AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ’; ನಿರ್ಧಾರಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ ಚೋಪ್ರಾ

ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯೋಕೆ ಅನೇಕರು ಸಿದ್ಧರಿರುವುದಿಲ್ಲ. ಆದರೆ, ಈ ರೀತಿ ಮಾಡುವಂತೆ ಪ್ರಿಯಾಂಕಾಗೆ ಅವರ ತಾಯಿಇಂದ ಸೂಚನೆ ಬಂದಿತ್ತು.

‘30ನೇ ವಯಸ್ಸಿಗೆ ಅಂಡಾಣು ಶೇಖರಣೆ ಮಾಡಿದ್ದೆ’; ನಿರ್ಧಾರಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ರಾಜೇಶ್ ದುಗ್ಗುಮನೆ
|

Updated on:Mar 29, 2023 | 10:54 AM

Share

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ನಿಕ್​ ಜೋನಸ್ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ನಟಿಯ ನಿರ್ಧರದ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ‘ಪ್ರಿಯಾಂಕಾ ಚೋಪ್ರಾ ಅವರಿಗೆ ಮಗು ಹೇರೋಕೆ ಏನು ಸಮಸ್ಯೆ’ ಎಂದು ಕೇಳಿದ್ದರು. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ. ನಿಜಕ್ಕೂ ಸಮಸ್ಯೆ ಇರೋದಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದರಂತೆ. ‘ಸಿಟಾಡೆಲ್’ ವೆಬ್ ಸೀರಿಸ್​ನ ಪ್ರಚಾರದ ವೇಳೆ ಅವರು ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಂಡಾಣು ಶೇಖರಣೆ ಮಾಡಿ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯೋಕೆ ಅನೇಕರು ಸಿದ್ಧರಿರುವುದಿಲ್ಲ. ಆದರೆ, ಈ ರೀತಿ ಮಾಡುವಂತೆ ಪ್ರಿಯಾಂಕಾಗೆ ಅವರ ತಾಯಿ ಮಧು ಚೋಪ್ರಾ ಅವರಿಂದ ಸೂಚನೆ ಬಂದಿತ್ತು. ಮಧು ಚೋಪ್ರಾ ಪ್ರಸೂತಿ ತಜ್ಞೆ. ಮಗಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು ಈ ರೀತಿ ಹೇಳಿದ್ದರು. ಈ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.

‘ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿತ್ತು. ನನಗೆ ಸಾಧನೆ ಮಾಡಬೇಕಿತ್ತು. ನನ್ನ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯಬೇಕಿತ್ತು. ಆಗ ನನಗೆ ಒತ್ತಡದ ಸಮಸ್ಯೆ ಇತ್ತು. ನನ್ನ ತಾಯಿ ಅಂಡಾಣು ಶೇಖರಿಸಿ ಇಡುವಂತೆ ಸೂಚಿಸಿದರು’ ಎಂದು ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ಬಿಟ್ಟು ಹಾಲಿವುಡ್​ಗೆ ಹೋಗಿದ್ದು ಯಾಕೆ? ಕಡೆಗೂ ಬಾಯ್ಬಿಟ್ಟ ನಟಿ

ನಿಕ್ ಜೋನಸ್ ಜೊತೆ ಡೇಟ್ ಮಾಡೋಕೆ ಪ್ರಿಯಾಂಕಾಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಮಗುಹೊಂದಬೇಕು ಎಂದುಕೊಂಡಿದ್ದೆ. ಇದೇ ಕಾರಣಕ್ಕೆ ನಿಕ್ ಜೊತೆ ಡೇಟ್ ಮಾಡೋಕೆ ಹಿಂಜರಿದೆ. 25ನೇ ವಯಸ್ಸಿಗೆ ತಂದೆ ಆಗೋಕೆ ನಿಕ್ ಸಿದ್ಧರಿರುತ್ತಾರೋ ಅಥವಾ ಇಲ್ಲವೋ ಎನ್ನುವ ಭಯ ನನ್ನನ್ನು ಕಾಡಿತು. ಯುನಿಸೆಫ್​ನಲ್ಲಿ ಮಕ್ಕಳ ಜೊತೆ ನಾನು ಕೆಲಸ ಮಾಡಿದ್ದೆ. ಪ್ರಾಣಿ ಹಾಗೂ ಮಕ್ಕಳನ್ನು ಕಂಡರೆ ನಮ್ಮ ಕುಟುಂಬದವರಿಗೆ ಪ್ರೀತಿ’ ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕಾ ಬಾಲಿವುಡ್ ತೊರೆದಿದ್ದೇಕೆ?

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ತೊರೆದು ಹಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರು ಬಾಲಿವುಡ್ ತೊರೆದಿದ್ದು ಏಕೆ ಎಂಬ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು ಕೆಲವರು ಟಾರ್ಗೆಟ್​ ಮಾಡಿದ್ದರು. ಅವಕಾಶ ಸಿಗದಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಬ್ರೇಕ್​ ತೆಗೆದುಕೊಳ್ಳಬೇಕು ಅಂತ ಪ್ರಿಯಾಂಕಾಗೆ ಅನಿಸಿತ್ತು. ಆಗಲೇ ಅವರಿಗೆ ಅಮೆರಿಕದ ಮ್ಯೂಸಿಕ್​ ಇಂಡಸ್ಟ್ರಿಯಿಂದ ಕರೆ ಬಂತು. ಅಲ್ಲಿಂದ ಪ್ರಿಯಾಂಕಾ ಚೋಪ್ರಾ ಅವರ ಬದುಕು ಬದಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:44 am, Wed, 29 March 23