AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ಮೊದಲಿನಷ್ಟು ಸಿನಿಮಾ ಮಾಡಲ್ಲ ಅನುಷ್ಕಾ ಶರ್ಮಾ; ಈ ತ್ಯಾಗಕ್ಕೆ ಕಾರಣ ತಿಳಿಸಿದ ನಟಿ

Anushka Sharma Family: ಅನುಷ್ಕಾ ಶರ್ಮಾ ಅವರು 2018ರ ‘ಜೀರೋ’ ಚಿತ್ರದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು. ಅವರು ಸದ್ಯ ಒಪ್ಪಿಕೊಂಡಿರುವುದು ‘ಚಕ್ದಾ ಎಕ್ಸ್​​ಪ್ರೆಸ್​’ ಸಿನಿಮಾ ಮಾತ್ರ.

Anushka Sharma: ಮೊದಲಿನಷ್ಟು ಸಿನಿಮಾ ಮಾಡಲ್ಲ ಅನುಷ್ಕಾ ಶರ್ಮಾ; ಈ ತ್ಯಾಗಕ್ಕೆ ಕಾರಣ ತಿಳಿಸಿದ ನಟಿ
ಅನುಷ್ಕಾ ಶರ್ಮಾ, ವಿರಾಟ್​ ಕೊಹ್ಲಿ
ಮದನ್​ ಕುಮಾರ್​
|

Updated on: May 27, 2023 | 4:36 PM

Share

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಕುಟುಂಬದಲ್ಲಿ ಬ್ಯುಸಿ ಆದ ಬಳಿಕ ಅವರು ನಟನೆಯಿಂದ ದೂರ ಉಳಿದರು. ಸದ್ಯ ಅವರ ಸಂಪೂರ್ಣ ಗಮನ ಮಗಳು ವಮಿಕಾ (Vamika) ಮೇಲಿದೆ. ಮಗಳ ಆರೈಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಸಿನಿಮಾ ಆಯ್ಕೆ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಅವರು ಸಿನಿಮಾ ಬದಲು ಮಗಳನ್ನು ಆಯ್ಕೆ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮಗಳಿಗೆ ಹೆಚ್ಚಿನ ಸಮಯ ನೀಡಬೇಕು ಎಂಬ ಆಲೋಚನೆಯಲ್ಲಿ ಅವರಿದ್ದಾರೆ. ಅನುಷ್ಕಾ ಶರ್ಮಾ ಅವರು 2018ರ ‘ಜೀರೋ’ ಚಿತ್ರದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು. ಅವರು ಸದ್ಯ ಒಪ್ಪಿಕೊಂಡಿರುವುದು ‘ಚಕ್ದಾ ಎಕ್ಸ್​​ಪ್ರೆಸ್​’ (Chakda Xpress) ಸಿನಿಮಾ ಮಾತ್ರ. ಈಗಾಗಲೇ ನಾಲ್ಕು ವರ್ಷ ಗ್ಯಾಪ್ ಆಗಿದ್ದು, ಒಪ್ಪಿಕೊಂಡ ಸಿನಿಮಾ ಕೆಲಸ ಮುಗಿಯಲು ಮತ್ತಷ್ಟು ಸಮಯಬೇಕು. ಇಷ್ಟು ಗ್ಯಾಪ್ ಆಗೋಕೆ ಕುಟುಂಬಕ್ಕೆ ಅವರು ನೀಡುತ್ತಿರುವ ಆದ್ಯತೆಯೇ ಕಾರಣ.

‘ನನ್ನ ಮಗಳಿಗೆ ನಾನು ಹೆಚ್ಚಿನ ಸಮಯ ಕೊಡಬೇಕಿದೆ. ವಿರಾಟ್ ಓರ್ವ ಶ್ರೇಷ್ಠ ತಂದೆ. ಅಪ್ಪನಾಗಿ ಅವರ ಕರ್ತವ್ಯ ಮಾಡುತ್ತಿದ್ದಾರೆ. ಅವಳು ಈಗ ಯಾವ ವಯಸ್ಸಿನಲ್ಲಿ ಇದ್ದಾಳೆ ಎಂದರೆ ನಮ್ಮ ಕಾಳಜಿಯ ಅಗತ್ಯ ಅವಳಿಗೆ ಹೆಚ್ಚು ಬೇಕಿದೆ. ನನ್ನ ಅವಶ್ಯಕತೆ ಅವಳಿಗೆ ತುಂಬಾ ಇದೆ. ನಮಗೆ ಅದರ ಅರಿವಾಗಿದೆ. ಹೀಗಾಗಿ, ನಾನು ಅಮ್ಮನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ’ ಎಂದಿದ್ದಾರೆ ಅನುಷ್ಕಾ ಶರ್ಮಾ.

ಇದನ್ನೂ ಓದಿ: Cannes Film Festival: ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದ ಅನುಷ್ಕಾ ಶರ್ಮಾ; ಇಲ್ಲಿದೆ ಗ್ಯಾಲರಿ

‘ನಾನು ನಟನೆಯನ್ನು ಎಂಜಾಯ್ ಮಾಡುತ್ತೇನೆ. ಆದರೆ, ಮೊದಲಿನಷ್ಟು ಚಿತ್ರಗಳನ್ನು ಈಗ ಮಾಡಲು ನಾನು ಬಯಸುವುದಿಲ್ಲ. ನಾನು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತೇನೆ ಅಷ್ಟೇ. ನಟನೆಯ ಪ್ರಕ್ರಿಯೆಯನ್ನು ಆನಂದಿಸಬೇಕು ಮತ್ತು ನನ್ನ ಕುಟುಂಬಕ್ಕೆ ಸಮಯ ನೀಡಬೇಕು’ ಎಂದಿದ್ದಾರೆ ಅನುಷ್ಕಾ ಶರ್ಮಾ.

ಇದನ್ನೂ ಓದಿ: Anushka Sharma: ಕಾನ್ ಚಿತ್ರೋತ್ಸವದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ; ಕೊಹ್ಲಿ ರಿಯಾಕ್ಷನ್ ಏನು?

ಅನುಷ್ಕಾ ಶರ್ಮಾ ಅವರು ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಈ ಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಅನುಷ್ಕಾ ಶರ್ಮಾ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೆ ವಿರಾಟ್ ಕೊಹ್ಲಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಫ್ರಾನ್ಸ್​ನಲ್ಲಿ ಈ ಸಿನಿಮೋತ್ಸವ ನಡೆದಿದ್ದು, ಇಂದು (ಮೇ 27) ಕೊನೆಯಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.