ಅಕ್ಷಯ್​ ಕುಮಾರ್​ ಸಿನಿಮಾಗಳು ಸೋಲೋದೇ ಇಲ್ಲ; ಯಾಕೆ ಎಂಬುದರ ಸೀಕ್ರೆಟ್​ ತೆರೆದಿಟ್ಟ ಬಾಲಿವುಡ್​ ಕಿಲಾಡಿ

‘ಚಿತ್ರೀಕರಣಕ್ಕೆ 100 ದಿನಗಳಿಗಿಂತಲೂ ಹೆಚ್ಚು ಸಮಯ ಬೇಡುವ ಯಾವುದೇ ಚಿತ್ರದಲ್ಲಿ ನಾನು ನಟಿಸಲು ಸಾಧ್ಯವಿಲ್ಲ. ನಾನು ಮೆತಡ್​ ಆ್ಯಕ್ಟರ್​ ಅಲ್ಲ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ಸಿನಿಮಾಗಳು ಸೋಲೋದೇ ಇಲ್ಲ; ಯಾಕೆ ಎಂಬುದರ ಸೀಕ್ರೆಟ್​ ತೆರೆದಿಟ್ಟ ಬಾಲಿವುಡ್​ ಕಿಲಾಡಿ
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 12, 2022 | 8:19 AM

ಹಿಂದಿ ಚಿತ್ರರಂಗದಲ್ಲಿ ನಟ ಅಕ್ಷಯ್​ ಕುಮಾರ್​ (Akshay Kumar) ಅವರನ್ನು ಸದ್ಯಕ್ಕೆ ಸೋಲಿಲ್ಲದ ಸರದಾರ ಅಂತ ಕರೆಯಬಹುದು. ಅವರು ನಟಿಸಿದ ಎಲ್ಲ ಸಿನಿಮಾಗಳು ಸೂಪರ್​ ಹಿಟ್​ ಆಗುತ್ತವೆ. ಕೆಲವು ಚಿತ್ರಗಳು ಮಿನಿಮಮ್​ ಬಿಸ್ನೆಸ್​ ಖಂಡಿತಾ ಮಾಡುತ್ತವೆ. ಆದರೆ ಸೋಲುವ ಮಾತು ಇಲ್ಲವೇ ಇಲ್ಲ. ಅವರನ್ನು ಕಂಡು ಬೇರೆ ಹೀರೋಗಳಿಗೆ ಅಚ್ಚರಿ ಆಗುತ್ತದೆ. ಅಕ್ಷಯ್​ ಕುಮಾರ್​ ನಟನೆಯ ಸಿನಿಮಾ (Akshay Kumar Movies) ಮೇಲೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂದು ನಿರ್ಮಾಪಕರು ಭರವಸೆ ಹೊಂದಿದ್ದಾರೆ. ಪ್ರತಿ ವರ್ಷ ಅಕ್ಷಯ್​ ಕುಮಾರ್​ ನಟನೆಯ ಕನಿಷ್ಠ ಮೂರರಿಂದ ನಾಲ್ಕು ಸಿನಿಮಾಗಳು ರಿಲೀಸ್​ ಆಗುತ್ತವೆ. ಈಗ ಅವರು ‘ಬಚ್ಚನ್​ ಪಾಂಡೆ’ (Bachchan Pandey Movie) ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಆ ಸಲುವಾಗಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ‘ಪಿಂಕ್​ವಿಲ್ಲಾ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಿನಿಮಾಗಳ ಗೆಲುವಿನ ಸೀಕ್ರೆಟ್​ ಏನು ಎಂಬುದನ್ನು ಅಕ್ಷಯ್​ ಕುಮಾರ್​ ಬಾಯಿಬಿಟ್ಟಿದ್ದಾರೆ. ಈ ಸೂತ್ರವನ್ನು ಅನುಸರಿಸಿದರೆ ಬೇರೆ ಹೀರೋಗಳು ಕೂಡ ಆರಾಮಾಗಿ ಗೆಲವು ಕಾಣಬಹುದು. ಹಾಗಾದರೆ ಅಕ್ಷಯ್​ ಕುಮಾರ್​ ಅವರ ಸೀಕ್ರೆಟ್​ ಏನು? ತಿಳಿದುಕೊಳ್ಳಲು ಈ ಸ್ಟೋರಿ ಓದಿ..

ಸಮಯಕ್ಕೆ ಅಕ್ಷಯ್​ ಕುಮಾರ್ ಅವರು ತುಂಬ ಗೌರವ ನೀಡುತ್ತಾರೆ. ಸರಿಯಾದ ಸಮಯಕ್ಕೆ ಅವರು ಸೆಟ್​ಗೆ ಬರುತ್ತಾರೆ. ಪ್ರತಿ ದಿನ ಅಂದುಕೊಂಡ ಸಮಯಕ್ಕೆ ಸರಿಯಾಗಿ ಶೂಟಿಂಗ್​ ಮುಗಿಯಬೇಕು ಎಂದು ಕಂಡೀಷನ್​ ಹಾಕುತ್ತಾರೆ. ಈ ಶಿಸ್ತನ್ನು ಅವರು ಮೊದಲಿನಿಂದಲೂ ಪಾಲಿಸುತ್ತಾ ಬಂದಿದ್ದಾರೆ. ಬಜೆಟ್​ ಮತ್ತು ಕಾಲ್​ಶೀಟ್​ ವಿಚಾರದಲ್ಲಿಯೂ ಅಕ್ಷಯ್​ ಕುಮಾರ್​ ಅವರು ಒಂದಷ್ಟು ಷರತ್ತುಗಳನ್ನು ಹಾಕಿಕೊಂಡಿದ್ದಾರೆ.

‘ಬಜೆಟ್​ ಹಿಟ್ ಆದರೆ ಸಿನಿಮಾ ಕೂಡ ಹಿಟ್​ ಆಗುತ್ತದೆ ಎಂಬ ಮಾತನ್ನು ನಾನು ಬಲವಾಗಿ ನಂಬುತ್ತೇನೆ. ನಾನು ಹಣ ವ್ಯರ್ಥ ಮಾಡುವುದಿಲ್ಲ ಮತ್ತು ಎಲ್ಲರ ಸಮಯಕ್ಕೆ ಗೌರವ ಕೊಡುತ್ತೇನೆ. ನನ್ನ ಜೊತೆ ಕೆಲಸ ಮಾಡುವ ಕಲಾವಿದರು ಮತ್ತು ತಂತ್ರಜ್ಞರ ಸಮಯವನ್ನು ನಾನು ಗೌರವಿಸುತ್ತೇನೆ. ಅದಕ್ಕೆ ಪ್ರತಿಯಾಗಿ, ಸಮಯ ಕೂಡ ನನಗೆ ಗೌರವ ನೀಡುತ್ತದೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘45ರಿಂದ 50 ದಿನಗಳಿಗೂ ಹೆಚ್ಚು ಕಾಲ ಯಾವುದೇ ಸಿನಿಮಾದ ಶೂಟಿಂಗ್ ಮಾಡಬಾರದು. ಆಗ ಬಜೆಟ್​ ನಮ್ಮ ಹಿಡಿತದಲ್ಲಿ ಇರುತ್ತದೆ. ಚಿತ್ರೀಕರಣಕ್ಕೆ 100 ದಿನಗಳಿಗಿಂತಲೂ ಹೆಚ್ಚು ಸಮಯವನ್ನು ಬೇಡುವ ಯಾವುದೇ ಸಿನಿಮಾದಲ್ಲಿ ನಾನು ನಟಿಸಲು ಸಾಧ್ಯವಿಲ್ಲ. ನಾನು ಮೆತಡ್​ ಆ್ಯಕ್ಟರ್​ ಅಲ್ಲ. ಶೂಟಿಂಗ್​ ವೇಳೆ ನಟಿಸಬೇಕು, ನಂತರ ಮನೆಗೆ ಹೋಗಬೇಕು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಸದ್ಯ ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ಸ್ಟಾರ್​ ನಟ ಎಂದರೆ ಅದು ಅಕ್ಷಯ್​ ಕುಮಾರ್ ಮಾತ್ರ. ಈಗ ಅವರು ‘ಬಚ್ಚನ್​ ಪಾಂಡೆ’ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರ ಮಾ.18ರಂದು ರಿಲೀಸ್​ ಆಗಲಿದೆ. 2022ರಲ್ಲಿ ತೆರೆಕಾಣುತ್ತಿರುವ ಅಕ್ಷಯ್​ ಕುಮಾರ್​ ಅವರ ಮೊದಲ ಸಿನಿಮಾ ಇದು. ಆ ಕಾರಣದಿಂದ ಹೈಪ್​ ಸೃಷ್ಟಿ ಆಗಿದೆ. ಅಲ್ಲದೇ ಟ್ರೇಲರ್ ಕೂಡ ಸಖತ್​ ನಿರೀಕ್ಷೆ ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಅಕ್ಷಯ್​ ಕುಮಾರ್​ ಅವರು ‘ರಾಮ್​ ಸೇತು’ ಸಿನಿಮಾದ ಶೂಟಿಂಗ್​ ಮುಗಿಸಿದ್ದಾರೆ. ‘ಗೋರ್ಖ’, ‘ಪೃಥ್ವಿರಾಜ್​’, ‘ರಕ್ಷಾ ಬಂಧನ್​’, ‘ಓಹ್​ ಮೈ ಗಾಡ್​ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

175 ಕೋಟಿ ರೂ. ಎದುರಿಗಿಟ್ಟರೂ ಆಫರ್​ ಒಪ್ಪಲಿಲ್ಲ ಅಕ್ಷಯ್​ ಕುಮಾರ್​; ಇದು ‘ಬಚ್ಚನ್​ ಪಾಂಡೆ’ ತಾಕತ್ತು

ಗೋಮಾತೆ ಜೊತೆ ಅಕ್ಷಯ್​ ಕುಮಾರ್​ ಪುತ್ರಿ; ಮಕ್ಕಳಿಗೆ ಈ ಅನುಭವ ಬೇಕು ಎಂದ ಸ್ಟಾರ್​ ನಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ