‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಸಿನಿಮಾ ‘ಸಿ.ಡಿ’ ಪೋಸ್ಟರ್​ ವೈರಲ್​

ಅದಾ ಶರ್ಮ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ‘ದಿ ಗೇಮ್​ ​ಆಫ್​​ ಗಿರ್ಗಿಟ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರ ಇದೆ. ಆ ಸಿನಿಮಾ ರಿಲೀಸ್​ ಆಗುವುದಕ್ಕಿಂತ ಮುನ್ನವೇ ‘ಸಿ.ಡಿ’ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದರ ಪೋಸ್ಟರ್​ ಗಮನ ಸೆಳೆಯುತ್ತಿದೆ.

‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಸಿನಿಮಾ ‘ಸಿ.ಡಿ’ ಪೋಸ್ಟರ್​ ವೈರಲ್​
ಅದಾ ಶರ್ಮಾ

Updated on: Aug 18, 2023 | 5:42 PM

ನಟಿ ಅದಾ ಶರ್ಮಾ (Adah Sharma) ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಿಂದ. ಆ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿತು. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಮತ್ತೊಂದು ಹೊಸ ಸಿನಿಮಾ ಅನೌನ್ಸ್​ ಆಗಿದೆ. ಈ ಚಿತ್ರಕ್ಕೆ ‘ಸಿ.ಡಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಪೋಸ್ಟರ್​ ನೋಡಿದರೆ ತಿಳಿಯುತ್ತದೆ ಇದೊಂದು ಹಾರರ್​ ಸಿನಿಮಾ. ಭಯಾನಕವಾಗಿ ಕಾಣುವಂತೆ ಈ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಈ ಮೂಲಕ ಕೌತುಕ ಮೂಡಿಸಲಾಗಿದೆ. ‘ದಿ ಕೇರಳ ಸ್ಟೋರಿ’ ರೀತಿ ‘ಸಿ.ಡಿ’ ಸಿನಿಮಾ (CD Movie) ಕೂಡ ಸಕ್ಸಸ್​ ಆಗಲಿ ಎಂದು ಅಭಿಮಾನಿಗಳು ಅದಾ ಶರ್ಮಾಗೆ ಶುಭಾಶಯ ತಿಳಿಸುತ್ತಿದ್ದಾರೆ.

ಏನಿದು ‘ಸಿ.ಡಿ’ ಅಂದ್ರೆ? ಪೋಸ್ಟರ್​ ನೋಡಿದ ಎಲ್ಲರಿಗೂ ಇಂಥದ್ದೊಂದು ಪ್ರಶ್ನೆ ಮೂಡಿದೆ. ‘ಕ್ರಿಮಿನಲ್​ ಅಥವಾ ಡೆವಿಲ್​’ ಎಂಬ ಟ್ಯಾಗ್​ಲೈನ್​ ಇದೆ. ಹಾಗಾಗಿ ಸಿ ಎಂದರೆ ಕ್ರಿಮಿನಲ್​, ಡಿ ಎಂದರೆ ಡೆವಿಲ್​ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ಇದು ಮಹಿಳಾ ಪ್ರಧಾನ ಕಥೆ ಹೊಂದಿರುವ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ
‘ಎಸ್​ಎಸ್​ಸಿಎಂ ಪ್ರೊಡಕ್ಷನ್ಸ್​’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಕೃಷ್ಣ ಅಣ್ಣಂ ಅವರು ನಿರ್ದೇಶನ ಮಾಡಲಿದ್ದಾರೆ. ಆರ್​ಆರ್​ ಧ್ರುವನ್​ ಅವರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘ಸಿ.ಡಿ’ ಸಿನಿಮಾ ಪೋಸ್ಟರ್​:

ಅದಾ ಶರ್ಮ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ‘ದಿ ಗೇಮ್​ ​ಆಫ್​​ ಗಿರ್ಗಿಟ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರ ಇದೆ. ಯುವಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ್ದ ಬ್ಲ್ಯೂ ವೇಲ್​ ಗೇಮ್​ ಕುರಿತ ಕಥಾಹಂದರವನ್ನು ಇಟ್ಟುಕೊಂಡು ‘ದಿ ಗೇಮ್​ ​ಆಫ್​​ ಗಿರ್ಗಿಟ್​’ ಚಿತ್ರ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಜೊತೆ ಶ್ರೇಯಸ್​ ತಲ್ಪಡೆ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

Adah Sharma: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ರಣವಿಕ್ರಮ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗುವ ಮೂಲಕ ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರಾದರು. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ತೊಡಗಿಕೊಂಡಿದ್ದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಈ ವರ್ಷ ಬಿಡುಗಡೆ ಆದ ‘ದಿ ಕೇರಳ ಸ್ಟೋರಿ’ ಸಿನಿಮಾದಿಂದ ಅವರ ಅದೃಷ್ಟವೇ ಬದಲಾಯಿತು. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us