Shah Rukh Khan: ‘ಪಠಾಣ್​’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್​ ಖಾನ್​ ಅಭಿಮಾನಿಗಳು

Shah Rukh Khan Fans | Bangladesh: ಕಾನೂನಿನ ಅಡೆತಡೆಗಳ ಕಾರಣದಿಂದಾಗಿ ಬಾಂಗ್ಲಾದೇಶದಲ್ಲಿ ‘ಪಠಾಣ್​’ ಸಿನಿಮಾ ರಿಲೀಸ್​ ಆಗಿಲ್ಲ. ಹಾಗಾಗಿ ಅಲ್ಲಿರುವ ಶಾರುಖ್​ ಖಾನ್​ ಅಭಿಮಾನಿಗಳು ಭಾರತಕ್ಕೆ ಬಂದಿದ್ದಾರೆ.

Shah Rukh Khan: ‘ಪಠಾಣ್​’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್​ ಖಾನ್​ ಅಭಿಮಾನಿಗಳು
ಶಾರುಖ್ ಖಾನ್ ಫ್ಯಾನ್ಸ್

Updated on: Feb 03, 2023 | 10:20 PM

ನಟ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 30 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಇರುವ ಫ್ಯಾನ್ಸ್​ ಅವರನ್ನು ಇಷ್ಟಪಡುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಇತ್ತೀಚೆಗೆ ರಿಲೀಸ್​ ಆದ ‘ಪಠಾಣ್​’ (Pathan Movie) ಸಿನಿಮಾವನ್ನು ನೋಡಲು ಬಾಂಗ್ಲಾದೇಶದಿಂದ (Bangladesh) ಕೆಲವು ಅಭಿಮಾನಿಗಳು ಭಾರತಕ್ಕೆ ಬಂದಿದ್ದಾರೆ. ಕುಟುಂಬ ಸಮೇತರಾಗಿ ಬಂದ ಈ ಅಭಿಮಾನಿಗಳ ಫೋಟೋ ವೈರಲ್​ ಆಗಿದೆ. ನೆಟ್ಟಿಗರು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಕಾನೂನಿನ ಕೆಲವು ಅಡೆತಡೆಗಳ ಕಾರಣದಿಂದಾಗಿ ಬಾಂಗ್ಲಾದೇಶದಲ್ಲಿ ‘ಪಠಾಣ್​’ ಸಿನಿಮಾ ರಿಲೀಸ್​ ಆಗಿಲ್ಲ. ಆದರೆ ಅಲ್ಲಿರುವ ಶಾರುಖ್​ ಖಾನ್​ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ಹೇಗಾದರೂ ಮಾಡಿ ತಮ್ಮ ನೆಚ್ಚಿನ ನಟ ಸಿನಿಮಾ ನೋಡಲೇಬೇಕು ಎಂಬ ಹಠದಿಂದ ಕೆಲವು ಅಭಿಮಾನಿಗಳು ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಭಾರತದ ತ್ರಿಪುರಕ್ಕೆ ಬಂದು ‘ಪಠಾಣ್​’ ಚಿತ್ರವನ್ನು ನೋಡಿದ್ದಾರೆ.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: Shah Rukh Khan: ‘ಪಠಾಣ್​’ ಗೆಲುವಿನ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ

ತ್ರಿಪುರದಲ್ಲಿನ ಚಿತ್ರಮಂದಿರದ ಮಾಲೀಕರೊಬ್ಬರು ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ನಿಜಕ್ಕೂ ಗ್ರೇಟ್​. ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ‘ಪಠಾಣ್​’ ಸಿನಿಮಾವನ್ನು ನೋಡಿದ್ದಾರೆ. ನಮ್ಮ ‘ರೂಪಸಿ’ ಚಿತ್ರಮಂದಿರಕ್ಕೆ ಬಂದಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

‘ಪಠಾಣ್​’ ಸಿನಿಮಾ ಸೂಪರ್​ ಹಿಟ್​ ಆಗಿರುವುದರಿಂದ ಶಾರುಖ್​ ಖಾನ್​ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ‘ಜವಾನ್​’ ಚಿತ್ರಕ್ಕಾಗಿ ತಾವು ಕಾದಿರುವುದಾಗಿ ಬಾಂಗ್ಲಾದೇಶದಲ್ಲಿನ ಅಭಿಮಾನಿಗಳು ತಿಳಿಸಿದ್ದಾರೆ. ಆ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಆ ಬಳಿಕ ರಾಜ್​ಕುಮಾರ್​ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರ ಬಿಡುಗಡೆ ಆಗಲಿದೆ. ಹೀಗೆ 2023ರಲ್ಲಿ ಶಾರುಖ್​ ಖಾನ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗಲಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

350 ಕೋಟಿ ರೂಪಾಯಿ ದಾಟಿದ ‘ಪಠಾಣ್​’ ಕಲೆಕ್ಷನ್​:

ಈವರೆಗೂ ‘ಪಠಾಣ್​’ ಸಿನಿಮಾ ಭಾರತದ ಬಾಕ್ಸ್​ ಆಫೀಸ್​ನಲ್ಲಿ 351 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. 2ನೇ ವೀಕೆಂಡ್​​ನಲ್ಲಿ ಮತ್ತೆ ಹಣದ ಹೊಳೆ ಹರಿಯುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರ ಅನಾಯಾಸವಾಗಿ ಇನ್ನೆರಡು ದಿನಗಳಲ್ಲಿ 400 ಕೋಟಿ ರೂಪಾಯಿಯ ಗಡಿ ಮುಟ್ಟಲಿದೆ. ತೆಲುಗು ಮತ್ತು ತಮಿಳು ವರ್ಷನ್​ನಿಂದ ಈ ಚಿತ್ರಕ್ಕೆ ಈವರೆಗೆ 13 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:20 pm, Fri, 3 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us