ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ

Deekshit Shetty movie: ಕನ್ನಡದ ‘ದಿಯಾ’ ಸಿನಿಮಾ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ದೀಕ್ಷಿತ್ ಶೆಟ್ಟಿ ಸ್ವಪ್ರತಿಭೆಯಿಂದ ಸಫಲತೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಾ ಹೋಗುತ್ತಿದ್ದಾರೆ. ಸ್ಟಾರ್ ನಟ ನಾನಿ, ಕೀರ್ತಿ ಸುರೇಶ್ ಜೊತೆಗೆ ‘ದಸರಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಕ್ಷಿತ್ ಶೆಟ್ಟಿ, ‘ದಿ ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದರು. ಇದೀಗ ಮತ್ತೊಂದು ದೊಡ್ಡ ಸಿನಿಮಾನಲ್ಲಿ ಅವಕಾಶ ಬಾಚಿಕೊಂಡಿದ್ದಾರೆ.

ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ
Deekshit Shetty

Updated on: Dec 23, 2025 | 7:25 PM

ದೀಕ್ಷಿತ್ ಶೆಟ್ಟಿ(Deekshit Shetty), ತಮ್ಮ ಪ್ರತಿಭೆಯಿಂದ, ಸರಳತೆಯಿಂದ, ಕೆಲಸದ ಮೇಲಿನ ಶ್ರದ್ಧೆಯಿಂದ ಪರಭಾಷೆ ಚಿತ್ರರಂಗದಲ್ಲಿ ಅವಕಾಶ ಮೇಲೆ ಅವಕಾಶಗಳನ್ನು ಪಡೆಯುತ್ತಿರುವ ಕನ್ನಡದ ನಟ. ಕನ್ನಡದ ‘ದಿಯಾ’ ಸಿನಿಮಾ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ದೀಕ್ಷಿತ್ ಶೆಟ್ಟಿ ಸ್ವಪ್ರತಿಭೆಯಿಂದ ಸಫಲತೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಾ ಹೋಗುತ್ತಿದ್ದಾರೆ. ಸ್ಟಾರ್ ನಟ ನಾನಿ, ಕೀರ್ತಿ ಸುರೇಶ್ ಜೊತೆಗೆ ‘ದಸರಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಕ್ಷಿತ್ ಶೆಟ್ಟಿ, ‘ದಿ ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದರು. ಇದೀಗ ಮತ್ತೊಂದು ದೊಡ್ಡ ಸಿನಿಮಾನಲ್ಲಿ ಅವಕಾಶ ಬಾಚಿಕೊಂಡಿದ್ದಾರೆ.

ದುಲ್ಕರ್ ಸಲ್ಮಾನ್ ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿಗೆ ಪ್ರಮುಖ ಪಾತ್ರವೊಂದು ದೊರೆತಿದೆ. ಸಿನಿಮಾನಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ಎದುರು ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ. ಈ ಸಿನಿಮಾನಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಅವರಿಗೆ ಪ್ರಮುಖ ಪಾತ್ರವೊಂದು ನೀಡಲಾಗಿದೆ. ಈ ಹಿಂದೆ ‘ದಸರಾ’, ‘ದಿ ಗರ್ಲ್​ಫ್ರೆಂಡ್’, ಇನ್ನೂ ಹಲವು ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಸಾರಿರುವ ದೀಕ್ಷಿತ್ ಶೆಟ್ಟಿಗೆ ಮತ್ತೊಂದು ಸುವರ್ಣಾವಕಾಶ ದೊರೆತಿದೆ.

ಇದನ್ನೂ ಓದಿ:ಬೃಂದಾ ಆಚಾರ್ಯ ಮತ್ತು ನಟ ದೀಕ್ಷಿತ್ ಶೆಟ್ಟಿ ಸಖತ್ ಡ್ಯಾನ್ಸ್: ವಿಡಿಯೋ

ದೀಕ್ಷಿತ್ ಶೆಟ್ಟಿ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ದಿಯಾ’ದಿಂದ ನಟನೆ ಆರಂಭಿಸಿದ ದೀಕ್ಷಿತ್, ‘ಕೆಟಿಎಂ’, ಸಖತ್ ಸದ್ದು ಮಾಡಿದ ‘ಬ್ಲಿಂಕ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ದೀಕ್ಷಿತ್ ನಟನೆಯ ಹಾಸ್ಯ ಪ್ರಧಾನ ಸಿನಿಮಾ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಹ ಬಿಡುಗಡೆ ಆಗಿ ಗಮನ ಸೆಳೆಯಿತು. ಇವುಗಳ ಜೊತೆಗೆ ಪ್ರಸ್ತುತ ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರ್ರಿ’ ಸಿನಿಮಾಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. ತೆಲುಗಿನ ‘ಕಿಂಗ್ ಜಾಕ್ ಕ್ವೀನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ‘ಒಪ್ಪೀಸ್’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಇದೀಗ ದುಲ್ಕರ್ ಸಲ್ಮಾನ್ ಅವರ ಹೊಸ ಸಿನಿಮಾ ಸಹ ದೀಕ್ಷಿತ್​​ಗೆ ದೊರೆತಿದೆ.

ದೀಕ್ಷಿತ್ ಶೆಟ್ಟಿ ಅವರು ಈ ಹಿಂದೆ ಟಿವಿ9ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ. ಅವರಿಗೆ ಸಿಗುತ್ತಿರುವ ಎಲ್ಲ ಅವಕಾಶಗಳು ಯಾರೋ ಒಬ್ಬರು ರೆಫರ್ ಮಾಡಿ, ಅಂದರೆ ಇವರ ಕೆಲಸ ನೋಡಿದವರು, ಮೆಚ್ಚಿ ಮತ್ತೊಂದು ಸಿನಿಮಾಕ್ಕೆ ತೆಗೆದುಕೊಳ್ಳುತ್ತಾರಂತೆ. ದೀಕ್ಷಿತ್ ಅವರಿಗೆ ಕೆಲಸದ ಮೇಲಿರುವ ಶ್ರದ್ಧೆ, ಶೂಟಿಂಗ್​​ ಸ್ಥಳದಲ್ಲಿ ತೋರುವ ಶಿಸ್ತು, ತನ್ಮಯತೆಯ ಕಾರಣಕ್ಕೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತಿವೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ