ಬಾಲಿವುಡ್​ ಒಳರಾಜಕೀಯ; ಪ್ರಿಯಾಂಕಾ ಚೋಪ್ರಾ ವಿರುದ್ಧ ಗುಡುಗಿದ ರಾಖಿ ಸಾವಂತ್​

‘ನೀವು ಎಲ್ಲಿಂದಲೋ ಬರುತ್ತೀರಿ. ಇಲ್ಲಿನ ಸಿಹಿಯನ್ನು ಸವಿಯುತ್ತೀರಿ. ಇಲ್ಲಿ ನಿಮ್ಮ ಕಾಲ ಮುಗಿಯಿತು ಎಂದು ಗೊತ್ತಾದಾಗ ಇನ್ನೊಬ್ಬರ ಹೆಸರು ಹಾಳು ಮಾಡುತ್ತೀರಿ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಬಾಲಿವುಡ್​ ಒಳರಾಜಕೀಯ; ಪ್ರಿಯಾಂಕಾ ಚೋಪ್ರಾ ವಿರುದ್ಧ ಗುಡುಗಿದ ರಾಖಿ ಸಾವಂತ್​
ಪ್ರಿಯಾಂಕಾ ಚೋಪ್ರಾ, ರಾಖಿ ಸಾವಂತ್

Updated on: Mar 31, 2023 | 7:15 AM

ನಟಿ ರಾಖಿ ಸಾವಂತ್​ (Rakhi Sawant) ಅವರು ಬಾಲಿವುಡ್​ನಲ್ಲಿ ಹೆಚ್ಚೇನೂ ಯಶಸ್ಸು ಕಂಡಿಲ್ಲ. ಹಾಗಿದ್ದರೂ ಕೂಡ ಅವರಿಗೆ ಹಿಂದಿ ಚಿತ್ರರಂಗದ ಬಗ್ಗೆ ಸಿಕ್ಕಾಪಟ್ಟೆ ಗೌರವ ಇದೆ. ಯಾರಾದರೂ ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅವರು ಗರಂ ಆಗುತ್ತಾರೆ. ಈಗ ಅವರು ಪ್ರಿಯಾಂಕಾ ಚೋಪ್ರಾ (Priyanka Chopra) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್​ನ (Bollywood) ಒಳರಾಜಕೀಯದ ಬಗ್ಗೆ ಮಾತನಾಡಿದ್ದರು. ಆ ವಿಚಾರವಾಗಿ ಪರ-ವಿರೋಧದ ಚರ್ಚೆ ಆಗುತ್ತಿದೆ. ಅದರಲ್ಲಿ ರಾಖಿ ಸಾವಂತ್​ ಕೂಡ ಧ್ವನಿಗೂಡಿಸಿದ್ದಾರೆ. ‘ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದು ಸರಿಯಿಲ್ಲ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಈಗ ಮಾತಾಡುವ ಅವಶ್ಯಕತೆ ಏನಿತ್ತು?

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ ತೊರೆದು ಹಲವು ವರ್ಷಗಳು ಕಳೆದಿವೆ. ಇಷ್ಟು ವರ್ಷಗಳ ಬಳಿಕ ಮಾತನಾಡುವ ಅವಕಶ್ಯತೆ ಏನಿತ್ತು ಎಂದು ರಾಖಿ ಸಾವಂತ್​ ಪ್ರಶ್ನಿಸಿದ್ದಾರೆ. ‘ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಲ್ಲಿ ಅನೇಕ ಸಿನಿಮಾ ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಗಲೇ ಯಾಕೆ ಈ ಕುರಿತು ಮಾತನಾಡಲಿಲ್ಲ. ನಾನು ಯಾರ ಪರವೂ ವಹಿಸಿಕೊಳ್ಳುವುದಿಲ್ಲ. ನನಗೆ ಪ್ರಿಯಾಂಕಾ ಕೂಡ ಇಷ್ಟ. ತಟಸ್ಥವಾಗಿ ನಿಂತು ಮಾತನಾಡುತ್ತೇನೆ. ಈಗ ಅವರು ಯಾಕೆ ಬಾಲಿವುಡ್​ ಬಗ್ಗೆ ಮಾತನಾಡಿದ್ದಾರೆ?’ ಎಂದು ರಾಖಿ ಸಾವಂತ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Holi 2023: ವಿದೇಶದಲ್ಲೂ ಹೋಳಿ ಆಚರಿಸಿದ ಪ್ರಿಯಾಂಕಾ ಚೋಪ್ರಾ; ಅತಿಥಿಯಾಗಿ ಸಾಥ್​ ನೀಡಿದ ಪ್ರೀತಿ ಜಿಂಟಾ

ಇದನ್ನೂ ಓದಿ
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

‘ಪ್ರಿಯಾಂಕಾ ಚೋಪ್ರಾ ಅವರ ತಾಯಿ ಕೂಡ ನನಗೆ ಸ್ನೇಹಿತೆ. ಅಮೆರಿಕದಲ್ಲಿ ಪ್ರಿಯಾಂಕಾ ಸೆಟ್ಲ್​ ಆಗಿದ್ದಾರೆ. ಈಗ ಯಾಕೆ ಇದನ್ನೆಲ್ಲ ಹೇಳಬೇಕು? ಇನ್ನೊಬ್ಬರ ಹೆಸರು ಹಾಳು ಮಾಡುವುದು ಯಾಕೆ? ನೀವು ಎಲ್ಲಿಂದಲೋ ಬರುತ್ತೀರಿ. ಇಲ್ಲಿನ ಸಿಹಿಯನ್ನು ಸವಿಯುತ್ತೀರಿ. ನಂತರ ಇಲ್ಲಿ ನಿಮ್ಮ ಕಾಲ ಮುಗಿಯಿತು ಎಂದು ಗೊತ್ತಾದಾಗ ಇನ್ನೊಬ್ಬರ ಹೆಸರು ಹಾಳು ಮಾಡುತ್ತೀರಿ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: ‘30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ’; ನಿರ್ಧಾರಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ನಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಈ ಹಿಂದೆ ಅನೇಕರು ಆರೋಪಿಸಿದ್ದುಂಟು. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಕೂಡ ಅದನ್ನೇ ಹೇಳಿದರು. ಹಿಂದಿ ಚಿತ್ರರಂಗದಲ್ಲಿ ಅವರನ್ನು ಕೆಲವರು ಟಾರ್ಗೆಟ್​ ಮಾಡಿದ್ದರು. ಅವಕಾಶ ಸಿಗದಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಬ್ರೇಕ್​ ತೆಗೆದುಕೊಳ್ಳಬೇಕು ಅಂತ ಪ್ರಿಯಾಂಕಾಗೆ ಅನಿಸಿತ್ತು. ಆಗಲೇ ಅವರಿಗೆ ಅಮೆರಿಕದ ಮ್ಯೂಸಿಕ್​ ಇಂಡಸ್ಟ್ರಿಯಿಂದ ಕರೆ ಬಂತು. ಅಲ್ಲಿಂದ ಪ್ರಿಯಾಂಕಾ ಚೋಪ್ರಾ ಅವರ ಬದುಕು ಬದಲಾಯಿತು.

ಅಮೆರಿಕದ ಮ್ಯೂಸಿಕ್​ ಇಂಡಸ್ಟ್ರಿಯಲ್ಲೂ ಪ್ರಿಯಾಂಕಾ ಚೋಪ್ರಾ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಆಗ ಅವರು ಅಲ್ಲಿನ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆಗ ಅವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. ಹಾಲಿವುಡ್​ ಸೆಲೆಬ್ರಿಟಿಗಳ ವಲಯದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಖ್ಯಾತಿ ಹೆಚ್ಚಿತು. ಅನೇಕ ಅವಾರ್ಡ್​ ಫಂಕ್ಷನ್​ಗಳಲ್ಲೂ ಪ್ರಿಯಾಂಕಾ ಚೋಪ್ರಾ ಮಿಂಚಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us