ಹಿಂದಿ ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ನಲ್ಲಿ ಸ್ಪರ್ಧಿಸಿದ ಬಳಿಕ ನಟಿ ಉರ್ಫಿ ಜಾವೇದ್ (Urfi Javed) ಅವರ ಖ್ಯಾತಿ ಹೆಚ್ಚಿತು. ಆದರೆ ಅವರು ಅದಕ್ಕಿಂತಲೂ ಹೆಚ್ಚು ಪ್ರಚಾರ ಪಡೆದಿದ್ದು ಚಿತ್ರ-ವಿಚಿತ್ರ ಬಟ್ಟೆ ಧರಿಸುವ ಮೂಲಕ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಡ್ರೆಸ್ ಹಾಕಿಕೊಂಡು ಫೋಟೋಗೆ ಪೋಸ್ ನೀಡುವುದನ್ನೇ ಉರ್ಫಿ ಜಾವೇದ್ ಅವರು ಕಾಯಕ ಮಾಡಿಕೊಂಡಿದ್ದಾರೆ. ಪ್ರತಿದಿನ ಅವರ ಹಾಟ್ ಫೋಟೋಗಳು (Urfi Javed Photos) ವೈರಲ್ ಆಗುತ್ತವೆ. ಇದಕ್ಕಾಗಿ ಅವರು ಜನರಿಂದ ಕಟು ಟೀಕೆ ಎದುರಿಸುತ್ತಿದ್ದಾರೆ ಕೂಡ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಉರ್ಫಿ ಜಾವೇದ್ ತಗ್ಗುತ್ತಿಲ್ಲ. ಈಗ ಅವರ ಜೊತೆ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಹಿಂದುಸ್ತಾನಿ ಭಾವು (Hindustani Bhau) ಕಿರಿಕ್ ಮಾಡಿಕೊಂಡಿದ್ದಾರೆ.
ಅನೇಕರನ್ನು ಟ್ರೋಲ್ ಮಾಡುವ ಮೂಲಕ ಹಿಂದುಸ್ತಾನಿ ಭಾವು ಫೇಮಸ್ ಆಗಿದ್ದಾರೆ. ಈಗ ಅವರು ಉರ್ಫಿ ಜಾವೇದ್ ಬಗ್ಗೆ ಮಾತನಾಡಿದ್ದಾರೆ. ಉರ್ಫಿ ಈ ರೀತಿ ಬಟ್ಟೆ ಹಾಕುವುದನ್ನು ನಿಲ್ಲಿಸಬೇಕು. ಇದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರು ಸುಧಾರಿಸದೇ ಇದ್ದರೆ ತಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂದುಸ್ತಾನಿ ಭಾವು ವಿಡಿಯೋದಲ್ಲಿ ಹೇಳಿದ್ದಾರೆ. ಅದಕ್ಕೆ ಉರ್ಫಿ ಜಾವೇದ್ ಪ್ರತಿಕ್ರಿಯೆ ನೀಡಿದ್ದಾರೆ.
‘ನೀವು ಬೈಯ್ಯುವುದು ಭಾರತದ ಸಂಸ್ಕೃತಿಯೇ? ನಿಮ್ಮ ಬೈಗುಳದಿಂದ ಎಷ್ಟು ಜನರು ಸುಧಾರಿಸಿದ್ದಾರೆ? ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳಿಸಬಲ್ಲೆ’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ. ಹಿಂದುಸ್ತಾನಿ ಭಾವು ಮಾತ್ರಬಲ್ಲದೇ ಅನೇಕರು ಉರ್ಫಿ ವಿರುದ್ಧ ಗರಂ ಆಗಿದ್ದಾರೆ. ಕೆಲವು ಕಡೆಗಳಲ್ಲಿ ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಆ ಕುರಿತು ಇತ್ತೀಚೆಗೆ ಉರ್ಫಿ ಮಾತನಾಡಿದ್ದರು.
ಇದು ತಾಲಿಬಾನ್ ಅಲ್ಲ ಎಂದ ನಟಿ:
ಉರ್ಫಿ ಜಾವೇದ್ ಅವರು ಅಶ್ಲೀಲವಾಗಿ ಬಟ್ಟೆ ಹಾಕಿಕೊಳ್ಳುತ್ತಾರೆ ಎಂಬುದು ಕೆಲವರ ಆರೋಪ. ಹಾಗಾಗಿ ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಇದು ಉರ್ಫಿ ಕೋಪಕ್ಕೆ ಕಾರಣ ಆಗಿದೆ. ಈ ಕುರಿತು ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ‘ನಾನು ಇದನ್ನೆಲ್ಲ ಪ್ರಚಾರಕ್ಕೆ ಮಾಡ್ತೀನಿ ಅಂತ ಹೇಳುವ ಜನರೇ ನನ್ನ ಹೆಸರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅತ್ಯಾಚಾರಿಗಳಿಗಿಂತಲೂ ಹೆಚ್ಚಿನ ಎಫ್ಐಆರ್ಗಳು ನನ್ನ ಮೇಲೆ ಆಗುತ್ತಿವೆ. ಹುಡುಗಿಯರು ಏನು ಧರಿಸಬೇಕು ಅಂತ ನೀವು ನಿರ್ಧಾರ ಮಾಡೋಕೆ ಇದು ತಾಲಿಬಾನ್ ಅಲ್ಲ. ಇದು ಅಫ್ಘಾನಿಸ್ತಾನ್ ಅಲ್ಲ’ ಎಂದು ಉರ್ಫಿ ಜಾವೇದ್ ಖಡಕ್ ಆಗಿ ಹೇಳಿದ ವಿಡಿಯೋ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Mon, 14 November 22