AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಬಾಡಿ ಶೇಮಿಂಗ್​; ಭಾರತ ತೊರೆದ ಬಳಿಕ ಮೌನ ಮುರಿದ ನಟಿ

ದಕ್ಷಿಣ ಏಷ್ಯಾಗೆ ಸಂಬಂಧಿಸಿ ನಡೆದ ಸಭೆಯೊಂದರಲ್ಲಿ ಪ್ರಿಯಾಂಕಾ ಭಾಗಿ ಆಗಿದ್ದರು. ಸಿನಿಮಾದಲ್ಲಿ ಮಹಿಳೆಯರು ಎನ್ನುವ ವಿಚಾರದ ಕುರಿತು ಚರ್ಚೆ ನಡೆದಿದೆ. ಈ ವೇಳೆ ಪ್ರಿಯಾಂಕಾ ಚೋಪ್ರಾ ಅವರು ಮಾತನಾಡಿದ್ದಾರೆ.

ಬಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಬಾಡಿ ಶೇಮಿಂಗ್​; ಭಾರತ ತೊರೆದ ಬಳಿಕ ಮೌನ ಮುರಿದ ನಟಿ
ಪ್ರಿಯಾಂಕಾ ಚೋಪ್ರಾ
ರಾಜೇಶ್ ದುಗ್ಗುಮನೆ
|

Updated on: Mar 01, 2023 | 3:12 PM

Share

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸದ್ಯ ಹಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಗಾಯಕ ನಿಕ್ ಜೋನಸ್ ಮದುವೆ ಆದ ಬಳಿಕ ಅವರು ಭಾರತ ತೊರೆದು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಇಂಗ್ಲಿಷ್ ಚಿತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಹಲವು ಇಂಗ್ಲಿಷ್ ವೆಬ್ ಸೀರಿಸ್​ಗಳಲ್ಲಿ ಪ್ರಿಯಾಂಕಾ ಬ್ಯುಸಿ ಇದ್ದಾರೆ. ಇದರ ಜೊತೆಗೆ ಮಗಳು ಮಾಲ್ತಿಯ ಆರೈಕೆ ಕೂಡ ಮಾಡುತ್ತಿದ್ದಾರೆ. ಈಗ ಪ್ರಿಯಾಂಕಾ ಚೋಪ್ರಾ ಅವರು ಸುದ್ದಿಯಲ್ಲಿದ್ದಾರೆ. ಅವರು ಬಾಲಿವುಡ್​ನಲ್ಲಿ ತಮಗೆ ಆದ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

ದಕ್ಷಿಣ ಏಷ್ಯಾಗೆ ಸಂಬಂಧಿಸಿ ನಡೆದ ಸಭೆಯೊಂದರಲ್ಲಿ ಪ್ರಿಯಾಂಕಾ ಭಾಗಿ ಆಗಿದ್ದರು. ಸಿನಿಮಾದಲ್ಲಿ ಮಹಿಳೆಯರು ಎನ್ನುವ ವಿಚಾರದ ಕುರಿತು ಚರ್ಚೆ ನಡೆದಿದೆ. ಈ ವೇಳೆ ಪ್ರಿಯಾಂಕಾ ಚೋಪ್ರಾ ಅವರು ಮಾತನಾಡಿದ್ದಾರೆ. ಅವರು ಈಗ ದೊಡ್ಡ ಸೆಲೆಬ್ರಿಟಿ ಎನಿಸಿಕೊಂಡರೂ ಆರಂಭದಲ್ಲಿ ಹಾಗಿರಲಿಲ್ಲ.  ಅವರು ಸಾಕಷ್ಟು ಕಷ್ಟ ಅನುಭವಿಸಿದ್ದರು. ಇದನ್ನು ಅವರು ನೆನಪಿಸಿಕೊಂಡಿದ್ದಾರೆ.

‘ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕೆ ಮಾಡುವ ಕೆಲಸ ಆಗುತ್ತಿತ್ತು. ಬಣ್ಣದ ಬಗೆಗಿನ ಗೀಳು ಬ್ರಿಟಿಷರಿಂದ ಬಂದಿದೆ. ಅವರು ನಮ್ಮನ್ನು ಬಿಟ್ಟು ಸಾಕಷ್ಟು ಸಮಯ ಕಳೆದರೂ ಬಣ್ಣದ ಬಗ್ಗೆ ಇರುವ ಗೀಳು ಕಡಿಮೆ ಆಗಿಲ್ಲ. ಚರ್ಮದ ಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು’ ಎಂದು ಅವರು ಹೇಳಿದ್ದಾರೆ.

‘ನಾನು ಸಾಕಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಾನು ನಂಬಿದ್ದೆ. ನನ್ನ ಜೊತೆ ಕೆಲಸ ಮಾಡುವ ಇತರ ಕಲಾವಿದರಿಗಿಂತ ನನ್ನಲ್ಲಿ ಹೆಚ್ಚು ಪ್ರತಿಭೆ ಇತ್ತು’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಆರಂಭದ ದಿನಗಳಲ್ಲಿ ಅನುಭವಿಸಿದ ಬಾಡಿ ಶೇಮಿಂಗ್​ ಅನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ‘ಸಿಟಾಡೆಲ್​’ ಫಸ್ಟ್​ಲುಕ್​ನಲ್ಲಿ ಪ್ರಿಯಾಂಕಾ ಚೋಪ್ರಾ ಖಡಕ್​ ಗೆಟಪ್​​​; ಇದು ದೇಸಿ ಗರ್ಲ್​ ಆ್ಯಕ್ಷನ್​ ಅವತಾರ

ಸದ್ಯ, ‘ಸಿಟಾಡೆಲ್​’ ಸೀರಿಸ್ ಕೆಲಸಗಳಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ಇದ್ದಾರೆ.  ಈ ವರ್ಷ ಏಪ್ರಿಲ್ 28ರಂದು ಈ ಸೀರಿಸ್​ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಲಿದೆ. ಇದರಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ. ಅವರ ನಟನೆಯ ಇಂಗ್ಲಿಷ್​ನ ‘ಲವ್ ಅಗೇನ್​’ ಸಿನಿಮಾ ಮೇ 12ಕ್ಕೆ ತೆರೆಗೆ ಬರುತ್ತಿದೆ. ‘ಸಿಟಾಡೆಲ್’ ಪೋಸ್ಟರ್​ನ ರಿಲೀಸ್ ಮಾಡಲಾಗಿದೆ. ಇದರ ಜೊತೆಗೆ ಕೆಲವು ಪ್ರಾಜೆಕ್ಟ್​ನ ನಿರ್ಮಾಣದಲ್ಲೂ ಪ್ರಿಯಾಂಕಾ ಚೋಪ್ರಾ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ