ಮೌಲಾನಾ ಸಜ್ಜಾದ್ ನೊಮಾನಿ ಭೇಟಿ ಮಾಡಿ ಜನರ ಟೀಕೆಗೆ ಗುರಿಯಾದ ಸ್ವರಾ ಭಾಸ್ಕರ್

ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿ ವಿವಾದ ಮಾಡಿಕೊಂಡಿದ್ದ ವ್ಯಕ್ತಿ ಮೌಲಾನಾ ಸಜ್ಜಾದ್ ನೊಮಾನಿ. ಸ್ತ್ರೀಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದವರು ಸ್ವರಾ ಭಾಸ್ಕರ್​. ಹೀಗೆ ಸೈದ್ಧಾಂತಿಕವಾಗಿ ವಿರೋಧ ಇರುವ ಇವರಿಬ್ಬರು ಈಗ ಭೇಟಿ ಆಗಿದ್ದಾರೆ. ಹಾಗಾಗಿ ಸ್ವರಾ ಅವರ ಬೂಟಾಟಿಕೆಯನ್ನು ಜನರು ಖಂಡಿಸಿದ್ದಾರೆ. ಅವರ ಫೋಟೋ ಸಖತ್ ವೈರಲ್ ಆಗಿದೆ.

ಮೌಲಾನಾ ಸಜ್ಜಾದ್ ನೊಮಾನಿ ಭೇಟಿ ಮಾಡಿ ಜನರ ಟೀಕೆಗೆ ಗುರಿಯಾದ ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್​, ಮೌಲಾನಾ ಸಜ್ಜಾದ್​ ನೊಮಾನಿ, ಫಹಾದ್​ ಅಹ್ಮದ್

Updated on: Nov 18, 2024 | 6:51 PM

ನಟಿ ಸ್ವರಾ ಭಾಸ್ಕರ್​ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇತ್ತೀಚೆಗೆ ಅವರು ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಸಜ್ಜಾದ್ ನೊಮಾನಿಯನ್ನು ಭೇಟಿ ಮಾಡಿದ್ದಾರೆ. ಅವರ ಜೊತೆ ಪತಿ ಫಹಾದ್ ಅಹ್ಮದ್ ಕೂಡ ಕಾಣಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್​, ಮೌಲಾನಾ ಸಜ್ಜಾದ್ ನೊಮಾನಿ ಹಾಗೂ ಫಹಾದ್ ಅಹ್ಮದ್ ಜೊತೆಯಾಗಿ ಇರುವ ಫೋಟೋಗಳು ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಬಲವಾದ ಕಾರಣ ಇದೆ.

ಸ್ವರಾ ಭಾಸ್ಕರ್ ಅವರು ಯಾವಾಗಲೂ ನೇರ ನಡೆ-ನುಡಿಯಿಂದ ಹೆಸರುವಾಸಿ ಆಗಿದ್ದರು. ಸ್ತ್ರೀವಾದಿ ವಿಚಾರಗಳ ಮೂಲಕ ಅವರು ಗುರುತಿಸಿಕೊಂಡಿದ್ದರು. ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಅವರು ಆಗಾಗ ಧ್ವನಿ ಎತ್ತಿದ್ದರು. ಆದರೆ ಈಗ ಸ್ತ್ರೀ ವಿರೋಧಿ ಮನಸ್ಥಿತಿ ಇರುವ ಮೌಲಾನಾ ಸಜ್ಜಾದ್ ನೊಮಾನಿ ಜೊತೆ ಅವರು ಖುಷಿ ಖುಷಿಯಾಗಿ ಪೋಸ್ ನೀಡಿರುವುದರಿಂದ ಜನರು ಟೀಕೆ ಮಾಡುತ್ತಿದ್ದಾರೆ.

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದು ಈ ಮೊದಲು ಮೌಲಾನಾ ಸಜ್ಜಾದ್ ನೊಮಾನಿ ಹೇಳಿಕೆ ನೀಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಅಂಥ ವ್ಯಕ್ತಿಯನ್ನು ಈಗ ಸ್ವರಾ ಭಾಸ್ಕರ್​ ಅವರು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ‘ಸ್ವರಾ ಭಾಸ್ಕರ್​ ಅವರು ಹೇಳೋದು ಒಂದು, ಮಾಡೋದು ಇನ್ನೊಂದು. ಅವರಂಥ ಬೂಟಾಟಿಕೆಯ ವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಸ್ವರಾ ಭಾಸ್ಕರ್​ ನಟಿಸಿದ್ದಾರೆ. ಫಹಾದ್ ಅಹ್ಮದ್ ಜೊತೆ ಅವರು ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ಬಳಿಕ ಅವರನ್ನು ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಯಿತು. ಈಗ ಅವರು ಮೌಲಾನಾ ಸಜ್ಜಾದ್ ನೊಮಾನಿ ಭೇಟಿ ಮಾಡಿರುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ಬಗ್ಗೆ ಸ್ವರಾ ಭಾಸ್ಕರ್​ ಪ್ರತಿಕ್ರಿಯೆ ನೀಡುವುದು ಬಾಕಿ ಇದೆ.

ಇದನ್ನೂ ಓದಿ: ತಾಯಿಯಾದ ಬಳಿಕ ದೇಹದ ತೂಕ ಹೆಚ್ಚಿದ್ದಕ್ಕೆ ಸ್ವರಾ ಭಾಸ್ಕರ್​​ಗೆ ಬಾಡಿ ಶೇಮಿಂಗ್​

ಸ್ವರಾ ಭಾಸ್ಕರ್​ ಪತಿ ಫಹಾದ್ ಅಹ್ಮದ್ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್​ಸಿಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಅವರು ಪತ್ನಿಯ ಜೊತೆ ಮೌಲಾನಾ ಸಜ್ಜಾದ್ ನೊಮಾನಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us