‘ನಾನು ಕೊಲೆಗಾರನಲ್ಲ, ಪ್ರೇಮಿ’; ಗಮನಸೆಳೆದ ಶಾರುಖ್ ‘ಕಿಂಗ್’ ಹೊಸ ಪೋಸ್ಟರ್
ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮುಂಬರುವ ‘ಕಿಂಗ್’ ಸಿನಿಮಾದ ಇಂಟೆನ್ಸ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಮಗಳು ಸುಹಾನಾ ಖಾನ್ ಜೊತೆ ನಟಿಸುತ್ತಿದ್ದು, ಡಿಸೆಂಬರ್ 24ರಂದು ಸಿನಿಮಾ ಪ್ರಪಂಚದಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಪೋಸ್ಟರ್ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್ ನಟ ಶಾರುಖ್ ಖಾನ್ ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. 2023ರಲ್ಲಿ ಬ್ಯಾಕ್ ಟು ಬ್ಯಾಕ್ 3 ಹಿಟ್ ಕೊಟ್ಟ ಬಳಿಕ ಅವರು ಒಪ್ಪಿಕೊಂಡಿರುವ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈಗ ‘ಕಿಂಗ್’ ಸಿನಿಮಾದ ಹೊಸ ಪೋಸ್ಟರ್ ರಿವೀಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಶಾರುಖ್ ಖಾನ್ ಧಗಧಗನೆ ಉರಿಯುವ ಬೆಂಕಿಯ ನಡುವೆ ಗನ್ ಹಿಡಿದು ನಡೆದು ಬರುತ್ತಿದ್ದಾರೆ. ಸಿನಿಮಾದ ರಿಲೀಸ್ ದಿನಾಂಕವೂ ಉಲ್ಲೇಖವಾಗಿದೆ.
ಶಾರುಖ್ ಖಾನ್ ಅವರ ಬಾಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡಿದ್ದಾರೆ. ಇದು ಅವರ ನಟನೆಯ ‘ಬಾದ್‌ಶಾ’ ಸಿನಿಮಾ ನೆನಪಿಸುವಂತಿದೆ. ಈ ಪೋಸ್ಟರ್ಗೆ ಶಾರುಖ್ ಕಡಕ್ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ‘ಇಂದು ಮತ್ತೆ ನೆನಪಾಯಿತು… ನಾನು ಕೊಲೆಗಾರನಲ್ಲ… ಪ್ರೇಮಿ’ ಎಂದು ಅವರು ಬರೆದಿದ್ದಾರೆ. ತಮ್ಮ ಪಾತ್ರವು ಕೇವಲ ವಿಲನ್ ಅಲ್ಲ, ಅದರಲ್ಲಿ ಹಲವು ಆಯಾಮಗಳಿವೆ ಎಂಬುದನ್ನು ಈ ಸಾಲುಗಳು ಸೂಚಿಸುತ್ತಿವೆ. ಈ ಪೋಸ್ಟರ್ ಪ್ರೇಕ್ಷಕರಲ್ಲಿ ಸಖತ್ ಕುತೂಹಲ ಮೂಡಿಸಿದೆ. ಈ ವರ್ಷ ಡಿಸೆಂಬರ್ 24ರಂದು ಸಿನಿಮಾ ತೆರೆಗೆ ಬರಲಿದೆ.
‘ಪಠಾಣ್’ ಸಿನಿಮಾಗೆ ನಿರ್ದೇಶನ ಮಾಡಿದ್ದ ಸಿದ್ಧಾರ್ಥ್ ಆನಂದ್ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಅವರ ಮಗಳು ಸುಹಾನಾ ಖಾನ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ ಹಾಗೂ ಜೈದೀಪ್ ಅಹ್ಲಾವತ್ ನಟಿಸುತ್ತಿದ್ದಾರೆ. ಸಿನಿಮಾದ ಪಾತ್ರವರ್ಗ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
View this post on Instagram
ಶಾರುಖ್ ಖಾನ್ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಈ ಸಿನಿಮಾದ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದರು. ಆ ಗ್ಲಿಂಪ್ಸ್‌ನಲ್ಲಿ ಅವರ ಮಾಸ್ ಲುಕ್ ಅಭಿಮಾನಿಗಳಿಗೆ ಭಾರಿ ಇಷ್ಟವಾಗಿತ್ತು.
ಇದನ್ನೂ ಓದಿ: ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ಕಿಂಗ್’ ಸಿನಿಮಾದ ಟೀಸರ್
ಇತ್ತೀಚೆಗೆ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಶಾರುಖ್ ಟ್ರೇಲರ್ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ಔಟ್‌ಪುಟ್ ನೀಡಲು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಶ್ರಮಿಸುತ್ತಿದೆ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




