
ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕುಬೇರ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಬಿಡುಗಡೆ ಆದ ಒಂದು ವಾರಕ್ಕೂ ಮುಂಚೆಯೇ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಧನುಶ್ ನಟನೆಯ ಸಿನಿಮಾ ಒಂದು ನೂರು ಕೋಟಿ ಗಳಿಸಿ ಬಹಳ ಸಮಯವಾಗಿತ್ತು. ‘ಕುಬೇರ’ ಮೂಲಕ ಧನುಶ್ಗೆ ಗೆಲುವು ದೊರೆತಂತಾಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದ್ದರೂ ಸಹ ಧನುಶ್ಗೆ ಇದರಿಂದ ಭಾರಿ ಮುಖಭಂಗವೇ ಆಗಿದೆ. ಅದಕ್ಕೆ ಕಾರಣವೂ ಇದೆ.
‘ಕುಬೇರ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಇದು ಮೂಲ ತೆಲುಗು ಸಿನಿಮಾ ಆಗಿದ್ದರೂ ಸಹ ಧನುಶ್ ಇರುವ ಕಾರಣಕ್ಕೆ ತಮಿಳುನಾಡಿನಲ್ಲೂ ಸಹ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ‘ಕುಬೇರ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ದೊಡ್ಡ ಹಿಟ್ ಆಗಿದೆ. ಆದರೆ ತಮಿಳುನಾಡಿನಲ್ಲಿ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ!
ಹೌದು, ತಮಿಳಿನ ಸ್ಟಾರ್ ನಟ ಮುಖ್ಯ ಪಾತ್ರದಲ್ಲಿ ಇದ್ದ ಹೊರತಾಗಿ. ಧನುಶ್ ಅದ್ಭುತ ನಟನೆ ನೀಡಿ, ಶೇಖರ್ ಕಮ್ಮುಲ ಒಂದೊಳ್ಳೆ ಕತೆಯುಳ್ಳ ಸಿನಿಮಾ ಕೊಟ್ಟ ಹೊರತಾಗಿಯೂ ಸಹ ತಮಿಳುನಾಡಿನಲ್ಲಿ ಸಿನಿಮಾ ಒಳ್ಳೆಯ ಪ್ರದರ್ಶನ ಕಂಡಿಲ್ಲ. ಇದು ಧನುಶ್ಗೆ ಇರುವ ಕಡಿಮೆ ಜನಪ್ರಿಯತೆ ಅಥವಾ ಸ್ಟಾರ್ಡಂ ಅನ್ನು ಎತ್ತಿ ತೋರುತ್ತಿದೆ. ‘ಕುಬೇರ’ ಸಿನಿಮಾನಲ್ಲಿ ಧನುಶ್ ಜೊತೆಗೆ ಅಕ್ಕಿನೇನಿ ನಾಗಾರ್ಜುನ ಸಹ ನಟಿಸಿದ್ದರು. ಅಕ್ಕಿನೇನಿ ಅಭಿಮಾನಿಗಳು, ಶೇಖರ್ ಕಮ್ಮುಲ ಅಭಿಮಾನಿಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ. ಆದರೆ ಒಳ್ಳೆಯ ಸಿನಿಮಾ ಆಗಿರುವ ಹೊರತಾಗಿಯೂ ಧನುಶ್ಗೆ ತಮಿಳುನಾಡಿನಲ್ಲಿ ಸಿನಿಮಾ ಅನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:‘ಕುಬೇರ’ ಪ್ರಚಾರ: ರಶ್ಮಿಕಾ ಮಂದಣ್ಣ ಕಾಲೆಳೆದ ನಟ ಧನುಶ್
ಸಿನಿಮಾ ಬಿಡುಗಡೆ ಆದ ದಿನ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಸೇರಿ 12 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತಮಿಳು ಹೀರೋ ಸಿನಿಮಾ ಆಗಿದ್ದರೂ ಸಹ ತೆಲುಗು ರಾಜ್ಯಗಳ ಜನ ‘ಕುಬೇರ’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಅದೇ ದಿನ ತಮಿಳುನಾಡಿನಲ್ಲಿ ಗಳಿಕೆ ಆಗಿದ್ದು ಕೇವಲ 4 ಕೋಟಿ. ಈ ವರೆಗೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ‘ಕುಬೇರ’ ಸಿನಿಮಾ ಸುಮಾರು 60 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಆದರೆ ತಮಿಳುನಾಡಿನಲ್ಲಿ ‘ಕುಬೇರ’ ಸಿನಿಮಾ ಗಳಿಸಿರುವುದು 18 ಕೋಟಿ ಮಾತ್ರ.
ಇದೇ ಸಿನಿಮಾ ಕರ್ನಾಟಕದಲ್ಲಿ ಸುಮಾರು 9 ಕೋಟಿ ರೂಪಾಯಿಗಳು, ಕೇರಳದಲ್ಲಿ ಎರಡು ಕೋಟಿ ಮತ್ತು ಹೊರದೇಶಗಳಲ್ಲಿ ಸುಮಾರು 30 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ‘ಕುಬೇರ’ ಸಿನಿಮಾ ಸಮಾಜದಲ್ಲಿರುವ ಬಡವ-ಶ್ರೀಮಂತರ ನಡುವಿನ ಭೇದದ ಬಗ್ಗೆ ಚರ್ಚೆ ಮಾಡುವ ಸಿನಿಮಾ ಆಗಿದೆ. ಸಿನಿಮಾನಲ್ಲಿ ಧನುಶ್ ನಾಯಕ. ಅಕ್ಕಿನೇನಿ ನಾಗಾರ್ಜುನ್ ಸಹ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ