ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ ಅವರು ಇತ್ತೀಚೆಗಷ್ಟೇ ವಿವಾಹ ಆಗಿದ್ದಾರೆ. ಜೂನ್ 23ರಂದು ನೋಂದಣಿ ಮಾಡಿಕೊಳ್ಳುವ ಮೂಲಕ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಅಚ್ಚರಿ ಎಂದರೆ ಈಗ ಸೋನಾಕ್ಷಿ ಸಿನ್ಹಾ ಅವರು ಮುಂಬೈನ ಆಸ್ಪತ್ರೆಗೆ ತೆರಳಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಸೋನಾಕ್ಷಿ ಹಾಗೂ ಝಹೀರ್ ಮಗುವಿನ ನಿರೀಕ್ಷೆಯಲ್ಲಿ ಇರಬಹುದೇ ಎನ್ನುವ ಪ್ರಶ್ನೆ ಕಾಡಿದೆ.
ಪ್ರೆಗ್ನೆಂಟ್ ಆದ ಬಳಿಕ ಮದುವೆ ಆಗೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳ ವಲಯದಲ್ಲಂತೂ ಇದು ಹೊಸದಲ್ಲ. ರಣಬೀರ್ ಕಪೂರ್-ಆಲಿಯಾ ಭಟ್, ಹಾರ್ದಿಕ್ ಪಾಂಡ್ಯ-ನತಾಶಾ ಸೇರಿ ಅನೇಕ ಸೆಲೆಬ್ರಿಟಿಗಳು ಈ ಟ್ರೆಂಡ್ನ ಫಾಲೋ ಮಾಡಿದ್ದಾರೆ. ಈಗ ಸೋನಾಕ್ಷಿ ಕೂಡ ಹಾಗೆಯೇ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.
ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ತರಾತುರಿಯಲ್ಲಿ ಮದುವೆ ಆದರು. ಇವರ ಮದುವೆ ಕೂಡ ಗುಟ್ಟಾಗಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ಸೋನಾಕ್ಷಿ ಇಷ್ಟೊಂದು ಆತುರ ಮಾಡಿ ಮದುವೆ ಆದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಆದರೆ, ಇದಕ್ಕೆ ಸೋನಾಕ್ಷಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಸೋನಾಕ್ಷಿ ಅನ್ಯ ಧರ್ಮದವರನ್ನು ಮದುವೆ ಆಗಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸೋನಾಕ್ಷಿ ಧರ್ಮ ಬದಲಿಸಿದರು ಎಂದು ಕೂಡ ಕೆಲವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಇನ್ಸ್ಟಂಟ್ ಬಾಲಿವುಡ್ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಸೋನಾಕ್ಷಿ ಹಾಗೂ ಇತರರು ಆಸ್ಪತ್ರೆಯಿಂದ ಹೊರ ಹೋಗುತ್ತಿರುವ ವಿಡಿಯೋ ಇದೆ. ಪಾಪರಾಜಿಗಳಿಂದ ಅವರು ದೂರವೇ ಇರುವ ಪ್ರಯತ್ನ ಮಾಡಿದ್ದಾರೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಆದ ತಿಂಗಳ ಬಳಿಕ ಮಗು ಪಡೆಯೋ ಘೋಷಣೆ ಮಾಡಿದರು. ಆ ಬಳಿಕ ಏಳೇ ತಿಂಗಳಲ್ಲಿ ಮಗಳು ಜನಿಸಿದಳು. ಅವಳಿಗೆ ರಹಾ ಎಂದು ಹೆಸರು ಇಡಲಾಗಿದೆ. ಈಗ ಸೋನಾಕ್ಷಿ ಕೂಡ ಹೀಗೆಯೇ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ತಂದೆ-ತಾಯಿಯಿಂದಲೇ ಹಣ ಪಡೆದಿದ್ದಾರೆ ಸೋನಾಕ್ಷಿ ಸಿನ್ಹಾ; ಒಟ್ಟೂ ಸಾಲ ಎಷ್ಟು?
ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಭೇಟಿ ಆಗಿದ್ದು ಸಲ್ಮಾನ್ ಖಾನ್ ಮೂಲಕ. ಇಬ್ಬರ ಪರಿಚಯ ಗೆಳೆತನಕ್ಕೆ ತಿರುಗಿತು. ಆ ಬಳಿಕ ಪ್ರೀತಿ ಮೂಡಿತು. ಈಗ ಹಿರಿಯರ ಸಮ್ಮುಖದಲ್ಲೇ ಇವರ ಮದುವೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.