ತ್ರಿ ಈಡಿಯಟ್ಸ್ ಖ್ಯಾತಿಯ ಸಹನಟರಿಬ್ಬರಿಗೂ ಕೊರೊನಾ ಸೋಂಕು; ಆದರೆ ನಟ ಮಾಧವನ್ ಹೇಳಿದ್ದೇನು ಗೊತ್ತಾ?

Aamir Khan, Madhavan: ಈ ಬಗ್ಗೆ ಮಾಧವನ್ ಟ್ವೀಟ್ ಮಾಡಿದ್ದು, ತಾವಿಬ್ಬರೂ ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಚಿತ್ರದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ತ್ರಿ ಈಡಿಯಟ್ಸ್ ಖ್ಯಾತಿಯ ಸಹನಟರಿಬ್ಬರಿಗೂ ಕೊರೊನಾ ಸೋಂಕು; ಆದರೆ ನಟ ಮಾಧವನ್ ಹೇಳಿದ್ದೇನು ಗೊತ್ತಾ?
ಅಮಿರ್​ ಖಾನ್​ ಮತ್ತು ಮಾಧವನ್​ ಇಬ್ಬರಿಗೂ ಕೊರೊನಾ ಸೋಂಕು
ಸಾಧು ಶ್ರೀನಾಥ್​

Updated on: Mar 25, 2021 | 5:42 PM

ತ್ರಿ ಈಡಿಯಟ್ಸ್ ಎಂಬ ಸೊಗಸಾದ ಸಿನಿಮಾದಲ್ಲಿ ಸಹನಟರಾಗಿ ಅಭಿನಯಿಸಿದ್ದ ಖ್ಯಾತನಾಮರಾದ ಆಮಿರ್​ ಖಾನ್​ ಮತ್ತು ಮಾಧವನ್​ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ.

ಮೊದಲು ನಟ ಆಮಿರ್​ ಖಾನ್​ಗೆ ಕೊರೊನಾ ಮಹಾಮಾರಿ ಕಾಡತೊಡಗಿತು. ಒಂದು ದಿನದ ಬಳಿಕ ಇದೀಗ ಮಾಧವನ್ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಮಾಧವನ್ ಟ್ವೀಟ್ ಮಾಡಿದ್ದು, ತಾವಿಬ್ಬರೂ ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಚಿತ್ರದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ನಟ ಮಾಧವನ್ ಹಾಸ್ಯ ಧಾಟಿಯಲ್ಲಿಯೇ ತಮಗೆ ಕೊರೊನಾ ತಗುಲಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮೇರು ನಟ ಆಮಿರ್​ ಖಾನ್​ ಜೊತೆ ತಾವು ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ನಟಿಸಿದ್ದನ್ನು ಸ್ಮರಿಸುತ್ತಾ.. ಆ ಸಿನಿಮಾದ ಚಿತ್ರವೊಂದನ್ನು ಬಳಸಿಕೊಂಡು ಟ್ವೀಟ್​ ಮಾಡಿ, ತಮಗೆ ಕೊರೊನಾ ಬಂದಿರುವುದನ್ನು ಘೋಷಿಸಿದ್ದಾರೆ.

ಜೊತೆಗೆ, ಆ ಸಿನಿಮಾದಲ್ಲಿ ತಮ್ಮನ್ನು ಬಹುವಾಗಿ ಕಾಡುವ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್​ ಅಥವಾ ಆ ಪ್ರಿನ್ಸಿಪಾಲರನ್ನು ಬಹುವಾಗಿ ಕಾಡುವ ರಾಂಚೋ ಮತ್ತು ಫರ್ಹಾ ಜೋಡಿ ಬಗ್ಗೆ ಹೇಳುತ್ತಾ, ಸಿನಿಮಾದಲ್ಲಿ ಆ ಪ್ರಿನ್ಸಿಪಾಲರನ್ನು ವೈರಸ್ ಎಂದು ಉಲ್ಲೇಖಿಸುವುದನ್ನು ಸ್ಮರಿಸಿದ್ದಾರೆ. ಫರ್ಹಾ ಅಂದ್ರೆ ತಾನು, ರಾಂಚೋನನ್ನು ಅನುಸರಿಸಲೇಬೇಕು. ಮತ್ತು ವೈರಸ್ ನಮ್ಮಿಬ್ಬರ ಹಿಂದೆ ಸುಳಿದಾಡಲೇಬೇಕು.

ಇಲ್ಲೂ ಹಾಗೆಯೇ ಆಗಿದೆ ಎಂದು ಮಾಧವನ್​ ಹೇಳಿದ್ದಾರಾದರೂ ಕೊನೆಯಲ್ಲಿ.. ತ್ರಿ ಈಡಿಯಟ್ಸ್ ಸಿನಿಮಾದ ಕ್ಯಾಚಿ ಟ್ಯಾಗ್​ ಲೈನ್​ ಆದ ಆಲ್​ ಈಸ್ ವೆಲ್ ಎಂದು ಹೇಳುತ್ತಾ.​. ಸದ್ಯದಲ್ಲೇ ಕೋವಿಡ್ ಸಹ ವೆಲ್​ ಅಂದ್ರೆ ಬಾವಿಯಲ್ಲಿ ಮುಳುಗಲಿದೆ ಎಂದಿದ್ದಾರೆ. ಜೊತೆಗೆ, ತ್ರಿ ಈಡಿಯಟ್ಸ್ ಪೈಕಿ ಉಳಿದ ಮೂರನೆಯವ ರಾಜು ನಮ್ಮನ್ನು ಅನುಸರಿ ಬಾರದಿರಲಿ ಎಂದು ಆಶಿಸಿದಿದ್ದಾರೆ. ಎಲ್ಲರಿಗೂ ವಂದನೆಗಳು, ನಾನು ಗುಣಮುಖನಾಗುತ್ತಿದ್ದೇನೆ ಎಂದು ಮಾಧವನ್​ ಹೇಳಿಕೊಂಡಿದ್ದಾರೆ.

ನಟ ಆಮಿರ್ ಖಾನ್​ ಕೊರೊನಾ ಸೋಂಕಿತರಾಗಿದ್ದಾರೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು, ಕೆಲಸದ ಸಿಬ್ಬಂದಿಯವರಿಗೆ ಟೆಸ್ಟ್​ಗೆ ಒಳಗಾಗಲು ಸೂಚಿಸಿದ್ದಾರೆ. ಹಾಗೇ, ಕೊರೊನಾ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಹೇಳಿದ್ದಾರೆ. ಆಮಿರ್ ​ಖಾನ್​ ಸಂಪೂರ್ಣ ಗುಣಮುಖರಾಗುವವರೆಗೂ ಲಾಲ್​ ಸಿಂಗ್ ಛಡ್ಡಾ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಮಿರ್​ ಖಾನ್​ ಆಪ್ತ ಮೂಲಗಳು ತಿಳಿಸಿವೆ.

Published On - 4:59 pm, Thu, 25 March 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us