Hollywood: ನೂರು ಕೋಟಿಗೆ ಮನೆ ಮಾರಿದರೂ ನಷ್ಟ ಅನುಭವಿಸಿದ ಹಾಲಿವುಡ್ ಹಾಟ್ ಬ್ಯೂಟಿ

ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಐಶಾರಾಮಿ ಮನೆಯನ್ನು ಹಾಲಿವುಡ್ ನಟಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಹಾಗಿದ್ದರೂ ನಷ್ಟ ಅನುಭವಿಸಿದ್ದಾರೆ!

Hollywood: ನೂರು ಕೋಟಿಗೆ ಮನೆ ಮಾರಿದರೂ ನಷ್ಟ ಅನುಭವಿಸಿದ ಹಾಲಿವುಡ್ ಹಾಟ್ ಬ್ಯೂಟಿ
ಬ್ರಿಟ್ನಿ ಸ್ಪಿಯರ್ಸ್
Follow us
ಮಂಜುನಾಥ ಸಿ.
|

Updated on:Mar 05, 2023 | 5:21 PM

ಹಾಲಿವುಡ್ (Hollywood) ನಟ-ನಟಿಯರು, ಗಾಯಕರಿಗೆ ಭಾರಿ ಮೊತ್ತದ ಸಂಭಾವನೆ ಸಿಗುತ್ತದೆ. ಸಂಭಾವನೆಗೆ ತಕ್ಕಂತೆ ಐಶಾರಾಮಿ ಜೀವನವನ್ನೇ ಅವರು ನಡೆಸುತ್ತಾರೆ. ಎಕರೆ ಗಟ್ಟಲೆ ಪ್ರದೇಶದಲ್ಲಿ ಮನೆ ಕಟ್ಟಿ, ವಿಶ್ವದ ದುಬಾರಿ ವಾಹನಗಳನ್ನು ಬಳಸುತ್ತಾರೆ. ಹಾಲಿವುಡ್ ಜನಪ್ರಿಯ ಸೆಲೆಬ್ರಿಟಿ ಆಗಿರುವ ಬ್ರಿಟ್ನಿ ಸ್ಪಿಯರ್ಸ್ (Britney Spears) ಸಹ ವಿಶಾಲವಾದ ಮನೆ ಹೊಂದಿದ್ದರು. ಆದರೆ ಅದನ್ನು ಬಹುದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಹಾಗಿದ್ದಾಗಿಯೂ ನಷ್ಟ ಅನುಭವಿಸಿದ್ದಾರೆ ಬ್ರಿಟ್ನಿ!

ನಟಿ, ಗಾಯಕಿ ಬ್ರಿಟ್ನಿ ಸ್ಪಿಯರ್ಸ್ 2008 ರಲ್ಲಿ ಕ್ಯಾಲಿಫೋರ್ನಿಯಾದ ಕ್ಯಾಲಾಬ್ಯಾಸಸ್​ನಲ್ಲಿ ಐಶಾರಾಮಿ ಮನೆಯೊಂದನ್ನು ಕಟ್ಟಿಸಿದ್ದರು. ಸುಮಾರು ಏಳು ಎಕರೆ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ವಿಶಾಲವಾದ ಮನೆಯನ್ನು ನಿರ್ಮಿಸಲಾಗಿತ್ತು. ಸುಮಾರು 11 ಸಾವಿರ ಚದರ ಅಡಿ ಅಳತೆಯ ಲಿವಿಂಗ್ ಏರಿಯಾ ಒಳಗೊಂಡಿದ್ದ ಈ ಮನೆಯಲ್ಲಿ 12 ಬೆಡ್​ರೂಂಗಳಿದ್ದವು. ಒಂದು ದೊಡ್ಡ ಚಿತ್ರಮಂದಿರ, ಒಂದು ಸ್ವಿಮ್ಮಿಂಗ್ ಪೂಲ್ ಮತ್ತು ಒಂದು ವಾಟರ್ ಸ್ಪೋರ್ಟ್ ಏರಿಯಾ. ಒಂದು ದೊಡ್ಡ ಬಾರ್, ಒಂದು ಫೈರ್ ರೂಂ, ಗೆಸ್ಟ್ ಹೌಸ್, ವಿಶಾಲವಾದ ಕಾರು ಪಾರ್ಕಿಂಗ್ ಹಾಗೂ ಗ್ಯಾರೇಜ್ ಸೇರಿದಂತೆ ಹಲವು ಅನುಕೂಲಗಳು ಈ ಮನೆಯಲ್ಲಿದ್ದವು.

ಆದರೆ ಈ ಐಶಾರಾಮಿ ಮನೆಯನ್ನು ಬ್ರಿಟ್ನಿ ಸ್ಪಿಯರ್ಸ್ ಇತ್ತೀಚೆಗಷ್ಟೆ ಮಾರಾಟ ಮಾಡಿದ್ದಾರೆ. ಈ ಮನೆ ಅವರಿಗೆ ಖಾಸಗಿ ಎನಿಸುತ್ತಿಲ್ಲವಂತೆ. ಈ ಮನೆ ಸಾರ್ವಜನಿಕ ವೀಕ್ಷಣೆಗೆ ಸುಲಭಕ್ಕೆ ಲಭ್ಯವಿದೆ. ಇಲ್ಲಿ ಏಕಾಂತ ಪ್ರಾಪ್ತವಾಗುವುದಿಲ್ಲ ಎಂಬ ಕಾರಣಕ್ಕೆ ಈ ಮನೆಯನ್ನು ಬ್ರಿಟ್ನಿ ಕಳೆದ ವರ್ಷಾರಂಭದಲ್ಲಿಯೇ ತ್ಯಜಿಸಿದ್ದರು. ಮನೆಯನ್ನು ಇದೀಗ ಜನಪ್ರಿಯ ವಕೀಲರೊಬ್ಬರಿಗೆ ಮಾರಾಟ ಮಾಡಿದ್ದಾರೆ.

13 ಮಿಲಿಯನ್ ಮಿಲಿಯನ್ ಡಾಲರ್​ಗೆ ಮನೆಯನ್ನು ಮಾರಾಟಕ್ಕಿದ್ದರು ನಟಿ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಹೌಸಿಂಗ್ ಮಾರುಕಟ್ಟೆ ಮೌಲ್ಯ ಕುಸಿದಿದ್ದು ಗಾಯಕಿಯ ನಿರೀಕ್ಷಿತ ಬೆಲೆಗಿಂತಲೂ 1.70 ಮಿಲಿಯನ್ ಡಾಲರ್ ಕಡಿಮೆ ಮೊತ್ತಕ್ಕೆ ಮಾರಾಟವಾಗಿದೆ. ಹತ್ತಿರ-ಹತ್ತಿರ ನೂರು ಕೋಟಿಗೆ ಮನೆ ಮಾರಾಟವಾಗಿದೆಯಾದರೂ ಹೌಸಿಂಗ್ ಮಾರುಕಟ್ಟೆ ಕುಸಿದಿರುವ ಕಾರಣ ನಟಿಗೆ ನಷ್ಟವಾಗಿದೆ.

ಆದರೆ ಬ್ರಿಟ್ನಿಗೆ ಆ ಮನೆಯಲ್ಲಿ ಇರಲು ತುಸುವೂ ಇಷ್ಟವಿರಲಿಲ್ಲವಾಗಿದ್ದ ಕಾರಣ ನಷ್ಟದ ಮೊತ್ತಕ್ಕೆ ಟೆಕ್ಸಸ್​ನ ವಕೀಲನೊಬ್ಬನಿಗೆ ಮಾರಾಟ ಮಾಡಿದ್ದಾರೆ. ಬ್ರಿಟ್ನಿ ಸ್ಪಿಯರ್ಸ್ ತನ್ನ ಬಾಯ್​ಫ್ರೆಂಡ್ ಜೊತೆಗೆ ಥೌಸಂಡ್ಸ್ ಓಕ್ಸ್ ಎಂಬಲ್ಲಿಗೆ ಶಿಫ್ಟ್ ಆಗಿದ್ದಾರೆ.

ನಟಿ ಬ್ರಿಟ್ನಿ ಸ್ಪಿಯರ್ಸ್, ದೀರ್ಘ ಕಾನೂನು ಹೋರಾಟದ ಬಳಿಕ ತಮ್ಮ ತಂದೆಯ ನಿಗಾವಣೆಯಿಂದ ಹೊರಗೆ ಬಂದಿದ್ದಾರೆ. ಹಲವು ವರ್ಷಗಳಿಂದಲೂ ಬ್ರಿಟ್ನಿ ಸ್ಪಿಯರ್ಸ್ ಕಾನೂನಾತ್ಮಕವಾಗಿ ತಂದೆಯ ಹಿಡಿತದಲ್ಲಿದ್ದರು. ಬ್ರಿಟ್ನಿಯ ಎಲ್ಲ ಆರ್ಥಿಕ, ಸಾಮಾಜಿಕ ವಿಷಯಗಳಲ್ಲಿ ಅವರ ತಂದೆಯದ್ದೇ ನಿರ್ಣಯವಾಗಿತ್ತು. ಇದರ ವಿರುದ್ಧ ಕಾನೂನು ಹೋರಾಟ ಮಾಡಿದ ಬ್ರಿಟ್ನಿ ಸ್ಪಿಯರ್ಸ್ ಕಳೆದ ವರ್ಷವಷ್ಟೆ ಜಯ ಗಳಿಸಿ, ತಂದೆಯ ಬಿಗಿಮುಷ್ಠಿಯಿಂದ ಪಾರಾದರು.

ಸ್ವತಂತ್ರ್ಯರಾಗಿರುವ ಬ್ರಟ್ನಿ ಸ್ಪಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಕೆಲವು ಅರೆ ಬೆತ್ತಲೆ ಚಿತ್ರಗಳು, ತನ್ನ ಬಾಯ್​ಫ್ರೆಂಡ್​ ಜೊತೆಗೆ ತೀರ ಖಾಸಗಿ ಚಿತ್ರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Sun, 5 March 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್