂಚನೆ ಪ್ರಕರಣವೊಂದರಲ್ಲಿ ಶಿಲ್ಪಾ, ಶಮಿತಾ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ವಿವರ ಇಲ್ಲಿದೆ.

Shilpa Shetty: ಶಿಲ್ಪಾ ಶೆಟ್ಟಿಗೆ ಮುಗಿಯದ ಸಂಕಷ್ಟ; ₹ 21 ಲಕ್ಷ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಕುಟುಂಬ, ಮೇಲ್ಮನವಿ ಸಲ್ಲಿಕೆ
ಶಿಲ್ಪಾ ಶೆಟ್ಟಿ, ಸುನಂದಾ ಶೆಟ್ಟಿ, ಶಮಿತಾ ಶೆಟ್ಟಿ
TV9 Web
| Edited By: |

Updated on:Mar 11, 2022 | 6:07 PM

Share

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ (Shilpa Shetty) ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ವಂಚನೆ ಪ್ರಕರಣದಲ್ಲಿ ಶಿಲ್ಪಾ ಅವರ ಕುಟುಂಬದ ಹೆಸರು ಕೇಳಿಬಂದಿತ್ತು. ಶೆಟ್ಟಿ ಕುಟುಂಬವು ಪಡೆದಿದ್ದ 21 ಲಕ್ಷ ರೂ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಆಟೋಮೊಬೈಲ್ ಡೀಲರ್ ಓರ್ವರು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ, ಅವರ ಸಹೋದರಿ ಶಮಿತಾ ಶೆಟ್ಟಿ (Shamita Shetty) ಮತ್ತು ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಂಚನೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಇದೀಗ ನಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿಯ ದೂರನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಝಡ್.ಖಾನ್ ಅವರು ಡೀಲರ್ ಪರ್ಷದ್ ಫಿರೋಜ್ ಅಮ್ರಾ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ಮುಂದಿನ ವಿಚಾರಣೆಯನ್ನು ಮಾರ್ಚ್ 14 ಕ್ಕೆ ಮುಂದೂಡಿದ್ದಾರೆ.

ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಯಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ. ಶಿಲ್ಪಾ ಹಾಗೂ ಶಮಿತಾ ಅವರಿಂದ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಇಂತಹ ಮೊಕದ್ದಮೆಗಳನ್ನು ಹಾಕಲಾಗಿದೆ ಎಂದು ನಟಿ ಹೇಳಿದ್ದಾರೆ.

‘ಪ್ರಸ್ತುತ ಪ್ರತಿವಾದಿಯು (ಫಿರೋಜ್ ಆಮ್ರಾ) ದಾಖಲಿಸಿರುವ ದೂರು ಸುಲಿಗೆಗಿಂತ ಭಿನ್ನವಲ್ಲ. ನಟಿಯರ ಸಾರ್ವಜನಿಕ ಸ್ಥಾನಮಾನವನ್ನು, ಖ್ಯಾತಿಯನ್ನು ಕೆಡಿಸಿ ಅವರ ಸ್ಥಾನಮಾನಕ್ಕೆ ಸಂಚಕಾರ ತರುವ ಉದ್ದೇಶದಿಂದ ಇಂತಹ ದೂರು ದಾಖಲಿಸಲಾಗಿದೆ’ ಎಂದು ಶಿಲ್ಪಾ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ‘ದೂರುದಾರರು ದಾಖಲಿಸಿರುವ ದೂರು ಕಾಲ್ಪನಿಕವಾಗಿದ್ದು, ಯಾವುದೇ ಸಾಕ್ಷ್ಯಗಳನ್ನು ಹೊಂದಿಲ್ಲ ಎಂದೂ ಶಿಲ್ಪಾ ಹೇಳಿದ್ದಾರೆ.

ಪ್ರಕರಣ ಹಿನ್ನೆಲೆಯೇನು?

ಆಟೋಮೊಬೈಲ್ ಸಂಸ್ಥೆಯೊಂದರ ಮಾಲೀಕರಾದ ಫಿರೋಜ್ ಆಮ್ರಾ ತಮ್ಮ ಕಾನೂನು ಸಂಸ್ಥೆಯಾದ M/s Y & A Legal ಮೂಲಕ ಶಿಲ್ಪಾ ಸೇರಿ ಮೂವರ ವಿರುದ್ಧ ಮೊದಲಿಗೆ ದೂರು ದಾಖಲಿಸಿದ್ದರು. ಉದ್ಯಮಿ ನೀಡಿದ್ದ ದೂರಿನ ಪ್ರಕಾರ, ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ ಶೆಟ್ಟಿ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಅದನ್ನು 2017ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ, ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ ಎನ್ನಲಾಗಿತ್ತು.

ಸುರೇಂದ್ರ ಅವರು ವರ್ಷಕ್ಕೆ 18% ಬಡ್ಡಿದರದಲ್ಲಿ ಸಾಲ ಪಡೆದಿದ್ದರು ಎಂದು ಇಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿತ್ತು. ಸುರೇಂದ್ರ ಕಂಪನಿ ಪರವಾಗಿ ಚೆಕ್ ಬರೆದಿದ್ದು, ಸಾಲದ ವಿಚಾರ ಅವರ ಪುತ್ರಿಯರು ಮತ್ತು ಪತ್ನಿಗೆ ತಿಳಿದಿತ್ತು. ಸಾಲ ಮರುಪಾವತಿ ಮಾಡುವ ಮುನ್ನವೇ ಸುರೇಂದ್ರ ತೀರಿಕೊಂಡಿದ್ದರಿಂದ ಅದನ್ನು ತೀರಿಸುವ ಹೊಣೆಗಾರಿಕೆ ಕುಟುಂಬದ್ದಾಯಿತು. ಆದರೆ ಹಣ ಪಡೆದಿದ್ದನ್ನೂ ಶೆಟ್ಟಿ ಕುಟಂಬದವರು ನಿರಾಕರಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ:

‘ಯುವರತ್ನ’ ನಾಯಕಿಗೆ ವಿವಾಹ ವಾರ್ಷಿಕೋತ್ಸವ; ಸಂತಸ ಹಂಚಿಕೊಂಡ ಸಾಯೇಶಾ

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದ ಅರ್ಚನಾ ಗೌತಮ್​ಗೆ ಒಲಿಯದ ಮತದಾರ; ನಟಿಗೆ ಲಭಿಸಿದ ಮತಗಳೆಷ್ಟು?

Published On - 6:04 pm, Fri, 11 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್