ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್; ಗಂಡು ಮಗುವಿಗೆ ಜನ್ಮ ನೀಡಿದ ನಟಿ

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ದಂಪತಿ ಎರಡನೇ ಮಗುವಿಗೆ ಸ್ವಾಗತ ಕೋರಿದ್ದಾರೆ. ಮಾರ್ಚ್ 29ರಂದು ಸೋನಂ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಇನ್​​ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಮೊದಲ ಮಗ ವಾಯುಗೆ ಈಗ ಒಬ್ಬ ತಮ್ಮ ಸಿಕ್ಕಿದ್ದಾನೆ. ಕುಟುಂಬ ವಿಸ್ತಾರವಾಗಿದ್ದು, ನಾಲ್ಕು ಜನರಿಗೆ ಬಡ್ತಿ ಪಡೆದಿದೆ.

ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್; ಗಂಡು ಮಗುವಿಗೆ ಜನ್ಮ ನೀಡಿದ ನಟಿ
ಸೋನಂ-ಆನಂದ್

Updated on: Mar 30, 2026 | 8:36 AM

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಸೋನಂ ಎರಡನೇ ಬಾರಿಗೆ ತಾಯಿ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಮಾರ್​ಚ್​ 29ರಂದು ಮಗು ಜನಿಸಿದೆ. ಈ ಬಗ್ಗೆ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೋನಂ ಕಪೂರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಸೋನಂ ಕುಟುಂಬ ಮತ್ತಷ್ಟು ವಿಸ್ತೃತವಾಗಿದೆ.

ಸೋನಂ ಕಪೂರ್ ಅವರು ಇನ್​​ಸ್ಟಾಗ್ರಾಮ್ ಅಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು’ ಎಂದು ಅವರು ಬರೆದುಕೊಂಡಿದ್ದಾರೆ.

ಸೋನಂ ಕಪೂರ್ ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ‘ಸೋನಾ ಹಾಗೂ ಆನಂದ್​​ಗೆ ಅಭಿನಂದನೆ’ ಎಂದು ಕರೀನಾ ಕಪೂರ್ ಕಮೆಂಟ್ ಮಾಡಿದ್ದಾರೆ. ಹುಮಾ ಖುರೇಷಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿ ಹಾಕಿದ್ದಾರೆ.

ಇದನ್ನೂ ಓದಿ: ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್

2025ರ ನವೆಂಬರ್ ಅಲ್ಲಿ ಸೋನಂ ಕಪೂರ್ ಅವರು ಪ್ರೆಗ್ನೆನ್ಸಿ ಬಗ್ಗೆ ಘೋಷಣೆ ಮಾಡಿದ್ದರು. ‘ತಾಯಿ’ ಎಂದು ಅವರು ಕ್ಯಾಪ್ಶನ್ ನೀಡಿದ್ದರು. 2018ರಲ್ಲಿ ಆನಂದ್ ಜೊತೆ ಸೋನಂ ಕಪೂರ್ ವಿವಾಹ ನಡೆಯಿತು. 2022ರಲ್ಲಿ ಗಂಡು ಮಗು ಜನಿಸಿತು. ಇದಕ್ಕೆ ‘ವಾಯು’ ಎಂದು ಹೆಸರು ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us