ಒಂದೇ ಶಾಲೆಯಲ್ಲಿ ಓದಿದ್ದ ಸ್ಟಾರ್ ಕ್ರಿಕೆಟಿಗರ ಪತ್ನಿಯರು; ಒಬ್ಬರು ನಟಿ, ಮತ್ತೊಬ್ಬರು ನಿರ್ಮಾಪಕಿ  

ಸ್ಟಾರ್ ಕ್ರಿಕೆಟಿಗರ ಪತ್ನಿಯರ ಫೋಟೋ ವೈರಲ್ ಆಗಿದೆ. ಇವರು ಚಿತ್ರರಂಗದಲ್ಲಿ ತೊಡಗಿಕೊಂಡವರು. ಅವರಿಬ್ಬರೂ ಬಾಲ್ಯದಿಂದ ಗೆಳತಿಯರು ಅನ್ನೋದು ವಿಶೇಷ.

ಒಂದೇ ಶಾಲೆಯಲ್ಲಿ ಓದಿದ್ದ ಸ್ಟಾರ್ ಕ್ರಿಕೆಟಿಗರ ಪತ್ನಿಯರು; ಒಬ್ಬರು ನಟಿ, ಮತ್ತೊಬ್ಬರು ನಿರ್ಮಾಪಕಿ  

Updated on: May 31, 2023 | 1:03 PM

ಸೆಲೆಬ್ರಿಟಿಗಳ ಬಾಲ್ಯದ ಫೋಟೋ ನೋಡೋಕೆ ಫ್ಯಾನ್ಸ್ ಕಾದು ಕೂತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಆಗಾಗ ಈ ರೀತಿಯ ಫೋಟೋಗಳು ವೈರಲ್ ಆಗುತ್ತವೆ. ಈಗ ಸ್ಟಾರ್ ಕ್ರಿಕೆಟಿಗರ ಪತ್ನಿಯರ ಫೋಟೋ ವೈರಲ್ ಆಗಿದೆ. ಇವರು ಚಿತ್ರರಂಗದಲ್ಲಿ ತೊಡಗಿಕೊಂಡವರು. ಅವರಿಬ್ಬರೂ ಬಾಲ್ಯದಿಂದ ಗೆಳತಿಯರು ಅನ್ನೋದು ವಿಶೇಷ. ಅವರು ಬೇರಾರೂ ಅಲ್ಲ ಅನುಷ್ಕಾ ಶರ್ಮಾ (Anushka Sharma) ಹಾಗೂ ಸಾಕ್ಷಿ ಸಿಂಗ್ ಧೋನಿ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಇಬ್ಬರೂ ಪ್ರೀತಿಸಿ ಮದುವೆ ಆದವರು. ಸಾಕ್ಷಿಯನ್ನು ಧೋನಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಮದುವೆ ಆಗಿದ್ದಾರೆ. ಅನುಷ್ಕಾ-ಸಾಕ್ಷಿಗೆ ಈ ಮೊದಲೇ ಪರಿಚಯ ಇತ್ತು ಅನ್ನೋದು ವಿಶೇಷ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಅನೇಕರು ಈ ಬಗ್ಗೆ ಅಚ್ಚರಿ ಹೊರಹಾಕಿದ್ದಾರೆ.

ಇನ್​​ಸ್ಟಂಟ್ ಬಾಲಿವುಡ್ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅನುಷ್ಕಾ ಶರ್ಮಾ, ಕರ್ಣೇಶ್ ಶರ್ಮಾ ಹಾಗೂ ಸಾಕ್ಷಿ ಸಿಂಗ್ ಒಟ್ಟಾಗಿ ಇರುವ ಫೋಟೋ ಹಂಚಿಕೊಳ್ಳಲಾಗಿದೆ. ಅಸ್ಸಾಂನಲ್ಲಿ ಈ ಮೂವರು ಒಂದೇ ಶಾಲೆಯಲ್ಲಿ ಕಲಿತಿದ್ದರು. ಅನುಷ್ಕಾ ತಂದೆ ಸೇನೆಯಲ್ಲಿದ್ದರು. ಅವರು ದೇಶದ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ. ಒಂದು ಸಂದರ್ಭದಲ್ಲಿ ಸಾಕ್ಷಿ ಇದ್ದ ಊರಿನಲ್ಲಿ ಅನುಷ್ಕಾ ತಂದೆ ಸೇವೆ ಸಲ್ಲಿಸಿದ್ದರು. ಹೀಗಾಗಿ ಇಬ್ಬರೂ ಒಂದೇ ಸ್ಕೂಲ್​ನಲ್ಲಿ ಕಲಿಯೋ ಸಂದರ್ಭ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮೊದಲಿನಷ್ಟು ಸಿನಿಮಾ ಮಾಡಲ್ಲ ಅನುಷ್ಕಾ ಶರ್ಮಾ; ಈ ತ್ಯಾಗಕ್ಕೆ ಕಾರಣ ತಿಳಿಸಿದ ನಟಿ

ಇಬ್ಬರ ನಡುವೆ ಹಲವು ಸಾಮ್ಯತೆ ಇದೆ. ಅನುಷ್ಕಾ ಶರ್ಮಾ ಹಾಗೂ ಸಾಕ್ಷಿ ಇಬ್ಬರೂ ಟೀಂ ಇಂಡಿಯಾ ಆಟಗಾರರನ್ನು ಮದುವೆ ಆಗಿದ್ದಾರೆ. ಇಬ್ಬರ ಪತಿಯರು ಟೀಂ ಇಂಡಿಯಾನ ಮುನ್ನಡೆಸಿದ್ದರು. ಇಬ್ಬರಿಗೂ ಹೆಣ್ಣು ಮಗು ಜನಿಸಿದೆ. ಅಷ್ಟೇ ಅಲ್ಲ, ಅನುಷ್ಕಾ ಈ ಮೊದಲು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಬೇರೆ ಕೆಲಸದ ನಿಮಿತ್ತ ಅದನ್ನು ತೊರೆದಿದ್ದಾರೆ. ಸಾಕ್ಷಿ ಸಿಂಗ್ ಧೋನಿ ಈಗ ನಿರ್ಮಾಪಕಿ ಆಗಿದ್ದಾರೆ. ಧೋನಿ ಎಂಟರ್​ಟೇನ್​ಮೆಂಟ್ ಮೂಲಕ ಬರುತ್ತಿರುವ ಮೊದಲ ಸಿನಿಮಾ ‘ಎಲ್​ಜಿಎಂ’ಗೆ ಅವರು ನಿರ್ಮಾಪಕಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 1:03 pm, Wed, 31 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us