‘ಮಕ್ಕಳು ಬೇಕು ಎಂಬ ಕಾರಣಕ್ಕೆ ಸೈಫ್​ ಜೊತೆ ಮದುವೆಯಾದೆ’: ಕರೀನಾ ಕಪೂರ್​ ಖಾನ್​

|

Updated on: Nov 14, 2023 | 2:49 PM

ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ತೈಮೂರ್​ ಅಲಿ ಖಾನ್​, ಜಹಂಗೀರ್​ ಅಲಿ ಖಾನ್​ ಎಂದು ಮಕ್ಕಳಿಗೆ ಹೆಸರು ಇಡಲಾಗಿದೆ. ಮಕ್ಕಳು ಮತ್ತು ಸಂಸಾರಕ್ಕೆ ಕರೀನಾ ಅವರು ಈಗ ಹೆಚ್ಚು ಸಮಯ ನೀಡುತ್ತಿದ್ದಾರೆ. ಮದುವೆ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ಅವರು ಬಹಳ ಚ್ಯೂಸಿ ಆಗಿದ್ದಾರೆ.

‘ಮಕ್ಕಳು ಬೇಕು ಎಂಬ ಕಾರಣಕ್ಕೆ ಸೈಫ್​ ಜೊತೆ ಮದುವೆಯಾದೆ’: ಕರೀನಾ ಕಪೂರ್​ ಖಾನ್​
ಸೈಫ್​ ಅಲಿ ಖಾನ್​, ಕರೀನಾ ಕಪೂರ್​
Follow us on

ನಟಿ ಕರೀನಾ ಕಪೂರ್​ (Kareena Kapoor) ಅವರು ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದ್ದಾಗಲೇ ಮದುವೆ ಆದರು. ಅದಕ್ಕೂ ಮುನ್ನ ಅವರು ಶಾಹಿದ್​ ಕಪೂರ್​ ಜೊತೆ ಡೇಟಿಂಗ್​ ಮಾಡುತ್ತಿದ್ದರು. ಆ ಬಳಿಕ ಸೈಫ್​ ಅಲಿ ಖಾನ್​ (Saif Ali Khan) ಜೊತೆ ಅವರಿಗೆ ಪ್ರೀತಿ ಚಿಗುರಿತು. ಅದಾಗಲೇ ಸೈಫ್​ ಅವರು ಅಮೃತಾ ಸಿಂಗ್​ ಜೊತೆ ಮದುವೆಯಾಗಿ, ವಿಚ್ಛೇದನವನ್ನೂ ಪಡೆದಿದ್ದರು. ಸೈಫ್​ ಅವರನ್ನು ತಾವು ಮದುವೆ ಆಗಿದ್ದು ಯಾಕೆ ಎಂಬ ಪ್ರಶ್ನೆಗೆ ಈಗ ಕರೀನಾ ಕಪೂರ್​ ಖಾನ್​ (Kareena Kapoor Khan) ಉತ್ತರ ನೀಡಿದ್ದಾರೆ. ಮಕ್ಕಳನ್ನು ಪಡೆಯುವ ಉದ್ದೇಶದಿಂದ ತಾವು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದಾಗಿ ಅವರು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

‘ಮಕ್ಕಳನ್ನು ಪಡೆಯಬೇಕು ಎಂಬ ಕಾರಣದಿಂದಲೇ ಮದುವೆ ಆಗುವುದು ಅಲ್ಲವೇ? ಆ ಉದ್ದೇಶ ಇಲ್ಲ ಎಂಬುದಾದರೆ ಈ ಕಾಲದಲ್ಲಿ ನೀವು ಲಿವಿಂಗ್​ ಟುಗೆದರ್​ನಲ್ಲಿ ಇರಬಹುದು. ನಾನು ಮತ್ತು ಸೈಫ್​ ಅಲಿ ಖಾನ್​ ಅವರು 5 ವರ್ಷ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದೆವು. ನಮಗೆ ಮಕ್ಕಳನ್ನು ಪಡೆಯಬೇಕು ಎಂದು ಎನಿಸಿದಾಗ ನಾವು ಮದುವೆ ಎಂಬ ಮುಂದಿನ ಹಂತಕ್ಕೆ ಕಾಲಿಟ್ಟೆವು’ ಎಂದು ಕರೀನಾ ಕಪೂರ್​ ಖಾನ್​ ಹೇಳಿದ್ದಾರೆ. 2012ರಲ್ಲಿ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಅವರು ಮದುವೆಯಾದರು.

ಇದನ್ನೂ ಓದಿ: ‘ಸಿಂಗ್​ ಅಗೇನ್​’ ಚಿತ್ರತಂಡದಿಂದ ಬಿಡುಗಡೆ ಆಯ್ತು ಕರೀನಾ ಕಪೂರ್​ ಫಸ್ಟ್​ ಲುಕ್​ ಪೋಸ್ಟರ್​

ಕರೀನಾ ಅವರು ತಾವು ಹೇಳಿದಂತೆಯೇ ಮಕ್ಕಳು ಮತ್ತು ಸಂಸಾರಕ್ಕೆ ಈಗ ಹೆಚ್ಚು ಸಮಯ ನೀಡುತ್ತಿದ್ದಾರೆ. ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ತೈಮೂರ್​ ಅಲಿ ಖಾನ್​, ಜಹಂಗೀರ್​ ಅಲಿ ಖಾನ್​ ಎಂದು ಮಕ್ಕಳಿಗೆ ಹೆಸರು ಇಡಲಾಗಿದೆ. ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ ಸೈಫ್​ ಮತ್ತು ಕರೀನಾ ಅವರು ತಮ್ಮ ಮಕ್ಕಳನ್ನು ಗುಟ್ಟಾಗಿ ಬೆಳೆಸುತ್ತಿಲ್ಲ. ಆಗಾಗ ಮಾಧ್ಯಮಗಳ ಎದುರಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ತೈಮೂರ್​ ಅಲಿ ಖಾನ್​ ಸ್ಟಾರ್​ ಆಗಿದ್ದಾನೆ ಎಂದರೂ ತಪ್ಪಿಲ್ಲ.

ಇದನ್ನೂ ಓದಿ: ಕರೀನಾ ಕಪೂರ್ ನಡೆದುಕೊಂಡ ರೀತಿಗೆ ನಾರಾಯಣಮೂರ್ತಿ ಬೇಸರ; ಸುಧಾಮೂರ್ತಿ ಉತ್ತರ ಏನು?

ಮದುವೆ ಬಳಿಕ ಕರೀನಾ ಕಪೂರ್​ ಖಾನ್​ ಅವರ ಆದ್ಯತೆಗಳಲ್ಲಿ ಬದಲಾವಣೆ ಆಗಿದೆ. ಮೊದಲು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದ ಅವರು ಈಗ ಕೊಂಚ ಚ್ಯೂಸಿ ಆಗಿದ್ದಾರೆ. ಮಕ್ಕಳ ಆರೈಕೆಗೆ ಅವರು ಹೆಚ್ಚು ಸಮಯ ನೀಡುತ್ತಿದ್ದಾರೆ. ತಮಗೆ ಸೂಕ್ತ ಎನಿಸುವಂತಹ ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ರೋಹಿತ್​ ಶೆಟ್ಟಿ ನಿರ್ದೇಶನದ ‘ಸಿಂಗ್​ ಅಗೇನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತಾರಾಗಣದ ಈ ಸಿನಿಮಾದಲ್ಲಿ ಅಜಯ್​ ದೇವಗನ್​, ದೀಪಿಕಾ ಪಡುಕೋಣೆ, ಟೈಗರ್​ ಶ್ರಾಫ್​, ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​ ಕೂಡ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರತಂಡದಿಂದ ಕರೀನಾ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.