ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಮುಂದಿನ ಗುರುವಾರ (ಜನವರಿ 25) ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಶಾರುಖ್ ಖಾನ್ ಅವರು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ದುಬೈಗೆ ತೆರಳಿ ಅವರು ‘ಪಠಾಣ್’ ಸಿನಿಮಾಗೆ ಪ್ರಚಾರ ನೀಡಿದ್ದರು. ಈಗ ಶಾರುಖ್ ಖಾನ್ ಅವರು ‘ಪಠಾಣ್’ ಚಿತ್ರಕ್ಕಾಗಿ (Pathan Movie) ಪಡೆದ ಸಂಭಾವನೆ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಕ್ಷಯ್ ಕುಮಾರ್ಗಿಂತ ಅವರು ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ.
ಶಾರುಖ್ ಖಾನ್ ಅವರು ಸಿನಿಮಾ ಮಾಡುತ್ತಾರೆ ಎಂದರೆ ನಿರ್ಮಾಪಕರು ಹಣ ಹೂಡಲು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ಎಲ್ಲರಿಗೂ ಶಾರುಖ್ ಅವರನ್ನು ಭರಿಸುವ ಶಕ್ತಿ ಇರುವುದಿಲ್ಲ. ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಮಾತ್ರ ಈ ರೀತಿಯ ಅವಕಾಶ ಸಿಗುತ್ತದೆ. ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಕೇವಲ 35-40 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.
ಶಾರುಖ್ ಖಾನ್ ಅವರು ಇಷ್ಟು ಕಡಿಮೆ ಮೊತ್ತಕ್ಕೆ ಸಿನಿಮಾ ಸಹಿ ಮಾಡಿದ್ದೇಕೆ? ಆ ಪ್ರಶ್ನೆಗೆ ಉತ್ತರ ಇದೆ. ಶಾರುಖ್ ಖಾನ್ ಅವರು ಸಂಭಾವನೆ ಜತೆಗೆ ಲಾಭದಲ್ಲಿ ಬರುವ ಶೇರ್ ಕೂಡ ಪಡೆಯಲಿದ್ದಾರೆ. ಸಿನಿಮಾ ಗಳಿಕೆಯಲ್ಲಿ ಒಂದಷ್ಟು ಭಾಗವನ್ನು ಶಾರುಖ್ ಖಾನ್ ಪಡೆಯುತ್ತಾರೆ. ಅನೇಕ ಸ್ಟಾರ್ ಹೀರೋಗಳು ಈ ಮೊದಲು ಈ ರೀತಿಯ ಒಪ್ಪಂದ ಮಾಡಿಕೊಂಡಿದ್ದಿದೆ. ಒಂದೊಮ್ಮೆ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡದೆ ಇದ್ದರೆ ಆಗ ಶಾರುಖ್ ಖಾನ್ಗೆ ನಷ್ಟ ಉಂಟಾಗಲಿದೆ.
ಇದನ್ನೂ ಓದಿ: ಶಾರುಖ್ ಖಾನ್ ಜಗತ್ತಿನ ನಾಲ್ಕನೇ ಶ್ರೀಮಂತ ನಟ; ಅಬ್ಬಬ್ಬಾ ಅವರ ಒಟ್ಟೂ ಆಸ್ತಿ ಇಷ್ಟೊಂದಾ?
ಯಶ್ ರಾಜ್ ಫಿಲ್ಮ್ಸ್ ಜತೆ ಅಕ್ಷಯ್ ಕುಮಾರ್ ಹಲವು ಸಿನಿಮಾ ಮಾಡಿದ್ದಾರೆ. ‘ಕಟ್ಪುಟ್ಲಿ’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಈ ಚಿತ್ರಕ್ಕಾಗಿ ಅಕ್ಷಯ್ 100+ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿತ್ತು. ಇಡೀ ಚಿತ್ರದ ಬಜೆಟ್ನಲ್ಲಿ ಶೇ.80 ಭಾಗ ಅಕ್ಷಯ್ ಸಂಭಾವನೆಗೆ ಖರ್ಚಾಗಿತ್ತು ಎಂದು ವರದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Thu, 19 January 23