ಗೋಮಾತೆ ಜೊತೆ ಅಕ್ಷಯ್​ ಕುಮಾರ್​ ಪುತ್ರಿ; ಮಕ್ಕಳಿಗೆ ಈ ಅನುಭವ ಬೇಕು ಎಂದ ಸ್ಟಾರ್​ ನಟ

ಗೋಮಾತೆ ಜೊತೆ ಅಕ್ಷಯ್​ ಕುಮಾರ್​ ಪುತ್ರಿ; ಮಕ್ಕಳಿಗೆ ಈ ಅನುಭವ ಬೇಕು ಎಂದ ಸ್ಟಾರ್​ ನಟ
ಮಗಳು ನಿತಾರಾ ಜೊತೆ ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​ ಪುತ್ರಿ ನಿತಾರಾಗೆ 9 ವರ್ಷ ವಯಸ್ಸು. ಮಗಳ ಜೊತೆಯಲ್ಲಿ ಅಕ್ಕಿ ಈಗ ಹಾಲಿಡೇ ಎಂಜಾಯ್​ ​ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Jan 17, 2022 | 12:55 PM

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳ ಜೊತೆಗೆ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಶೂಟಿಂಗ್​ ವೇಳಾಪಟ್ಟಿ ವಿಚಾರದಲ್ಲಿ ಅವರು ತುಂಬ ಕಟ್ಟುನಿಟ್ಟು. ಸರಿಯಾದ ಸಮಯಕ್ಕೆ ಚಿತ್ರೀಕರಣ ಶುರುವಾಗಬೇಕು, ಸರಿಯಾದ ಸಮಯಕ್ಕೆ ಪ್ಯಾಕಪ್​ ಆಗಬೇಕು. ಅದು ಅಕ್ಷಯ್​ ಕುಮಾರ್ ಪಾಲಿಸಿ. ಹಾಗಾಗಿ ಬಹಳ ಫಾಸ್ಟ್​ ಆಗಿ ಅವರ ಸಿನಿಮಾಗಳು ತಯಾರಾಗುತ್ತವೆ. ಇನ್ನುಳಿದ ಸಮಯವನ್ನು ಅವರು​ ಕುಟುಂಬದವರಿಗಾಗಿ (Akshay Kumar Family) ಮೀಸಲಿಡುತ್ತಾರೆ. ಈಗ ಅವರು ಪುತ್ರಿ ನಿತಾರಾ ಜೊತೆ ಕಾಲ ಕಳೆಯುತ್ತಿದ್ದಾರೆ. ಸದ್ಯ ಅವರು ರಣಥಂಬೋರ್​ ರಾಷ್ಟ್ರೀಯ ಉದ್ಯಾನಕ್ಕೆ (Ranthambore National Park) ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಾಣಿಗಳನ್ನು ಮುದ್ದಿಸಿದ್ದಾರೆ. ಆ ಕ್ಷಣದ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಕ್ಷಯ್​ ಕುಮಾರ್​ ಮತ್ತು ಟ್ವಿಂಕಲ್​ ಖನ್ನಾ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಆರವ್​ ಕುಮಾರ್​ ಅವರಿಗೆ ಈಗ 19 ವರ್ಷ. ಅವರು ಲಂಡನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ಪುತ್ರಿ ನಿತಾರಾಗೆ 9 ವರ್ಷ ವಯಸ್ಸು. ಮಗಳ ಜೊತೆಯಲ್ಲಿ ಅಕ್ಕಿ ಹಾಲಿಡೇ ಎಂಜಾಯ್​ ಮಾಡುತ್ತಿದ್ದಾರೆ. ಮಗಳನ್ನು ಕರೆದುಕೊಂಡು ರಣಥಂಬೋರ್​ ಉದ್ಯಾನವನದಲ್ಲಿ ಓಡಾಡುತ್ತಿರುವ ಅವರು ಗೋವುಗಳಿಗೆ ಆಹಾರ ನೀಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಈ ಮಣ್ಣಿನ ವಾಸನೆ, ಗೋವುಗಳಿಗೆ ಆಹಾರ ನೀಡೋದು, ಮರಗಳಿಂದ ಬೀಸುವ ತಂಗಾಳಿ.. ಇವುಗಳ ಅನುಭವನ್ನು ಮಕ್ಕಳಿಗೆ ನೀಡುವುದರಲ್ಲಿ ಏನೋ ಒಂಥರಾ ಖುಷಿ ಇದೆ. ನಾಳೆ ಆಕೆಗೆ ಕಾಡಿನಲ್ಲಿ ಹುಲಿ ಕಾಣಿಸಿದರೆ ಇನ್ನೂ ಸಂತೋಷವಾಗಲಿದೆ. ಸುಂದರವಾದ ರಣಥಂಬೋರ್​ ಉದ್ಯಾನಕ್ಕೆ ಭೇಟಿ ನೀಡಿದ್ದೇವೆ. ಈ ರೀತಿಯ ಅದ್ಭುತವಾದ ಸ್ಥಳಗಳನ್ನು ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಅಕ್ಷಯ್​ ಕುಮಾರ್​ ಬರೆದುಕೊಂಡಿದ್ದಾರೆ.

View this post on Instagram

A post shared by Akshay Kumar (@akshaykumar)

ಅಕ್ಷಯ್ ಕುಮಾರ್ ಅವರು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರ ಹುಟ್ಟುಹಬ್ಬವನ್ನು ಆಚರಿಸಲು ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿನ ಸಮುದ್ರದ ತೀರದಲ್ಲಿ ನಿಂತುಕೊಂಡು ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಆ ವಿಡಿಯೋ ಕೂಡ ಸಖತ್​ ವೈರಲ್​ ಆಗಿತ್ತು. ಹೀಗೆ ತಮ್ಮ ಖಾಸಗಿ ಜೀವನದ ಬಗ್ಗೆ ಹಲವು ಅಪ್​ಡೇಟ್​ಗಳನ್ನು ಅಕ್ಷಯ್​ ಕುಮಾರ್​ ನೀಡುತ್ತಾ ಇರುತ್ತಾರೆ.

ಇದನ್ನೂ ಓದಿ:

ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

ಅಕ್ಷಯ್​ ಕುಮಾರ್​ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್​

Follow us on

Related Stories

Most Read Stories

Click on your DTH Provider to Add TV9 Kannada