AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Citadel Trailer: ಆಕ್ಷನ್ ಭರಿತ ಸಿಟಾಡೆಲ್ ಟ್ರೈಲರ್ ಬಿಡುಗಡೆ, ಪ್ರಿಯಾಂಕಾ ಚೋಪ್ರಾಗೆ ಸಾಟಿ ಯಾರು?

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ವೆಬ್ ಸರಣಿ ಸಿಟಾಡೆಲ್ ಟ್ರೈಲರ್ ಬಿಡುಗಡೆ ಆಗಿದೆ. ಆಕ್ಷನ್ ಭರಿತ ಈ ಟ್ರೈಲರ್​ನಲ್ಲಿ ಪ್ರಿಯಾಂಕಾ ಚೋಪ್ರಾ ಅಬ್ಬರಿಸಿದ್ದಾರೆ.

Citadel Trailer: ಆಕ್ಷನ್ ಭರಿತ ಸಿಟಾಡೆಲ್ ಟ್ರೈಲರ್ ಬಿಡುಗಡೆ, ಪ್ರಿಯಾಂಕಾ ಚೋಪ್ರಾಗೆ ಸಾಟಿ ಯಾರು?
ಪ್ರಿಯಾಂಕಾ ಚೋಪ್ರಾ
ಮಂಜುನಾಥ ಸಿ.
|

Updated on:Mar 06, 2023 | 9:33 PM

Share

ಬಹುನಿರೀಕ್ಷಿತ ಹಾಲಿವುಡ್ (Hollywood) ವೆಬ್ ಸರಣಿ (Web Series) ಸಿಟಾಡೆಲ್​ನ (Citadel) ಅಧಿಕೃತ ಟ್ರೈಲರ್ ಇಂದು ಬಿಡುಗಡೆ ಆಗಿದೆ. ವೆಬ್ ಸರಣಿಯ ಮುಖ್ಯ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು, ವೆಬ್ ಸರಣಿಯನ್ನು ಅವೇಂಜರ್ಸ್, ಕ್ಯಾಪ್ಟನ್ ಅಮೆರಿಕ ಸಿನಿಮಾಗಳ ನಿರ್ದೇಶಕರಾದ ರೋಸೊ ಬ್ರದರ್ಸ್ ನಿರ್ಮಾಣ ಮಾಡಿರುವುದು ವಿಶೇಷ.

ವೆಬ್ ಸರಣಿಯ ಟ್ರೈಲರ್ ಇಂದು ಅಮೆಜಾನ್ ಪ್ರೈಂ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಿದ್ದು ಹೈ ಎಂಡ್ ಹಾಲಿವುಡ್ ಆಕ್ಷನ್ ಸಿನಿಮಾಗಳ ಮಾದರಿಯಲ್ಲಿಯೇ ಅದ್ಧೂರಿ ಆಕ್ಷನ್ ದೃಶ್ಯಗಳಿಂದ ತುಂಬಿದೆ. ಗೂಢಚಾರಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರ ಭರ್ಜರಿಯಾಗಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿಟಾಡೆಲ್ ಹೆಸರಿನ ಗೂಢಚಾರಿ ಏಜೆನ್ಸಿಯೊಂದಕ್ಕೆ ಕೆಲಸ ಮಾಡುವ ಗೂಢಚಾರಿಗಳ ಕುರಿತಾದ ಸರಣಿ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಟ್ರೈಲರ್​ನಿಂದ ಗೊತ್ತಾಗುತ್ತಿರುವಂತೆ ಆ ಏಜೆನ್ಸಿಯ ಟಾಪ್ ಗೂಢಚಾರಿಣಿ ಪ್ರಿಯಾಂಕಾ ಚೋಪ್ರಾ ನೆನಪು ಕಳೆದುಕೊಂಡಿದ್ದಾರೆ. ಪ್ರಿಯಾಂಕಾರ ಸಹವರ್ತಿ ರಿಚರ್ಡ್ ಮ್ಯಾಡ್ನನ್, ಪ್ರಿಯಾಂಕಾಗೆ ತಮ್ಮ ನೆನಪು ಮರುಕಳಿಸಲು ಸಹಾಯ ಮಾಡುತ್ತಾರೆ. ಆ ಬಳಿಕ ಈ ಇಬ್ಬರೂ ಸೇರಿ ವೈರಿಗಳ ಸೆದೆಪಡೆಯುವ ಅಪಾಯಕಾರಿ ಮಿಷನ್​ಗೆ ತೆರಳುತ್ತಾರೆ.

ಹಲವು ಪ್ರದೇಶಗಳಲ್ಲಿ ಈ ವೆಬ್ ಸರಣಿಯ ಕತೆ ನಡೆಯುವುದೆಂಬುದು ಸಹ ಟ್ರೈಲರ್​ನಿಂದ ಗೊತ್ತಾಗುತ್ತಿದೆ. ವೆಬ್ ಸರಣಿಯಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳನ್ನು, ಫೈಟ್​ಗಳನ್ನು ಚೇಸ್​ಗಳನ್ನು ಕಂಪೋಸ್ ಮಾಡಲಾಗಿದೆ. ಅವುಗಳ ಕೆಲವು ಝಲಕ್ ಅನ್ನು ವೆಬ್ ಸರಣಿಯಲ್ಲಿ ಬಿಟ್ಟುಕೊಡಲಾಗಿದೆ. ಆಕ್ಷನ್ ಜೊತೆಗೆ ತುಸು ಕಾಮಿಡಿ ಹಾಗೂ ರೊಮ್ಯಾನ್ಸ್ ಸಹ ಇದೆ. ಪ್ರಿಯಾಂಕಾ ಹಾಗೂ ನಟ ರಿಚರ್ಡ್ ನಡುವೆ ನಡೆವ ಕೆಲವು ರೊಮ್ಯಾಂಟಿಕ್ ದೃಶ್ಯಗಳ ತುಣುಕುಗಳು ಸಹ ಟ್ರೈಲರ್​ನಲ್ಲಿವೆ.

ಸಿಟಾಡೆಲ್​ನಲ್ಲಿ ದೊಡ್ಡ ತಾರಾಗಣವೇ ಇದೆ. ವೆಬ್ ಸರಣಿ ಗೇಮ್ ಅಫ್ ಥ್ರೋನ್ಸ್, ಸಿಂಡ್ರೆಲಾ, ಆಕ್ಸರ್ ವಿಜೇತ 1917 ಇನ್ನಿತರೆ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಿಚರ್ಡ್ ಮ್ಯಾಡೆನ್ ಈ ವೆಬ್ ಸರಣಿಯ ನಾಯಕ. ಕ್ಯಾಪ್ಟನ್ ಅಮೆರಿಕ, ಇನ್​ಸೈಡ್ ಮ್ಯಾನ್, ಹಂಗರ್ ಗೇಮ್ಸ್ ಇನ್ನಿತರೆ ಸಿನಿಮಾಗಳಲ್ಲಿ ನಟಿಸಿರುವ ಸ್ಟ್ಯಾನ್ಲಿ ಟುಸ್ಸಿ, ಲೆಸ್ಲಿ ಮ್ಯಾನ್​ವೆಲ್ ಇನ್ನಿತರೆ ಜನಪ್ರಿಯ ನಟರು ವೆಬ್ ಸರಣಿಯಲ್ಲಿದ್ದಾರೆ. ವೆಬ್ ಸರಣಿಯು ಏಪ್ರಿಲ್ 28 ರಂದು ಇಂಗ್ಲೀಷ್, ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಲಂ ಭಾಷೆಯಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ವಿಶೇಷವೆಂದರೆ ಇದೇ ಕತೆ ಆಧರಿಸಿ ಹಿಂದಿಯಲ್ಲಿಯೂ ಒಂದು ವೆಬ್ ಸರಣಿ ತಯಾರಾಗುತ್ತಿದೆ. ಅಲ್ಲಿ ಪ್ರಿಯಾಂಕಾ ನಟಿಸಿರುವ ಪಾತ್ರದಲ್ಲಿ ಹಿಂದಿಯಲ್ಲಿ ಸಮಂತಾ ನಟಿಸಲಿದ್ದಾರೆ. ರಿಚರ್ಡ್ ನಿರ್ವಹಿಸಿರುವ ಪಾತ್ರವನ್ನು ನಟ ವರುಣ್ ಧವನ್ ನಿರ್ವಹಿಸುತ್ತಿದ್ದಾರೆ. ಹಿಂದಿ ಸಿಟಾಡೆಲ್ ಅನ್ನು ರಾಜ್ ಆಂಡ್ ಡಿಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಚಾಲ್ತಿಯಲ್ಲಿದೆ.

Published On - 9:31 pm, Mon, 6 March 23