Time 100 Reader Poll: ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಶಾರುಖ್​ ಖಾನ್​ ನಂ.1; ಮೆಸ್ಸಿಯನ್ನೂ ಮೀರಿಸಿದ ‘ಪಠಾಣ್​’ ಹೀರೋ

Shah Rukh Khan: ‘ಟೈಮ್​’ ಮ್ಯಾಗಜಿನ್​ನ 12 ಲಕ್ಷಕ್ಕೂ ಅಧಿಕ ಓದುಗರು ವೋಟ್​ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಶಾರುಖ್​ ಖಾನ್​ ಅವರಿಗೆ ನಂಬರ್​ ಒನ್​ ಪಟ್ಟ ಸಿಕ್ಕಿದೆ.

Time 100 Reader Poll: ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಶಾರುಖ್​ ಖಾನ್​ ನಂ.1; ಮೆಸ್ಸಿಯನ್ನೂ ಮೀರಿಸಿದ ‘ಪಠಾಣ್​’ ಹೀರೋ
ಶಾರುಖ್ ಖಾನ್

Updated on: Apr 07, 2023 | 4:28 PM

ನಟ ಶಾರುಖ್​ ಖಾನ್​​ (Shah Rukh Khan) ಅವರ ಖ್ಯಾತಿ ಜಗದಗಲ ಹಬ್ಬಿದೆ. ಅವರು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ವಿದೇಶದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಬೇರೆ ಬೇರೆ ದೇಶಗಳ ಜನರು ಅವರನ್ನು ಇಷ್ಟಪಡುತ್ತಾರೆ. ಅದರ ಪರಿಣಾಮವಾಗಿ, ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್​ ಖಾನ್​ ಅವರಿಗೆ ನಂಬರ್​ ಒನ್​ ಪಟ್ಟ ಸಿಕ್ಕಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್​ನ (Time Magazine) ಓದುಗರ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ. ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆ, ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳ ಘಟಾನುಘಟಿಗಳನ್ನೂ ಮೀರಿಸಿ ಶಾರುಖ್​ ಖಾನ್​ ನಂಬರ್​ ಒನ್​ ಆಗಿದ್ದಾರೆ. 2023ರ ವರ್ಷ ಅವರ ಪಾಲಿಗೆ ಸಖತ್​ ಆಶಾದಾಯಕ ಆಗಿದೆ. ಅವರು ನಟಿಸಿದ ‘ಪಠಾಣ್​’ ಸಿನಿಮಾ (Pathaan Movie) ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅದರ ಜೊತೆಗೆ ವಿಶ್ವಮಟ್ಟದಲ್ಲಿ ಅವರ ಖ್ಯಾತಿ ಹೆಚ್ಚಾಗಿದೆ.

‘ಟೈಮ್​’ ಮ್ಯಾಗಜಿನ್​ನ 12 ಲಕ್ಷಕ್ಕೂ ಅಧಿಕ ಓದುಗರು ವೋಟ್​ ಮಾಡಿದ್ದಾರೆ. 100 ಪ್ರಭಾವಿ ವ್ಯಕ್ತಿಗಳಲ್ಲಿ ಯಾವ ಸೆಲೆಬ್ರಿಟಿಯು ಎಷ್ಟನೇ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಓದುಗರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗಿದೆ. ಶೇ.4ರಷ್ಟು ಓದುಗರು ಶಾರುಖ್​ ಖಾನ್​ಗೆ ವೋಟ್​ ಹಾಕಿದ್ದು, ಅವರು ನಂಬರ್​ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ವರ್ಸಸ್​ ವಿರಾಟ್​ ಕೊಹ್ಲಿ; ಯಾರು ಗ್ರೇಟ್​ ಎಂಬ ವಿಚಾರದಲ್ಲಿ ಫ್ಯಾನ್ಸ್​ ವಾರ್​

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಆಸ್ಕರ್​ ವಿಜೇತ ನಟಿ ಮಿಶಾಲ್​ ಯೋ, ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​, ಮೆಟಾ ಸಿಇಓ ಮಾರ್ಕ್​ ಝಕರ್​ಬರ್ಗ್​ ಮುಂತಾದವರನ್ನು ಶಾರುಖ್​ ಖಾನ್​ ಹಿಂದಿಕ್ಕಿದ್ದಾರೆ. ಫುಟ್ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ ಅವರು 5ನೇ ಸ್ಥಾನದಲ್ಲಿದ್ದಾರೆ. ಶಾರುಖ್​ ಖಾನ್​ ಅವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: Jawan: ಶಾರುಖ್​ ಖಾನ್​-ಸಂಜಯ್​ ದತ್​ ಮುಖಾಮುಖಿ; ‘ಜವಾನ್​’ ಚಿತ್ರದಲ್ಲಿ ಭರ್ಜರಿ ಫೈಟ್​

ವೃತ್ತಿಜೀವನದಲ್ಲಿ ಶಾರುಖ್​ ಖಾನ್​ ಅವರು ಸತತ ಸೋಲು ಕಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆಲ್ಲುತ್ತಿರಲಿಲ್ಲ. ಅದೇ ವೇಳೆಗೆ ಪುತ್ರ ಆರ್ಯನ್​ ಖಾನ್​ ಅವರು ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರಿಂದ ಕಿಂಗ್​ ಖಾನ್​ ಕುಟುಂಬದ ಪ್ರತಿಷ್ಠಿಗೆ ಧಕ್ಕೆ ಆಗಿತ್ತು. ಆದರೆ 2023ರ ಆರಂಭಲ್ಲೇ ‘ಪಠಾಣ್​’ ಸಿನಿಮಾ ಮೂಲಕ ಶಾರುಖ್​ ಖಾನ್ ಅವರು ಟ್ರ್ಯಾಕ್​ಗೆ ಮರಳಿದರು. ಈಗ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಇದನ್ನೂ ಓದಿ: The Romantics: ಶಾರುಖ್​ ಖಾನ್​ ಮನೆಗೆ ಶೂಟಿಂಗ್​ ಮಾಡಲು ಹೋದಾಗ ಆದ ಅನುಭವ ವಿವರಿಸಿದ ನಿರ್ದೇಶಕಿ

ಶಾರುಖ್​ ಖಾನ್​ ಅವರು ನಿರ್ದೇಶಕ ಅಟ್ಲಿ ಕುಮಾರ್​ ಜೊತೆ ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಡಂಕಿ’ ಚಿತ್ರದಲ್ಲೂ ಶಾರುಖ್​ ನಟಿಸುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:28 pm, Fri, 7 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us