ಬಾಲಿವುಡ್ ಕಲಾವಿದರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif) ಅವರು 2021ರ ಡಿಸೆಂಬರ್ 9ರಂದು ಹಸೆಮಣೆ ಏರಿದ್ದರು. ಈಗ ಅವರಿಬ್ಬರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಅದರ ನಡುವೆಯೂ ಅವರಿಗೆ ವಿಚ್ಛೇದನದ (Divorce) ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಕೇಳಿ ವಿಕ್ಕಿ ಕೌಶಲ್ ಅವರಿಗೆ ಗಾಬರಿ ಆಗಿದೆ. ಎಲ್ಲರ ಎದುರಲ್ಲಿ ಅವರು ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಇಂಥ ಘಟನೆ ನಡೆಯಲು ಕಾರಣ ಏನು? ಅದಕ್ಕೆ ಉತ್ತರ ಇಲ್ಲಿದೆ. ವಿಕ್ಕಿ ಕೌಶಲ್ ಅವರು ನಟಿಸಿದ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮದುವೆ, ಡಿವೋರ್ಸ್, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆ ಇದೆ. ಹಾಗಾಗಿ ಪತ್ರಕರ್ತರೊಬ್ಬರು ವಿಕ್ಕಿ ಕೌಶಲ್ (Vicky Kaushal) ಅವರಿಗೆ ಈ ರೀತಿ ನೇರವಾಗಿ ವಿಚ್ಚೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
‘ನಮ್ಮ ದೇಶದಲ್ಲಿ ಮದುವೆಗೆ ಹಲವು ಜನ್ಮಗಳ ಸಂಬಂಧ ಇರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನಿಮಗೆ ಕತ್ರಿನಾ ಕೈಫ್ಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಕತ್ರಿನಾ ಕೈಫ್ಗೆ ಡಿವೋರ್ಸ್ ನೀಡುತ್ತೀರಾ?’ ಎಂದು ಕೇಳಲಾಯಿತು. ಈ ಪ್ರಶ್ನೆಯಿಂದ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಯಿತು.
ಇದನ್ನೂ ಓದಿ: ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಆಲೋಚಿಸಿದ ಕತ್ರಿನಾ-ವಿಕ್ಕಿ ಕೌಶಲ್; ಶೀಘ್ರದಲ್ಲೇ ತಾಯಿ ಆಗಲಿದ್ದಾರೆ ಕ್ಯಾಟ್?
‘ನೀವು ಈಗ ಏನು ಕೇಳಿದ್ದೀರಿ? ನಾನು ಮನೆಗೆ ಹೋಗಬೇಕು. ನೀವು ಎಂತಹ ಕಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಈ ವಿಷಯದಲ್ಲಿ ನಾನು ಇನ್ನೂ ಮಗು. ಈ ಅಪಾಯಕಾರಿ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ’ ಎಂದು ಹೇಳುವ ಮೂಲಕ ವಿಕ್ಕಿ ಕೌಶಲ್ ಅವರು ನಗು ಚೆಲ್ಲಿದ್ದಾರೆ. ಅಲ್ಲದೇ ಮುಂದಿನ ಜನ್ಮದಲ್ಲೂ ಕತ್ರಿನಾ ಕೈಫ್ ಅವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Katrina Kaif: ಹೊಸ ವರ್ಷ ಸ್ವಾಗತಿಸಲು ವೆಕೇಶನ್ಗೆ ಹಾರಿದ ವಿಕ್ಕಿ ಕೌಶಲ್-ಕತ್ರಿನಾ ಕೈಫ್ ದಂಪತಿ
‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ಗೆ ಜೋಡಿಯಾಗಿ ಸಾರಾ ಅಲಿ ಖಾನ್ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ವಿಕ್ಕಿ ಕೌಶಲ್ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.