‘ಕೋಟ್ಯಾಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ’; ‘ಚಂದ್ರಯಾನ-3’ಗೆ ಶುಭಕೋರಿದ ಸೆಲೆಬ್ರಿಟಿಗಳು

‘ಚಂದ್ರಯಾನ 3ಗಾಗಿ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಆಲ್​ ದಿ ಬೆಸ್ಟ್​. ಕೋಟ್ಯಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ’ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.

‘ಕೋಟ್ಯಾಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ’; ‘ಚಂದ್ರಯಾನ-3’ಗೆ ಶುಭಕೋರಿದ ಸೆಲೆಬ್ರಿಟಿಗಳು
ಅನುಪಮ್ ಖೇರ್- ಅಕ್ಷಯ್ ಕುಮಾರ್

Updated on: Jul 14, 2023 | 10:46 AM

ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು (ಜುಲೈ 14) ಮಧ್ಯಾಹ್ನ 2:35ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಆಗಲಿದೆ. ಇದಕ್ಕಾಗಿ ಇಡೀ ದೇಶವೇ ಕಾದಿದೆ. ಈ ಮಿಷನ್ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್​ ಕುಮಾರ್ (Akshay Kumar), ಅನುಪಮ್ ಖೇರ್, ರಿತೇಷ್ ದೇಶ್​ಮುಖ್ ಅವರು ಇಸ್ರೋಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್​​ಗಳನ್ನು ಅಭಿಮಾನಿಗಳು ರೀಟ್ವೀಟ್​ ಮಾಡಿಕೊಂಡು ಸಂತೋಷ ಪಟ್ಟಿದ್ದಾರೆ.

ಅಕ್ಷಯ್ ಕುಮಾರ್ ಅವರು ‘ಮಿಷನ್ ಮಂಗಳ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 2019ರಲ್ಲಿ ರಿಲೀಸ್ ಆಗಿತ್ತು. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಕಡಿಮೆ ವೆಚ್ಛದಲ್ಲಿ ಇಸ್ರೋ ನಡೆಸಿದ ಮಂಗಳಯಾನ ಕುರಿತು ಈ ಸಿನಿಮಾ ಇತ್ತು. ಈ ಸಿನಿಮಾ ಹೀರೋ ಅಕ್ಷಯ್ ಕುಮಾರ್ ಅವರು ಈಗ ‘ಚಂದ್ರಯಾನ 3’ಗೆ ಶುಭಾಶಯ ತಿಳಿಸಿದ್ದಾರೆ.

‘ಮತ್ತೊಮ್ಮೆ ಪುಟಿದೇಳುವ ಸಮಯ ಬಂದಿದೆ. ಚಂದ್ರಯಾನ 3ಗಾಗಿ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಆಲ್​ ದಿ ಬೆಸ್ಟ್​. ಕೋಟ್ಯಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ’ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ. ಇಸ್ರೋ ಕ್ಯಾಪ್ ತೊಟ್ಟ ಫೋಟೋ ಹಂಚಿಕೊಂಡಿರುವ ರಿತೇಷ್ ಅವರು, ‘ಚಂದ್ರಯಾನ 3 ಉಡಾವಣೆಗೆ ಕಾದಿದ್ದೇವೆ. ಇಸ್ರೋಗೆ ಒಳ್ಳೆಯದಾಗಲಿ. ಯಶಸ್ಸಿಗಾಗಿ ನಾವು ಪಾರ್ಥಿಸುತ್ತೇವೆ. ಜೈ ಹಿಂದ್’ ಎಂದು ರಿತೇಶ್ ಬರೆದುಕೊಂಡಿದ್ದಾರೆ. ಅನುಪಮ್​ ಖೇರ್ ಅವರು ಕೂಡ ‘ಚಂದ್ರಯಾನ 3’ಗೆ ವಿಶ್ ಮಾಡಿದ್ದಾರೆ. ಈ ಉಡಾವಣೆ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ಗೆ ಸಂಕಷ್ಟ: ಪ್ರಮಾಣ ಪತ್ರ ನೀಡಲು ನಿರಾಕರಣೆ

ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ದೇಶಪ್ರೇಮ ಸಾರುವ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಅವರ ಅಭಿಮಾನಿ ಬಳಗ ಹೆಚ್ಚಿದೆ. ಅನುಪಮ್ ಖೇರ್ ಅವರು ಹಿಂದಿ ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಿತೇಷ್ ದೇಶ್​ಮುಖ್ ಅವರು ‘ಹೌಸ್​ಫುಲ್ 5’ ಚಿತ್ರದಲ್ಲಿ ಅಕ್ಷಯ್ ಕುಮಾರ್​ಗೆ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us