ಮೂರು ಹಿಟ್ ಕೊಟ್ಟ ನಿರ್ದೇಶಕನಿಗೆ ಎರಡನೇ ಬಾರಿ ಕೈಕೊಟ್ಟ ಅಲ್ಲು ಅರ್ಜುನ್?

Allu Arjun movie: ಅಲ್ಲು ಅರ್ಜುನ್ ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಹಾಲಿವುಡ್ ಸ್ಟುಡಿಯೋಗಳ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಈ ಸಿನಿಮಾ ಮೂಲಕ ಹಾಲಿವುಡ್ ಕದ ತಟ್ಟುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಒಂದೊಂದೆ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅಲ್ಲು ಅರ್ಜುನ್, ಏರಲು ಸಹಾಯ ಮಾಡಿದವರನ್ನೇ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಮೂರು ಹಿಟ್ ಕೊಟ್ಟ ನಿರ್ದೇಶಕನಿಗೆ ಎರಡನೇ ಬಾರಿ ಕೈಕೊಟ್ಟ ಅಲ್ಲು ಅರ್ಜುನ್?
Allu Arjun Trivikram

Updated on: Jan 16, 2026 | 9:49 AM

ಅಲ್ಲು ಅರ್ಜುನ್ (Allu Arjun) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸಹ ಸೆಳೆದಿವೆ. ಇದೀಗ ಅಲ್ಲು ಅರ್ಜುನ್ ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಹಾಲಿವುಡ್ ಸ್ಟುಡಿಯೋಗಳ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಈ ಸಿನಿಮಾ ಮೂಲಕ ಹಾಲಿವುಡ್ ಕದ ತಟ್ಟುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಒಂದೊಂದೆ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅಲ್ಲು ಅರ್ಜುನ್, ಏರಲು ಸಹಾಯ ಮಾಡಿದವರನ್ನೇ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಅಲ್ಲು ಅರ್ಜುನ್ ಅವರಿಗೆ ಅವರ ವೃತ್ತಿ ಜೀವನದಲ್ಲಿ ಹಲವು ಅತ್ಯುತ್ತಮ ನಿರ್ದೇಶಕರುಗಳು ದೊರಕಿದ್ದಾರೆ. ಸುಕುಮಾರ್, ಭಾಸ್ಕರ್, ಕ್ರಿಶ್, ಗುಣಶೇಖರ್ ಇನ್ನೂ ಹಲವರು ಅಲ್ಲು ಅರ್ಜುನ್​​ಗೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸುಕುಮಾರ್ ಅಲ್ಲು ಅರ್ಜುನ್​​ಗಾಗಿ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೂರಕ್ಕೆ ಮೂರು ಸೂಪರ್ ಹಿಟ್ ಆಗಿವೆ. ‘ಆರ್ಯ’, ‘ಪುಷ್ಪ’ ಮತ್ತು ‘ಪುಷ್ಪ 2’. ಆದರೆ ಸುಕುಮಾರ್ ಈ ಸಾಧನೆ ಮುಂಚೆಯೇ ಮತ್ತೊಬ್ಬ ನಿರ್ದೇಶಕ ಈ ದಾಖಲೆ ಬರೆದಿದ್ದರು ಅದುವೇ ತ್ರಿವಿಕ್ರಮ್ ಶ್ರೀನಿವಾಸ್.

ತೆಲುಗಿನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್, ತೆಲುಗು ಚಿತ್ರರಂಗಕ್ಕೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್​​ ಅವರಿಗಾಗಿ ಮೂರು ಸಿನಿಮಾ ನಿರ್ದೇಶಿಸಿ, ಮೂರಕ್ಕೆ ಮೂರು ಸಹ ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವ ಮೊದಲೇ ಈ ಹಿಟ್​​ಗಳನ್ನು ತ್ರಿವಿಕ್ರಮ್ ನೀಡಿದ್ದರು. ಆದರೆ ಈಗ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದೂ ಒಂದಲ್ಲ ಎರಡೆರಡು ಭಾರಿ.

ಇದನ್ನೂ ಓದಿ:ಜಪಾನ್ ಅಭಿಮಾನಿಗಳ ಜೊತೆ ಅಲ್ಲು ಅರ್ಜುನ್

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು. ‘ಪುಷ್ಪ’ ಸಿನಿಮಾದ ಸಮಯದಲ್ಲಿಯೇ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದ ಸಿನಿಮಾಕ್ಕೆ ಎಸ್ ಹೇಳಿದರು. ಆ ಬಳಿಕ ತ್ರಿವಿಕ್ರಮ್ ಅವರು ಅದೇ ಕತೆಯನ್ನು ಜೂ ಎನ್​​ಟಿಆರ್ ಅವರಿಗೆ ಹೇಳಿದರು. ಆದರೆ ಜೂ ಎನ್​​ಟಿಆರ್ ಕತೆ ಸೂಟ್ ಆಗುವುದಿಲ್ಲವೆಂದು ನಿರ್ಧರಿಸಿ ಮತ್ತೆ ಕತೆಯನ್ನು ಅಲ್ಲು ಅರ್ಜುನ್ ಅವರಿಗೇ ಒಪ್ಪಿಸಿದರು ತ್ರಿವಿಕ್ರಮ್ ಶ್ರೀನಿವಾಸ್.

ಆದರೆ ಇದೀಗ ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಂತಿದೆ ಅಲ್ಲು ಅರ್ಜುನ್. ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ಇದೇ ವರ್ಷ ಶುರುವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ತಮಿಳಿನ ಲೋಕೇಶ್ ಕನಗರಾಜ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆ ಮೂಲಕ ತ್ರಿವಿಕ್ರಮ್ ಸಿನಿಮಾಕ್ಕೆ ಮತ್ತೊಮ್ಮೆ ನೋ ಹೇಳಿರುವುದು ಖಾತ್ರಿ ಆಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಅವರು, ದೇವರು ಸುಬ್ರಹ್ಮಣ್ಯ ಅಥವಾ ಮುರುಗನ್ ಅವರನ್ನು ಆಧರಿಸಿದ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು. ಅದಕ್ಕೆ ಅಲ್ಲು ಅರ್ಜುನ್ ಅವರೇ ಸೂಕ್ತ ಎಂಬ ನಂಬಿಕೆಯಲ್ಲಿದ್ದಾರೆ ಆದರೆ ಅಲ್ಲು ಅರ್ಜುನ್ ಪದೇ ಪದೇ ಸಿನಿಮಾಕ್ಕೆ ನೋ ಹೇಳುತ್ತಿದ್ದಾರೆ. ಇದೀಗ ಈ ಸಿನಿಮಾ ಮತ್ತೆ ಜೂ ಎನ್​​ಟಿಆರ್ ಪಾಲಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ