Pathaan: ಭಾರತದಲ್ಲಿ 502 ಕೋಟಿ ರೂ. ಗಳಿಸಿದ ‘ಪಠಾಣ್​’; ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್​ ಎಷ್ಟು?

Shah Rukh Khan | Pathaan Movie Collection: ಈಗಲೂ ಅನೇಕ ಕಡೆಗಳಲ್ಲಿ ‘ಪಠಾಣ್​’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಚಿತ್ರ 502 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ.

Pathaan: ಭಾರತದಲ್ಲಿ 502 ಕೋಟಿ ರೂ. ಗಳಿಸಿದ ‘ಪಠಾಣ್​’; ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್​ ಎಷ್ಟು?
ಪಠಾಣ್ ಸಿನಿಮಾ ಪೋಸ್ಟರ್​

Updated on: Feb 16, 2023 | 7:13 PM

ಶಾರುಖ್​ ಖಾನ್​ (Shah Rukh Khan) ಮತ್ತು ದೀಪಿಕಾ ಪಡುಕೋಣೆ ಜೋಡಿಯ ‘ಪಠಾಣ್​’ ಸಿನಿಮಾ (Pathaan Movie) 500 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಆ ಮೂಲಕ ಬ್ಲಾಕ್​ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಬಿಡುಗಡೆಯಾಗಿ 23 ದಿನ ಕಳೆದಿದ್ದರೂ ಕೂಡ ಇನ್ನೂ ಅನೇಕ ಕಡೆಗಳಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್​ ಖಾನ್​ ಅಭಿಮಾನಿಗಳು ಮುಗಿಬಿದ್ದು ನೋಡಿದ ಪರಿಣಾಮ ಭಾರತದ ಬಾಕ್ಸ್​ ಆಫೀಸ್​ನಲ್ಲಿ ‘ಪಠಾಣ್​’ ಚಿತ್ರಕ್ಕೆ ಬರೋಬ್ಬರಿ 502 ಕೋಟಿ ರೂಪಾಯಿ ಕಲೆಕ್ಷನ್​ (Pathaan Box Office Collection) ಆಗಿದೆ. ಇದು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ. ವಿಶ್ವಾದ್ಯಂತ ಈ ಸಿನಿಮಾ 970 ಕೋಟಿ ರೂಪಾಯಿ ಗಳಿಸಿದೆ. ಸಾವಿರ ಕೋಟಿ ಕ್ಲಬ್​ ಸೇರಲು ಇನ್ನು 30 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ.

2022ರಲ್ಲಿ ಬಾಲಿವುಡ್​ ಬಾಕ್ಸ್​ ಆಫೀಸ್​ ಸೊರಗಿತ್ತು. ಘಟಾನುಘಟಿ ಹೀರೋಗಳ ಸಿನಿಮಾಗಳು ಕೂಡ ನೆಲಕಚ್ಚಿದ್ದವು. ಅದರಿಂದ ಹಿಂದಿ ಚಿತ್ರರಂಗದ ಮಂದಿಗೆ ನಿಜಕ್ಕೂ ನಿರಾಸೆ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. 2023ರ ಆರಂಭದಲ್ಲಿಯೇ ‘ಪಠಾಣ್​’ ಸಿನಿಮಾ ಅಬ್ಬರಿಸಿದೆ. ಹಾಗಾಗಿ ಬಿ-ಟೌನ್​ನಲ್ಲಿ ಹೊಸ ಕಳೆ ಬಂದಿದೆ. ಮುಂಬರುವ ಸಿನಿಮಾಗಳು ಕೂಡ ಇದೇ ರೀತಿ ಉತ್ತಮ ಕಲೆಕ್ಷನ್​ ಮಾಡಬಹುದು ಎಂಬ ನಿರೀಕ್ಷೆ ಬಲವಾಗಿದೆ.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: Pathaan: ‘ಪಠಾಣ್​ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್​ ಖಾನ್​

ಯಾವುದೇ ಸಿನಿಮಾ ಸೂಪರ್​ ಹಿಟ್​ ಆದರೆ ಅದರ ಮುಂದುವರಿದ ಭಾಗವನ್ನು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ‘ಪಠಾಣ್​’ ವಿಚಾರದಲ್ಲೂ ಹಾಗೆಯೇ ಆಗಿದೆ. ಆ ಬಗ್ಗೆ ಶಾರುಖ್​ ಖಾನ್​ ಈಗಾಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ. ‘ನನಗೆ ಸಿಕ್ಕ ಅವಕಾಶದಿಂದ ತುಂಬ ಖುಷಿ ಆಗಿದೆ. ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ಯಾವಾಗ ಪಠಾಣ್​ ಚಿತ್ರಕ್ಕೆ ಸೀಕ್ವೆಲ್​ ಮಾಡಿದರೂ ನಾನು ಅದರಲ್ಲಿ ನಟಿಸುತ್ತೇನೆ. ಸೀಕ್ವೆಲ್​ ಸಲುವಾಗಿ ಇನ್ನೂ ಉದ್ದ ಕೂದಲು ಬಿಡಲು ನಾನು ಸಿದ್ಧ. ಪಠಾಣ್​ 2 ಚಿತ್ರಕ್ಕಾಗಿ ನಾನು ಸಕಲ ರೀತಿಯಿಂದಲೂ ಪ್ರಯತ್ನಿಸುತ್ತೇನೆ. ಅದರಲ್ಲಿ ನಟಿಸುವುದು ನನ್ನ ಪಾಲಿನ ಹೆಮ್ಮೆ’ ಎಂದು ಸಕ್ಸಸ್​ ಮೀಟ್​ನಲ್ಲಿ ಶಾರುಖ್​ ಖಾನ್​ ಹೇಳಿದ್ದರು.

‘ಪಠಾಣ್’ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಿದ ಜಾನ್​ ಅಬ್ರಾಹಂ ಹಾಗೂ ನಾಯಕಿ ದೀಪಿಕಾ ಪಡುಕೋಣೆ ಅವರ ಜನಪ್ರಿಯತೆ ಹೆಚ್ಚಾಗಿದೆ. ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರಿಗೆ ಇದ್ದ ಬೇಡಿಕೆ ಡಬಲ್​ ಆಗಿದೆ. ಬಂಡವಾಳ ಹೂಡಿದ ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆಗೆ ಈ ಚಿತ್ರದಿಂದ ಸಿಕ್ಕಾಪಟ್ಟೆ ಲಾಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us