
ಬಾಲಿವುಡ್ನ ಬಾದ್ಷಾ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಶಾರುಖ್ ಖಾನ್ಗೆ (Shah Rukh Khan) ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ಆಕ್ಷನ್, ರೊಮ್ಯಾಂಟಿಕ್ ಹೀಗೆ.. ಎಲ್ಲಾ ಪಾತ್ರಗಳಲ್ಲೂ ಮಿಂಚಿರುವ ಶಾರುಖ್ಗೆ ಭಾರತದಲ್ಲಿ ಮಕ್ಕಳು, ಯುವಕರಿಂದ ಹಿಡಿದು ವೃದ್ಧರ ತನಕವೂ ಫ್ಯಾನ್ಸ್ಗಳಿದ್ದಾರೆ. ಅವರಿಗೆಲ್ಲಾ ಶಾರುಖ್ ನಿವಾಸ ‘ಮನ್ನತ್’ ಮೇಲೆ ವಿಶೇಷ ಆದರ. ಇದಕ್ಕೆ ಹಲವು ಕಾರಣಗಳು. ನೆಚ್ಚಿನ ಸ್ಟಾರ್ ನಟ ಅಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿರುತ್ತಾರೆ ಎಂಬುದು ಒಂದು ಕಾರಣ. ಇದಲ್ಲದೇ ಮತ್ತೊಂದು ವಿಶೇಷ ಕಾರಣ ಇದೆ. ಶಾರುಖ್ ಜನ್ಮದಿನದಂದು ದೇಶದ ಹಲವೆಡೆಯಿಂದ ಅಭಿಮಾನಿಗಳು ನಟನ ಮನೆಯ ಮುಂಭಾಗ ಆಗಮಿಸುತ್ತಾರೆ. ಅಂದು ಶಾರುಖ್ ತಮ್ಮ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಕೈಬೀಸುತ್ತಾರೆ. ಇದು ಬಹಳಷ್ಟು ವರ್ಷಗಳಿಂದ ನಡೆದು ಬಂದಿದೆ. ನೆರೆದಿರುವ ಅಸಂಖ್ಯ ಅಭಿಮಾನಿಗಳಿಗೆ ಶಾರುಖ್ ಕೈಬೀಸುತ್ತಿರುವ ದೃಶ್ಯಗಳನ್ನು ನೀವೂ ನೋಡಿರುತ್ತೀರಿ.
ಹೀಗಿರುವ ‘ಮನ್ನತ್’ನ ಒಂದು ವಿಶೇಷವೆಂದರೆ ಆಗಾಗ ಅದರ ನಾಮಫಲಕ ಬದಲಾಗುವುದು! ಹೌದು. ‘ಮನ್ನತ್’ ಬೋರ್ಡ್ಅನ್ನು ಹೊಸ ವಿನ್ಯಾಸದೊಂದಿಗೆ ಬದಲಾಯಿಸಲಾಗುತ್ತದೆ. ಶಾರುಖ್ ಅಭಿಮಾನಿಗಳು ಮುಂಬೈಗೆ ತೆರಳಿದಾಗ, ‘ಮನ್ನತ್’ ಮುಂಭಾಗಕ್ಕೆ ತೆರಳಿ, ಅಲ್ಲಿನ ನಾಮಫಲಕದೊಂದಿಗೆ ಫೋಟೋ ತೆಗೆಸಿಕೊಂಡು ಬರುವುದು ವಾಡಿಕೆ.
ಹೀಗಾಗಿಯೇ ಅಲ್ಲಿನ ನಾಮಫಲಕದೊಂದಿಗೆ ಅಭಿಮಾನಿಗಳು ವಿಶೇಷವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ ಪ್ರತಿ ಬಾರಿ ನಾಮಫಲಕ ಬದಲಾದಾಗಲೂ ಅದು ಸಖತ್ ಸುದ್ದಿಯಾಗುತ್ತದೆ. ಇದೀಗ ಶಾರುಖ್ ನಿವಾಸಕ್ಕೆ ಹೊಸ ನೇಮ್ ಬೋರ್ಡ್ ಬಂದಿದೆ. ಆಧುನಿಕ ವಿನ್ಯಾಸದ ಈ ಬೋರ್ಡ್ ಫ್ಯಾನ್ಸ್ ಮನಗೆದ್ದಿದೆ. ಇದೇ ಕಾರಣಕ್ಕೆ ಇಂದು ಕೆಲ ಸಮಯದ ಕಾಲ ‘ಮನ್ನತ್’ ಟ್ವಿಟರ್ನ ಟ್ರೆಂಡಿಂಗ್ ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು.
‘ಮನ್ನತ್’ ನಾಮಫಲಕ ಬದಲಾವಣೆಗೆ ಅಭಿಮಾನಿಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆ:
ಟ್ವಿಟರ್ನಲ್ಲಿ ಶಾರುಖ್ ಅಭಿಮಾನಿಗಳು ‘ಮನ್ನತ್’ ಇತ್ತೀಚಿನ ವರ್ಷಗಳಲ್ಲಿ ಹೇಗೆ ಬದಲಾಗುತ್ತಾ ಬಂದಿದೆ ಎಂಬುದನ್ನು ಫೋಟೋ ಸಹಿತ ವಿವರಿಸಿದ್ದಾರೆ. ಇದರೊಂದಿಗೆ ತಾವು ಮನ್ನತ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾವ ನಾಮಫಲಕವಿತ್ತು ಎಂಬುದನ್ನೂ ಹಂಚಿಕೊಂಡಿದ್ದಾರೆ. ಓರ್ವ ಅಭಿಮಾನಿ, ‘ನಾಮಫಲಕ ಬದಲಾಗಿರಬಹುದು, ಆದರೆ ಭಾವನೆಗಳು ಹಾಗೇ ಇವೆ’ ಎಂದಿದ್ದಾರೆ.
ಶಾರುಖ್ ಅಭಿಮಾನಿಗಳ ಟ್ವೀಟ್ಗಳು ಇಲ್ಲಿದೆ:
ಚಿತ್ರಗಳ ವಿಷಯಕ್ಕೆ ಬಂದರೆ ಶಾರುಖ್ ‘ಪಠಾಣ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಕೂಡ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಶಾರುಖ್ ಹಾಗೂ ರಾಜ್ಕುಮಾರ್ ಹಿರಾನಿ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ‘ಡಂಕಿ’ ಅನೌನ್ಸ್ ಆಗಿತ್ತು.
ಇದನ್ನೂ ಓದಿ: Ashika Ranganath: ‘ಅವತಾರ ಪುರುಷ’ ಬೆಡಗಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ಆಲ್ಬಂ