- Kannada News Photo gallery Shah Rukh Khan Deepika Padukone press meet after Pathaan movie grand success
Shah Rukh Khan: ‘ಪಠಾಣ್’ ಗೆಲುವಿನ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ ಶಾರುಖ್ ಖಾನ್, ದೀಪಿಕಾ ಪಡುಕೋಣೆ
Pathaan Movie Press Meet: ಬಹು ವರ್ಷಗಳ ಬಳಿಕ ಶಾರುಖ್ ಖಾನ್ ಅವರಿಗೆ ಗೆಲುವು ಸಿಕ್ಕಿದೆ. ‘ಪಠಾಣ್’ ಚಿತ್ರದ ಯಶಸ್ಸಿನ ನಂತರ ಅವರು ಖುಷಿಯಿಂದ ಸುದ್ದಿಗೋಷ್ಠಿ ನಡೆಸಿದ್ದಾರೆ.
Updated on: Jan 31, 2023 | 7:00 AM

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಗಿದೆ. 5 ದಿನಕ್ಕೆ ವಿಶ್ವಾದ್ಯಂತ ಈ ಚಿತ್ರ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದರಿಂದ ಶಾರುಖ್ ಖಾನ್ ಮುಖದಲ್ಲಿ ನಗು ಅರಳಿದೆ.

‘ಪಠಾಣ್’ ಸಿನಿಮಾ ಗೆದ್ದ ಬಳಿಕ ಮೊದಲ ಬಾರಿಗೆ ಚಿತ್ರತಂಡದವರು ಮಾಧ್ಯಮದ ಮುಂದೆ ಬಂದಿದ್ದಾರೆ. ಅದ್ದೂರಿ ಯಶಸ್ಸಿನ ಸಂತಸವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ 4ನೇ ಸಿನಿಮಾ ‘ಪಠಾಣ್’. ಮೊದಲ ಮೂರು ಸಿನಿಮಾಗಳಿಗಿಂತಲೂ ಗ್ರ್ಯಾಂಡ್ ಆಗಿ ಈ ಬಾರಿ ಗೆಲುವು ಸಿಕ್ಕಿದೆ. ಇವರದ್ದು ಸೂಪರ್ ಹಿಟ್ ಜೋಡಿ ಎಂಬುದು ಮತ್ತೆ ಸಾಬೀತಾಗಿದೆ.

‘ಪಠಾಣ್’ ಸಿನಿಮಾದಲ್ಲಿ ಜಾನ್ ಅಬ್ರಾಹಂ ಅವರು ವಿಲನ್ ಆಗಿ ಅಬ್ಬರಿಸಿದ್ದಾರೆ. ಕಾರ್ಪೊರೇಟ್ ಶೈಲಿಯ ಭಯೋತ್ಪಾದಕನ ಪಾತ್ರವನ್ನು ಅವರು ಮಾಡಿದ್ದಾರೆ. ಜಾನ್ ಅಬ್ರಾಹಂ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2023ರಲ್ಲಿ ‘ಪಠಾಣ್’ ಸಿನಿಮಾದಿಂದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಉತ್ತಮ ಆರಂಭ ಸಿಕ್ಕಿದೆ. ಮುಂಬರುವ ಸಿನಿಮಾಗಳು ಕೂಡ ಇದೇ ರೀತಿ ಕಲೆಕ್ಷನ್ ಮಾಡಲಿ ಎಂದು ಆಶಿಸಲಾಗುತ್ತಿದೆ. ಶಾರುಖ್ ಖಾನ್ ಅವರ ‘ಡಂಕಿ’, ‘ಜವಾನ್’ ಚಿತ್ರಗಳ ಮೇಲೆ ಹೆಚ್ಚು ನಿರೀಕ್ಷೆ ಮೂಡಿದೆ.
























