ರಣಬೀರ್​ ಕಪೂರ್​ ಜತೆ ತೃಪ್ತಿ ದಿಮ್ರಿ ಬೋಲ್ಡ್​ ಪಾತ್ರ: ‘ಅನಿಮಲ್​’ ಚಿತ್ರಕ್ಕೆ ಈ ಸುಂದರಿ ಆಯ್ಕೆ ಆಗಿದ್ದು ಹೇಗೆ?

‘ಅನಿಮಲ್​’ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಆದರೂ ಕೂಡ ತೃಪ್ತಿ ದಿಮ್ರಿ ಅವರ ಪಾತ್ರ ಹೈಲೈಟ್​ ಆಗಿದೆ. ಒಂದು ವರ್ಗದ ಪ್ರೇಕ್ಷಕರು ಈ ಸಿನಿಮಾವನ್ನು ತೆಗಳುತ್ತಿದ್ದಾರೆ. ಕ್ರೌರ್ಯದ ದೃಶ್ಯಗಳು ಅತಿಯಾಗಿವೆ. ಬಳಸಿದ ಭಾಷೆ ಕೀಳುಮಟ್ಟದಲ್ಲಿದೆ. ಮಹಿಳೆಯರ ಪಾತ್ರಗಳನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂಬಿತ್ಯಾದಿ ಟೀಕೆಗಳು ವ್ಯಕ್ತವಾಗಿವೆ.

ರಣಬೀರ್​ ಕಪೂರ್​ ಜತೆ ತೃಪ್ತಿ ದಿಮ್ರಿ ಬೋಲ್ಡ್​ ಪಾತ್ರ: ‘ಅನಿಮಲ್​’ ಚಿತ್ರಕ್ಕೆ ಈ ಸುಂದರಿ ಆಯ್ಕೆ ಆಗಿದ್ದು ಹೇಗೆ?
ತೃಪ್ತಿ ದಿಮ್ರಿ

Updated on: Dec 10, 2023 | 7:04 AM

ಬಾಲಿವುಡ್​ ನಟಿ ತೃಪ್ತಿ ದಿಮ್ರಿ (Tripti Dimri) ಅವರು ದೇಶಾದ್ಯಂತ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಅವರನ್ನು ಹೊಸ ನ್ಯಾಷನಲ್​ ಕ್ರಶ್​ ಎಂದು ಕೂಡ ಅನೇಕರು ಕರೆಯುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಅನಿಮಲ್​’ (Animal) ಸಿನಿಮಾದ ಸಕ್ಸಸ್​. ಹೌದು, ಡಿಸೆಂಬರ್​ 1ರಂದು ತೆರೆಕಂಡ ಈ ಚಿತ್ರ ಸೂಪರ್​ ಹಿಟ್​ ಆಗಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜೊತೆ ತೃಪ್ತಿ ದಿಮ್ರಿ ನಟಿಸಿದ್ದಾರೆ. ಇಬ್ಬರ ನಡುವಿನ ಬೆಡ್​ ರೂಂ ದೃಶ್ಯ ಸಖತ್​ ಚರ್ಚೆ ಹುಟ್ಟುಹಾಕಿದೆ. ಅಂದಹಾಗೆ, ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರು ತಮ್ಮನ್ನು ಈ ಸಿನಿಮಾಗೆ ಆಯ್ಕೆ ಮಾಡಿದ್ದು ಹೇಗೆ ಎಂಬ ಬಗ್ಗೆ ತೃಪ್ತಿ ದಿಮ್ರಿ ಅವರು ತಿಳಿಸಿದ್ದಾರೆ.

ಈ ಹಿಂದೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ‘ಕಲಾ’ ವೆಬ್​ ಸಿರೀಸ್​ನಲ್ಲಿ ತೃಪ್ತಿ ದಿಮ್ರಿ ಅವರು ನಟಿಸಿದ್ದರು. ಅದರಲ್ಲಿ ಅವರದ್ದೇ ಮುಖ್ಯ ಪಾತ್ರ. ಆ ವೆಬ್​ ಸಿರೀಸ್​ನಲ್ಲಿನ ನಟನೆಯನ್ನು ನೋಡಿ ಸಂದೀಪ್​ ರೆಡ್ಡಿ ವಂಗಾ ಅವರು ಫಿದಾ ಆಗಿದ್ದರು. ಬಳಿಕ ತೃಪ್ತಿ ದಿಮ್ರಿಗೆ ಕರೆ ಮಾಡಿ ಅವರು ಆಫರ್​ ನೀಡಿದರು. ಈ ಅವಕಾಶವನ್ನು ತೃಪ್ತಿ ಕೂಡ ಸಂತೋಷದಿಂದ ಒಪ್ಪಿಕೊಂಡರು. ಈಗ ‘ಅನಿಮಲ್​’ ಸೂಪರ್​ ಹಿಟ್​ ಆಗಿದ್ದು ಅವರಿಗೆ ಖುಷಿ ನೀಡಿದೆ. ತೃಪ್ತಿ ಅವರಿಗೆ ಹೊಸ ಹೊಸ ಆಫರ್​ಗಳು ಬರಲು ಆರಂಭಿಸಿವೆ.

ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ತೃಪ್ತಿ ಬೋಲ್ಡ್ ಅವತಾರ

‘ಅನಿಮಲ್​’ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಆದರೂ ಕೂಡ ತೃಪ್ತಿ ದಿಮ್ರಿ ಅವರ ಪಾತ್ರ ಹೈಲೈಟ್​ ಆಗಿದೆ. ಈ ಸಿನಿಮಾದಲ್ಲಿ ಬಾಬಿ ಡಿಯೋಲ್​, ಅನಿಲ್​ ಕಪೂರ್​, ಶಕ್ತಿ ಕಪೂರ್​ ಮುಂತಾದರು ಕೂಡ ನಟಿಸಿದ್ದಾರೆ. ಹಲವು ಶೇಡ್​ನಲ್ಲಿ ರಣಬೀರ್​ ಕಪೂರ್​ ನಟಿಸಿದ್ದಾರೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 500 ಕೋಟಿ ರೂಪಾಯಿ ದಾಟಿದೆ.

ಒಂದು ವರ್ಗದ ಪ್ರೇಕ್ಷಕರು ‘ಅನಿಮಲ್​’ ಸಿನಿಮಾವನ್ನು ತೆಗಳುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೌರ್ಯದ ದೃಶ್ಯಗಳು ಅತಿಯಾಗಿವೆ. ಬೆಡ್​ ರೂಂ ಸೀನ್​ಗಳು ಮುಜುಗರ ತರುವಂತಿವೆ. ಬಳಸಿದ ಭಾಷೆ ಕೀಳುಮಟ್ಟದಲ್ಲಿದೆ. ಮಹಿಳೆಯರ ಪಾತ್ರಗಳನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂಬಿತ್ಯಾದಿ ಟೀಕೆಗಳು ವ್ಯಕ್ತವಾಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us