ಬಾಲಿವುಡ್ (Bollywood) ಸೆಲೆಬ್ರಿಟಿಗಳು ಸಾಲು-ಸಾಲಾಗಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಆಸ್ತಿ ಖರೀದಿ ಎಂಬುದು ನಟರ ಮೆಚ್ಚಿನ ಹೂಡಿಕೆಯಾಗಿತ್ತಾದರೂ ಕೋವಿಡ್ ಬಳಿಕ ಈ ಅಭ್ಯಾಸ ತುಸು ಹೆಚ್ಚಾಗಿದೆ. ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಬೂಮ್ ಆದುದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದೀಗ ನಟಿ ಸೊನಾಕ್ಷಿ ಸಿನ್ಹ ಕೋಟ್ಯಂತರ ರೂಪಾಯಿ ಹಣ ತೆತ್ತು ಮುಂಬೈನಲ್ಲಿ ಐಶಾರಾಮಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ.
ಮುಂಬೈನಲ್ಲಿ ಬಹುತೇಕ ಸ್ಟಾರ್ ನಟರು ಇರುವುದು ಬಾಂದ್ರಾ, ವರ್ಸೋವಾ, ಜುಹು ಏರಿಯಾಗಳಲ್ಲಿಯೇ. ಇದೀಗ ನಟಿ ಸೋನಾಕ್ಷಿ ಸಹ ಇದೇ ಏರಿಯಾದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಬಾಂದ್ರಾದ ಐಶಾರಾಮಿ ಅಪಾರ್ಟ್ಮೆಂಟ್ನ 26ನೇ ಮಹಡಿಯಲ್ಲಿ ದೊಡ್ಡ ಫ್ಲ್ಯಾಟ್ ಒಂದನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಈ ಪ್ಲ್ಯಾಟ್ ಖರೀದಿಗೆ ಸೊನಾಕ್ಷಿ ಬರೊಬ್ಬರಿ 11 ಕೋಟಿ ರೂಪಾಯಿ ವ್ಯಯಿಸಿದ್ದಾರೆ.
ಬಾಂದ್ರಾದ ಪ್ರೀಮಿಯಮ್ ರೆಸೆಡೆನ್ಷಿಯಲ್ ಟವರ್ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಸೊನಾಕ್ಷಿ ಪ್ಲ್ಯಾಟ್ ಖರೀದಿಸಿದ್ದು, 2430 ಚದರ ಅಡಿಯ ಈ ಫ್ಲ್ಯಾಟ್ಗೆ 11 ಕೋಟಿ ರೂಪಾಯಿ ತೆತ್ತಿದ್ದಾರೆ. ಇನ್ನು ಇದರ ಇಂಟೀರಿಯರ್ ಇನ್ನಿತರೆಗಳಿಗೆ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಮುಚ್ಛಯವನ್ನು ಪಿರಮಡ್ ಡೆವೆಲಪರ್ಸ್ ಮತ್ತು ಅಲ್ಟ್ರಾ ಲೈಫ್ಸ್ಪೇಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಸೊನಾಕ್ಷಿ, ನೇರವಾಗಿ ಡೆವೆಲಪರ್ಗಳಿಂದಲೇ ಪ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನ ಈ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದ ದಕ್ಷಿಣ ಭಾರತದ ಸ್ಟಾರ್ ಕಲಾವಿದರಿವರು
ಇದೇ ಆಗಸ್ಟ್ ತಿಂಗಳಲ್ಲಿ ಈ ಫ್ಲ್ಯಾಟ್ ಅನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಅಂದಹಾಗೆ ಈ ಸಮುಚ್ಛಯದಲ್ಲಿ ಇದು ಅವರ ಎರಡನೇ ಫ್ಲ್ಯಾಟ್ ಖರೀದಿ. ಈ ಹಿಂದೆ 2020ರ ಮಾರ್ಚ್ ತಿಂಗಳಲ್ಲಿ ಇದೇ ಅಪಾರ್ಟ್ಮೆಂಟ್ನಲ್ಲಿ 4632 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್ 16ನೇ ಮಹಡಿಯಲ್ಲಿದೆ. ಈ ಫ್ಲ್ಯಾಟ್ಗೆ ಆಗ 14 ಕೋಟಿ ರೂಪಾಯಿಗಳನ್ನು ಸೊನಾಕ್ಷಿ ಸಿನ್ಹ ವ್ಯಯಿಸಿದ್ದರು.
ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಮುಂಬೈನ ಓಷಿವಾರಾ ಪ್ರದೇಶದಲ್ಲಿ ಸುಮಾರು 8500 ಚದರ ಅಡಿಗಳ ಆಫೀಸ್ ಸ್ಪೇಸ್ ಅನ್ನು ಅಮಿತಾಬ್ ಬಚ್ಚನ್ ಖರೀದಿ ಮಾಡಿದ್ದು, ಇದಕ್ಕಾಗಿ ಸುಮಾರು 29 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ಸಾರಾ ಅಲಿ ಖಾನ್, 2100 ಚದರ ಅಡಿಯ ಪ್ಲ್ಯಾಟ್ ಅನ್ನು 9 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಸಹ ಇದೇ ಪ್ರಾಜೆಕ್ಟ್ನಲ್ಲಿ 2100 ಚದರ ಅಡಿಯ ಫ್ಲ್ಯಾಟ್ ಅನ್ನು 10 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಇದೇ ವರ್ಷದ ಜುಲೈ ತಿಂಗಳಲ್ಲಿ ಕಾರ್ತಿ ಕ್ ಆರ್ಯನ್ ಜುಹು ಏರಿಯಾನಲ್ಲಿನ ಸಿದ್ಧಿ ವಿನಾಯಕ ಅಪಾರ್ಟ್ಮೆಂಟ್ನಲ್ಲಿ 17.50 ಕೋಟಿ ಖರ್ಚು ಮಾಡಿ 1916 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ