ತಮಗಿಂತ ಎತ್ತರ ಇರುವ ಹೆಂಡ್ತಿ ಜತೆ ಹೈಟ್ ಮ್ಯಾಚ್ ಮಾಡಲು ಕಷ್ಟಪಟ್ಟ ಹಿಮೇಶ್; ಸಿಕ್ಕಾಪಟ್ಟೆ ಟ್ರೋಲ್
ಹಿಮೇಶ್ ರೇಷಮಿಯಾ ಮತ್ತು ಅವರ ಪತ್ನಿ ಸೋನಿಯಾ ಕಪೂರ್ ಜೊತೆಯಾಗಿ ಪೋಸ್ ನೀಡಿದ್ದಾರೆ. ಈ ವೇಳೆ ಪತ್ನಿಯ ಹೈಟ್ಗೆ ಮ್ಯಾಚ್ ಮಾಡಲು ಹಿಮೇಶ್ ಅವರು ಕಷ್ಟಪಟ್ಟಿದ್ದಾರೆ.
ಗಾಯಕ, ಸಂಗೀತ ನಿರ್ದೇಶಕ ಕಮ್ ನಟ ಹಿಮೇಶ್ ರೇಷಮಿಯಾ (Himesh Reshammiya) ಒಂದು ಕಾಲದಲ್ಲಿ ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ತಮ್ಮ ವಿಶೇಷ ಕಂಠದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಿಮೇಶ್ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಈಗ ಅವರೊಂದು ಸಿಲ್ಲಿ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಸೆಲೆಬ್ರಿಟಿಗಳು ಎಲ್ಲಿ ಹೋದರೂ ಕೂಡ ಅವರನ್ನು ಪಾಪರಾಜಿಗಳು ಹಿಂಬಾಲಿಸುತ್ತಾರೆ. ಸೆಲೆಬ್ರಿಟಿಗಳ ಮೇಲೆ ಯಾವಾಗಲೂ ಕ್ಯಾಮೆರಾ ಕಣ್ಣು ಇರುತ್ತದೆ. ಹಾಗಾಗಿ ನಟ-ನಟಿಯರು ರಿಯಲ್ ಲೈಫ್ನಲ್ಲಿ ಮಾಡುವ ಚಿಕ್ಕ-ಪುಟ್ಟ ತಪ್ಪುಗಳನ್ನು ಕೂಡ ಜನರು ಗಮನಿಸುತ್ತಾರೆ. ಹಿಮೇಶ್ ರೇಷಮಿಯಾ ಅವರು ಇತ್ತೀಚೆಗೆ ಪತ್ನಿ ಸೋನಿಯಾ ಕಪೂರ್ (Sonia Kapoor) ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಹಿಂದಿ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸೋನಿಯಾ ಆ್ಯಕ್ಟೀವ್ ಆಗಿದ್ದಾರೆ. 2018ರಲ್ಲಿ ಅವರು ಹಿಮೇಶ್ ಜೊತೆ ದಾಂಪತ್ಯ ಜೀವನ ಆರಂಭಿಸಿದರು. ವಿಶೇಷ ಏನೆಂದರೆ ಹಿಮೇಶ್ ಅವರಿಗಿಂತಲೂ ಸೋನಿಯಾ ಕಪೂರ್ ಎತ್ತರ ಇದ್ದಾರೆ. ಅದು ಕೆಲವೊಮ್ಮೆ ಹಿಮೇಶ್ಗೆ ಇರಿಸುಮುರಿಸು ಉಂಟು ಮಾಡುತ್ತದೆ. ಅದಕ್ಕೆ ಲೇಟೆಸ್ಟ್ ಉಹಾಹರಣೆ ಎಂಬಂತೆ ಈಗೊಂದು ಘಟನೆ ನಡೆದಿದೆ. ಅದರ ವಿಡಿಯೋ ಕೂಡ ವೈರಲ್ (Viral Video) ಆಗುತ್ತಿದ್ದು, ಹಿಮೇಶ್ಗೆ ನೆಟ್ಟಿಗರು ಕಿವಿ ಹಿಂಡುತ್ತಿದ್ದಾರೆ. ಅಲ್ಲದೇ ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಪಾಪರಾಜಿ ಕ್ಯಾಮೆರಾಗಳಿಗೆ ಹಿಮೇಶ್ ರೇಷಮಿಯಾ ಮತ್ತು ಅವರ ಪತ್ನಿ ಸೋನಿಯಾ ಕಪೂರ್ ಜೊತೆಯಾಗಿ ಪೋಸ್ ನೀಡಿದ್ದಾರೆ. ಈ ವೇಳೆ ಪತ್ನಿಯ ಹೈಟ್ಗೆ ಮ್ಯಾಚ್ ಮಾಡಲು ಹಿಮೇಶ್ ಅವರು ಕಷ್ಟಪಟ್ಟಿದ್ದಾರೆ. ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವಾಗ ಹಿಮೇಶ್ ತುದಿಗಾಲಿನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಹೈಟ್ ವಿಚಾರದಲ್ಲಿ ಹಿಮೇಶ್ಗೆ ಇರುವ ಅಭದ್ರತೆಯ ಭಾವನೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.
ಕೆಲವು ಹಾಲಿವುಡ್ ತಾರೆಯ ಉದಾಹರಣೆಯನ್ನು ನೀಡಿ, ಅವರಿಂದ ಕಲಿಯುವಂತೆ ಹಿಮೇಶ್ಗೆ ಜನರು ಕಿವಿ ಹಿಂಡಿದ್ದಾರೆ. ಮಾಜಿ ದಂಪತಿಗಳಾದ ಟಾಮ್ ಕ್ರೂಸ್ ಮತ್ತು ನಿಕೋಲ್ ಕಿಡ್ಮನ್ ನಡುವೆ ಇದೇ ರೀತಿ ಹೈಟ್ ವ್ಯತ್ಯಾಸ ಇದೆ. ಆದರೆ ಟಾಮ್ ಕ್ರೂಸ್ ಎಂದಿಗೂ ಹಿಮೇಶ್ ರೀತಿ ವರ್ತಿಸಿಲ್ಲ. ‘ಸ್ಪೈಡರ್ ಮ್ಯಾನ್’ ಜೋಡಿ ಟಾಮ್ ಹಾಲೆಂಡ್ ಮತ್ತು ಝೆಂಡೆಯಾ ರಿಲೇಷನ್ಶಿಪ್ನಲ್ಲಿ ಇದ್ದಾರೆ. ನಟಿ ಝೆಂಡೆಯಾ ಕೂಡ ಟಾಮ್ ಹಾಲೆಂಡ್ಗಿಂತ ಎತ್ತರ ಇದ್ದಾರೆ. ಅದರಿಂದ ಟಾಮ್ಗೆ ಎಂದಿಗೂ ಅಭದ್ರತೆಯ ಭಾವ ಕಾಡಿಲ್ಲ ಎಂಬ ವಿಚಾರವನ್ನು ಕಮೆಂಟ್ಗಳ ಮೂಲಕ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
‘ಹಿಮೇಶ್ ರೇಷಮಿಯಾ ಯಾಕೆ ಹೀಗೆ ಮಾಡ್ತಾರೆ? ಹೇಗೆ ಇದೆಯೋ ಹಾಗೆಯೇ ಒಪ್ಪಿಕೊಳ್ಳಬೇಕು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಗಂಡನಿಗಿಂತ ಹೆಂಡತಿ ಹೈಟ್ ಇದ್ದರೆ ತಪ್ಪೇನು? ಅದರಿಂದ ಅಭದ್ರತೆ ಯಾಕೆ ಕಾಡಬೇಕು?’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಈ ಯಾವ ಪ್ರಶ್ನೆಗಳಿಗೂ ಹಿಮೇಶ್ ರೇಷಮಿಯಾ ಸದ್ಯಕ್ಕೆ ಉತ್ತರ ನೀಡಿಲ್ಲ.
When your wife/Partner is Taller than you. ????https://t.co/1Qr4Yd3Gzx pic.twitter.com/n4KFYmI709
— Raman (@Dhuandhaar) March 11, 2022
ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ಮಾತ್ರವಲ್ಲದೇ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕೂಡ ಹಿಮೇಶ್ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದಶಕಗಳ ಹಿಂದೆ ಸ್ವಂತ ಮ್ಯೂಸಿಕ್ ವಿಡಿಯೋಗಳ ಮೂಲಕವೂ ಅವರು ಟ್ರೆಂಡ್ ಸೃಷ್ಟಿ ಮಾಡಿದ್ದರು. ‘ಆಪ್ ಕಾ ಸುರೂರ್’, ‘ಕರ್ಝ್’, ‘ರೇಡಿಯೋ’, ‘ಎಕ್ಸ್ ಪೋಸ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ:
‘ಮೆಹಬೂಬಾ..’ ಹಾಡಿಗೆ ಅತೀ ಕೆಟ್ಟದಾಗಿ ಡಾನ್ಸ್ ಮಾಡಿದ ರಾನು ಮಂಡಲ್; ನೆಟ್ಟಿಗರಿಂದ ಛೀಮಾರಿ
Ranu Mondal: ರಾನು ಮಂಡಲ್ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್ ಮಾಡುತ್ತಿರುವ ನೆಟ್ಟಿಗರು