Ranbir Kapoor: ‘ತು ಜೂಟಿ ಮೈ ಮಕ್ಕಾರ್​’ ಚಿತ್ರಕ್ಕೆ ಮೊದಲ ದಿನ ಆದ ಕಲೆಕ್ಷನ್​ ಎಷ್ಟು? ಇಲ್ಲಿದೆ ರಿಪೋರ್ಟ್​

Tu Jhoothi Main Makkaar | Box Office Collection: ರಣಬೀರ್​ ಕಪೂರ್​ ನಟನೆಯ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ದೊಡ್ಡ ಓಪನಿಂಗ್​ ಪಡೆದುಕೊಂಡಿಲ್ಲ. ಆದರೆ ವೀಕೆಂಡ್​ನಲ್ಲಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಏರಿಕೆ ಆಗುವ ಸಾಧ್ಯತೆ ಇದೆ.

Ranbir Kapoor: ‘ತು ಜೂಟಿ ಮೈ ಮಕ್ಕಾರ್​’ ಚಿತ್ರಕ್ಕೆ ಮೊದಲ ದಿನ ಆದ ಕಲೆಕ್ಷನ್​ ಎಷ್ಟು? ಇಲ್ಲಿದೆ ರಿಪೋರ್ಟ್​
ಶ್ರದ್ದಾ ಕಪೂರ್, ರಣಬೀರ್ ಕಪೂರ್

Updated on: Mar 09, 2023 | 5:28 PM

ಬಾಲಿವುಡ್​ ಸಿನಿಮಾಗಳು ನಿಧಾನವಾಗಿ ತಮ್ಮ ತಾಕತ್ತು ಪ್ರದರ್ಶಿಸುತ್ತಿವೆ. ಶಾರುಖ್​ ಖಾಣ್​ ನಟನೆಯ ‘ಪಠಾಣ್​’ ಸಿನಿಮಾ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿದ ನಂತರ ಇನ್ನುಳಿದ ನಿರ್ಮಾಪಕರಿಗೂ ಧೈರ್ಯ ಬಂದಿದೆ. ಅದೇ ಹುಮ್ಮಸ್ಸಿನಲ್ಲೇ ‘ತು ಜೂಟಿ ಮೈ ಮಕ್ಕಾರ್​’ (Tu Jhoothi Main Makkaar) ಸಿನಿಮಾ ರಿಲೀಸ್​ ಆಯಿತು. ಮಾರ್ಚ್​ 8ರಂದು ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ 15.73 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಮತ್ತು ಶ್ರದ್ಧಾ ಕಪೂರ್​ (Shraddha Kapoor) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಲವ್​ ರಂಜನ್​ ಅವರು ‘ತು ಜೂಟಿ ಮೈ ಮಕ್ಕಾರ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

2022ರಲ್ಲಿ ರಣಬೀರ್​ ಕಪೂರ್​ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಭಾರತದ ಮಾರುಕಟ್ಟೆಯಲ್ಲಿ ಆ ಸಿನಿಮಾ ಮೊದಲ ದಿನ ಬರೋಬ್ಬರಿ 36 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾಗೆ ಅಷ್ಟು ದೊಡ್ಡ ಓಪನಿಂಗ್​ ಸಿಕ್ಕಿಲ್ಲ. ಕೇವಲ 15.73 ಕೋಟಿ ರೂಪಾಯಿ ಗಳಿಕೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಕಲೆಕ್ಷನ್​ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ
Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್​
‘ಹೆಣ್ಣು ಮಗು ಬೇಕು’: ಮನದ ಆಸೆ ತಿಳಿಸಿ, ಮಕ್ಕಳನ್ನು ನೋಡಿಕೊಳ್ಳುವುದು ಕಲಿಯುತ್ತಿರುವ ರಣಬೀರ್​ ಕಪೂರ್
10ನೇ ಕ್ಲಾಸ್​ನಲ್ಲಿ ರಣಬೀರ್​ ಕಪೂರ್​ ಪಡೆದ ಅಂಕ ಎಷ್ಟು? ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ
ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್​ ಕಪೂರ್​

ಪ್ರತಿ ಶುಕ್ರವಾರ ಹೊಸ ಸಿನಿಮಾ ರಿಲೀಸ್​ ಮಾಡುವುದು ವಾಡಿಕೆ. ಆದರೆ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ರಿಲೀಸ್​ ಆಗಿದ್ದು ಬುಧವಾರ (ಮಾರ್ಚ್​ 8). ಉತ್ತರ ಭಾರತದಲ್ಲಿ ಹೆಚ್ಚು ಕ್ರೇಜ್​ ಹೊಂದಿರುವ ಹೋಳಿ ಹಬ್ಬದ ಲಾಭ ಪಡೆಯುವ ಸಲುವಾಗಿ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ಅದರಿಂದ ನಿರ್ಮಾಪಕರಿಗೆ ಹೆಚ್ಚೇನೂ ವರ್ಕೌಟ್​ ಆದಂತೆ ಕಾಣುತ್ತಿಲ್ಲ. ಗುರುವಾರ (ಮಾರ್ಚ್​ 9), ಶುಕ್ರವಾರ (ಮಾರ್ಚ್​ 10) ಕೂಡ ಸಾಧಾರಣ ಗಳಿಕೆ ಆಗುವ ಸಾಧ್ಯತೆ ಇದೆ. ಆದರೆ ವೀಕೆಂಡ್​ನಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಬಾಕ್ಸ್​ ಆಫೀಸ್​ ಪಂಡಿತರು ಅಂದಾಜಿಸುತ್ತಿದ್ದಾರೆ.

ರಣಬೀರ್​ ಕಪೂರ್​ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಸಾಲು ಸಾಲು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಅವರು ನಟಿಸಿರುವ ‘ಅನಿಮಲ್​’ ಸಿನಿಮಾ ಈ ವರ್ಷ ಆಗಸ್ಟ್​ ತಿಂಗಳಲ್ಲಿ ತೆರೆಗೆ ಬರಲಿದೆ. ಆ ಚಿತ್ರದ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಕ್ರೇಜ್​ ಇದೆ. ಇನ್ನು, ‘ಬ್ರಹ್ಮಾಸ್ತ್ರ 2’ ಚಿತ್ರದಲ್ಲೂ ರಣಬೀರ್​ ಕಪೂರ್​ ಅವರು ನಟಿಸಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:28 pm, Thu, 9 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us