ಮತ್ತೆ ಮದುವೆ ಯಾಕಾಯ್ತು? ಹೇಗಾಯ್ತು? ವಿವರಣೆ ನೀಡಿದ ಆಶಿಷ್ ವಿದ್ಯಾರ್ಥಿ

Ashish Vidyarthi: ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ನಿನ್ನೆಯಷ್ಟೆ (ಮೇ 25) ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದಾರೆ. ತಾವು ಮತ್ತೆ ಮದುವೆ ಆಗಿದ್ದು ಏಕೆ ಎಂಬುದನ್ನು ಸ್ವತಃ ಅವರೇ ವಿವರಿಸಿದ್ದಾರೆ.

ಮತ್ತೆ ಮದುವೆ ಯಾಕಾಯ್ತು? ಹೇಗಾಯ್ತು? ವಿವರಣೆ ನೀಡಿದ ಆಶಿಷ್ ವಿದ್ಯಾರ್ಥಿ
ಆಶಿಷ್ ವಿದ್ಯಾರ್ಥಿ
Follow us
ಮಂಜುನಾಥ ಸಿ.
|

Updated on: May 26, 2023 | 8:13 PM

ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ನಟಿಸಿರುವ ಜನಪ್ರಿಯ ನಟ ಆಶಿಷ್ ವಿದ್ಯಾರ್ಥಿ (Ashish Vidyarthi) ನಿನ್ನೆಯಷ್ಟೆ (ಮೇ 25) ಅಸ್ಸಾಂನ ರೂಪಾಲಿ ಬರುವಾ (Roopali Baruva) ಅವರನ್ನು ವಿವಾಹವಾಗಿದ್ದಾರೆ. ಆಶಿಷ್ ವಿದ್ಯಾರ್ಥಿ ಅವರ ಈ ನಿರ್ಧಾರ ಹಲವರಿಗೆ ಶಾಕ್ ತಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಜೋರು ಚರ್ಚೆಗಳಾದವು, 60ರ ವಯಸ್ಸಿನಲ್ಲಿ ವಿವಾಹವಾದ ಬಗ್ಗೆ ಕೆಲವರು ಕುಹುಕವಾಡಿದರು. ಆದರೆ ಈಗ ಸ್ವತಃ ಆಶಿಷ್ ವಿದ್ಯಾರ್ಥಿ ತಮ್ಮ ಮದುವೆ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇಂದು ನನಗಾಗಿದ್ದು ನಾಳೆ ನಿಮಗೂ ಆಗಬಹುದು ಎಲ್ಲರ ಜೀವನ ಗೌರವಿಸಿ ಎಂದಿದ್ದಾರೆ.

”22 ವರ್ಷದ ಹಿಂದೆ ನಾನು ಹಾಗೂ ರಜೋಶಿಯನ್ನು ಭೇಟಿಯಾದೆ, ಇಬ್ಬರೂ ಗೆಳೆಯರಾದೆವು ಬಳಿಕ ಮದುವೆಯಾದೆವು. ನಮಗೆ ಒಬ್ಬ ಮಗನೂ ಜನಿಸಿದ. ಆತ ಚೆನ್ನಾಗಿದ್ದಾನೆ, ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಇಷ್ಟು ವರ್ಷ ಬಹಳ ಚೆನ್ನಾಗಿ ಬದುಕಿದೆವು. ಆದರೆ ಕೆಲವು ವರ್ಷಗಳ ಹಿಂದೆ ನಾವಿಬ್ಬರೂ ಭವಿಷ್ಯವನ್ನು ಹೇಗೆ ನೋಡಬಯುಸುತ್ತೇವೆಯೋ ಆ ದೃಷ್ಟಿಕೋನ ಭಿನ್ನವಾಗಿತ್ತು. ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲು ಇಬ್ಬರೂ ಪ್ರಯತ್ನ ಪಟ್ಟೆವು, ನಾವಿಬ್ಬರೂ ಒಟ್ಟಿಗೆ ಇರಬಹುದಿತ್ತು, ಆದರೆ ಅದರಿಂದ ಯಾರಾದರೂ ಒಬ್ಬರು ತಮ್ಮ ಸಂತೋಶವನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಅದು ನಮ್ಮಿಬ್ಬರಿಗೂ ಇಷ್ಟವಿರಲಿಲ್ಲ. ಹಾಗಾಗಿ ನಾವು ದೂರಾಗಿ ಇಬ್ಬರೂ ಪ್ರತ್ಯೇಕ ದಾರಿ ಹಿಡಿದು ಸಂತೋಶವಾಗಿರಲು ನಿರ್ಧರಿಸಿದೆವು. ಇಬ್ಬರೂ ಪರಸ್ಪರ ಚರ್ಚಿಸಿದೆವು, ಮಗನೊಟ್ಟಿಗೆ ಚರ್ಚೆ ಮಾಡಿದೆವು, ನಮ್ಮ ಆತ್ಮೀಯ ಗೆಳೆಯರು, ಸಂಬಂಧಿಗಳೊಟ್ಟಿಗೆ ಚರ್ಚಿಸಿ ಘನತೆಯಿಂದ, ಪರಸ್ಪರರ ಮೇಲಿನ ಗೌರವ ಉಳಿಸಿಕೊಂಡು ದೂರಾದೆವು” ಎಂದಿದ್ದಾರೆ ಆಶಿಷ್ ವಿದ್ಯಾರ್ಥಿ.

ಇದನ್ನೂ ಓದಿ:‘ಸರಿಯಾದ ವ್ಯಕ್ತಿ ನಿಮಗೆ ನೋವು ಮಾಡಲ್ಲ’; ಆಶಿಷ್​ ವಿದ್ಯಾರ್ಥಿ ಮರು ಮದುವೆಯಿಂದ ಮೊದಲ ಪತ್ನಿಗೆ ಬೇಸರ?

”ಆದರೆ ನಾನು ಮದುವೆಯಾಗಲು ನಿಶ್ಚಯಿಸಿದೆ. ಏಕೆಂದರೆ ಮುಂದಿನ ಪಯಣದಲ್ಲಿ ಒಬ್ಬರು ನನ್ನ ಜೊತೆಗೆ ಬೇಕಿತ್ತು. ಒಬ್ಬನೇ ಹಾದಿ ಕ್ರಮಿಸಲು ನನಗೆ ಇಷ್ಟವಿರಲಿಲ್ಲ. ಆಗ ನನಗೆ 55 ವರ್ಷ ವಯಸ್ಸಿದ್ದಿರಬಹುದು. ಆಗ ಅನ್ನಿಸಿತು ಮದುವೆ ಆಗಬೇಕು ಎಂದು. ಆ ಸಮಯದಲ್ಲಿ ನಾನು ರೂಪಾಲಿ ಬರುವ ಅವರನ್ನು ಭೇಟಿಯಾದೆ. ಇಬ್ಬರು ಗೆಳೆಯರಾದೆವು, ಮಾತನಾಡಿದೆವು, ಪರಸ್ಪರರ ಬಗ್ಗೆ ಆಸಕ್ತಿ ಬೆಳೆಯಿತು. ಪರಸ್ಪರರ ಬಗೆಗಿನ ಒಳ್ಳೆಯ ಸಂಗತಿಗಳು ನಮ್ಮನ್ನು ಹತ್ತಿರ ತಂದಿತು. ಆಗ ಅನ್ನಿಸಿತು ಪತಿ-ಪತ್ನಿಯರಾಗಿ ನಾವು ಒಟ್ಟಿಗೆ ಮುಂದಿನ ಹಾದಿಯನ್ನು ಕ್ರಮಿಸಬಹುದೆಂದು. ಒಟ್ಟಿಗೆ ಜೊತೆಗಿರಲು ನನಗೆ ಇಷ್ಟವಿರಲಿಲ್ಲ, ಹಾಗಾಗಿ ನಾವು ಮದುವೆಯಾಗಲು ನಿಶ್ಚಯಿಸಿದೆವು. ರೂಪಾಲಿಗೆ 50 ನನಗೆ 57 ವರ್ಷ ವಯಸ್ಸು, 60 ಅಲ್ಲ. ಆದರೆ ವಯಸ್ಸು ಮುಖ್ಯವಲ್ಲ, ಸಂತೋಶವಾಗಿರಲು ವಯಸ್ಸು ಅಡ್ಡಿಯಲ್ಲ” ಎಂದಿದ್ದಾರೆ ಆಶೀಷ್ ವಿದ್ಯಾರ್ಥಿ.

”ಮುಂದೆ ಸಾಗುತ್ತಾ ಇರೋಣ, ಇತರರು ಹೇಗೆ ತಮ್ಮ ಜೀವನ ನಡೆಸುತ್ತಿದ್ದಾರೊ ಆ ಬಗ್ಗೆ ಗೌರವ ನೀಡೋಣ, ಆದರೆ ಮೂಲ ಗುರಿಯೆಂದರೆ ಜವಾಬ್ದಾರಿಗಳನ್ನು ಪೂರೈಸುವುದು ಮತ್ತು ಸಂತೋಶವಾಗಿರುವುದು ಮಾತ್ರವೇ ಆಗಿರಲಿ. ಇಂದು ನನಗೆ ಆಗಿದ್ದು ನಾಳೆ ನಿಮಗೂ ಆಗಬಹುದು ಹಾಗಾಗಿ ಎಲ್ಲರ ಜೀವನವನ್ನೂ ಗೌರವಿಸಿ ಎಂದಿದ್ದಾರೆ ಆಶಿಷ್ ವಿದ್ಯಾರ್ಥಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ