ನಟ ದಿಲೀಪ್​ ಕುಮಾರ್​ ಬಗ್ಗೆ ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದೆ ಕೆಟ್ಟ ಸುದ್ದಿ; ಪತ್ನಿ ನೀಡಿದ ಸ್ಪಷ್ಟನೆ ಏನು?

Dilip Kumar Death Hoax: ದಿಲೀಪ್​ ಕುಮಾರ್​ ನಿಧನರಾದರು ಎಂಬ ಗಾಳಿ ಸುದ್ದಿ ವಾಟ್ಸ್​ಆ್ಯಪ್​ನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆ ಆಗುತ್ತಿದೆ. ಈ ಬಗ್ಗೆ ದಿಲೀಪ್​​ ಪತ್ನಿ ಸಾಯಿರಾ ಬಾನು ಸ್ಪಷ್ಟನೆ ನೀಡಿದ್ದಾರೆ.

ನಟ ದಿಲೀಪ್​ ಕುಮಾರ್​ ಬಗ್ಗೆ ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದೆ ಕೆಟ್ಟ ಸುದ್ದಿ; ಪತ್ನಿ ನೀಡಿದ ಸ್ಪಷ್ಟನೆ ಏನು?
ದಿಲೀಪ್​ ಕುಮಾರ್​, ಸಾಯಿರಾ ಬಾನು

Updated on: Jun 07, 2021 | 11:43 AM

ಬಾಲಿವುಡ್​ನ ಹಿರಿಯ ನಟ ದಿಲೀಪ್​ ಕುಮಾರ್​ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಭಾನುವಾರ (ಜೂ.6) ಬೆಳಗ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅತ್ತ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅನೇಕರ ವಾಟ್ಸ್​ಆ್ಯಪ್​ನಲ್ಲಿ ಕೆಟ್ಟ ಸುದ್ದಿ ಹರಿದಾಡುಲು ಆರಂಭಿಸಿತು. ದಿಲೀಪ್​ ಕುಮಾರ್​ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಯಾರೋ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಈ ಬಗ್ಗೆ ದಿಲೀಪ್​ ಕುಮಾರ್​ ಪತ್ನಿ ಸಾಯಿರಾ ಬಾನು ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಂತೂ ಖ್ಯಾತ ಸೆಲೆಬ್ರಿಟಿಗಳ ಸಾವಿನ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ. ಕೊವಿಡ್​ ಸಂದರ್ಭವಾದ್ದರಿಂದ ಜನರು ಇಂಥ ಸುದ್ದಿಗಳಿಗೆ ಬಹುಬೇಗ ಕಿವಿಗೊಡುತ್ತಾರೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೆಲವರು ಇಲ್ಲಸಲ್ಲದ ವದಂತಿ ಸೃಷ್ಟಿಸುತ್ತಿದ್ದಾರೆ. ದಿಲೀಪ್​ ಕುಮಾರ್​ ವಿಚಾರದಲ್ಲಿಯೂ ಹೀಗೆ ಆಗಿದೆ. ದಿಲೀಪ್​ ನಿಧನರಾದರು ಎಂಬ ಗಾಳಿ ಸುದ್ದಿ ವಾಟ್ಸ್​ಆ್ಯಪ್​ನಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆ ಆಗುತ್ತಿದೆ. ಈ ಬಗ್ಗೆ ದಿಲೀಪ್​ ಕುಮಾರ್​ ಪತ್ನಿ ಸಾಯಿರಾ ಬಾನು ಸ್ಪಷ್ಟನೆ ನೀಡಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿಲೀಪ್​ ಆರೋಗ್ಯದ ಬಗ್ಗೆ ಸಾಯಿರಾ ಬಾನು ಸೋಶಿಯಲ್​ ಮೀಡಿಯಾ ಮೂಲಕ ಅಪ್​ಡೇಟ್​ ನೀಡಿದ್ದಾರೆ. ‘ವಾಟ್ಸ್​ಆ್ಯಪ್​ನಲ್ಲಿ ಬರುವ ಫಾರ್ವರ್ಡ್​​​ ಮೆಸೇಜ್​ಗಳನ್ನು ನಂಬಬೇಡಿ. ದಿಲೀಪ್​ ಕುಮಾರ್​ ಆರೋಗ್ಯ ಸ್ಥಿರವಾಗಿದೆ. ನಿಮ್ಮೆಲ್ಲರ ಹಾರೈಕೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾಗಳು. ವೈದ್ಯರು ಹೇಳುವ ಪ್ರಕಾರ ಇನ್ನು 2 ಅಥವಾ 3 ದಿನಗಳಲ್ಲಿ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ’ ಎಂದು ಸಾಯಿರಾ ಬಾನು ಟ್ವೀಟ್​ ಮಾಡಿದ್ದಾರೆ.

ದಿಲೀಪ್​ ಕುಮಾರ್​ ಅವರಿಗೆ ಈಗ 98 ವರ್ಷ ವಯಸ್ಸು. ಹಾಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಸದ್ಯ ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರು ಆಕ್ಸಿಜನ್​ ಸಪೋರ್ಟ್​ನಲ್ಲಿ ಇದ್ದಾರೆ. ಕಳೆದ ತಿಂಗಳು ಕೂಡ ಇದೇ ಆಸ್ಪತ್ರೆಗೆ ದಿಲೀಪ್​ ಕುಮಾರ್​ ದಾಖಲಾಗಿದ್ದರು. ಸಹಜ​ ಆರೋಗ್ಯ ತಪಾಸಣೆಗಾಗಿ ಅವರು ತೆರಳಿದ್ದರು ಎನ್ನಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್​ ಮಾಡಲಾಗಿತ್ತು. ಕಳೆದ ವರ್ಷ ಕೊರೊನಾ ವೈರಸ್​ನಿಂದಾಗಿ ಲಾಕ್​ಡೌನ್​ ಆರಂಭ ಆಗುತ್ತಿದ್ದಂತೆಯೇ ದಿಲೀಪ್​ ಕುಮಾರ್​ ಆರೋಗ್ಯದ ಬಗ್ಗೆ ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಲು ಆರಂಭಿದ್ದರು.

1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್​ ಕುಮಾರ್​ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್​, ಮುಘಲ್-ಏ-ಆಜಮ್​, ಶಕ್ತಿ, ನಯಾ ದೌರ್​, ರಾಮ್​ ಔರ್​ ಶ್ಯಾಮ್​ ಮುಂತಾದ ಕ್ಲಾಸಿಕ್​ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ:

Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us