‘50 ಲಕ್ಷ ಕೊಟ್ಟರೆ ಸಾಕು’ ಸಿನಿಮಾ ನಟಿಯರ ಬಗ್ಗೆ ನಿರ್ದೇಶಕ ಕಮೆಂಟ್

Tollywood: ತೆಲುಗು ಚಿತ್ರರಂಗದ ಬಗ್ಗೆ ಹಿರಿಯ ನಿರ್ದೇಶಕ ಗೀತಾ ಕೃಷ್ಣ ಟೀಕೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಡ್ರಗ್ಸ್ ವ್ಯವಹಾರದ ಬಗ್ಗೆ ಮಾತನಾಡಿರುವ ಅವರು, ಚಿತ್ರರಂಗದಲ್ಲಿರುವ ಅಕ್ರಮ ಸಂಬಂಧಗಳು, ವೇಶ್ಯಾವಾಟಿಕೆ ವಿಷಯದ ಬಗ್ಗೆ ಸಹ ಮಾತನಾಡಿದ್ದಾರೆ.

‘50 ಲಕ್ಷ ಕೊಟ್ಟರೆ ಸಾಕು’ ಸಿನಿಮಾ ನಟಿಯರ ಬಗ್ಗೆ ನಿರ್ದೇಶಕ ಕಮೆಂಟ್

Updated on: Sep 01, 2024 | 7:53 AM

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಬಗ್ಗೆ ಅಧ್ಯಯನ ಮಾಡಲಾಗಿರುವ ಹೇಮಾ ಸಮಿತಿ ವರದಿ ಸಂಚಲನವನ್ನೇ ಸೃಷ್ಟಿಸಿದೆ. ಮಲಯಾಳಂ ಚಿತ್ರರಂಗದ ಹೇಮಾ ಸಮಿತಿ ವರದಿ ಬಿಡುಗಡೆ ಆದ ಬಳಿಕ ಮಲಯಾಳಂ ಮಾತ್ರವೇ ಅಲ್ಲದೆ ಪರಭಾಷೆ ಚಿತ್ರರಂಗದ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆಗಳು ಎದ್ದಿವೆ. ಕೆಲವರು ಮಹಿಳೆಯರ ಪರವಾಗಿ ಕೆಲವರು ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ತೆಲುಗಿನಲ್ಲಿ 90ರ ದಶಕದಲ್ಲಿ ಕೆಲ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಗೀತಾ ಕೃಷ್ಣ ಇದೀಗ ತೆಲುಗು ಚಿತ್ರರಂಗ ಹಾಗೂ ಚಿತ್ರರಂಗದ ನಾಯಕಿಯರು ಬಗ್ಗೆ ಮಾತನಾಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿರುವ ಡ್ರಗ್ಸ್ ಪಿಡುಗಿನ ಬಗ್ಗೆ ಮಾತನಾಡಿರುವ ನಿರ್ದೇಶಕ ಗೀತಾ ಕೃಷ್ಣ, ‘ಡ್ರಗ್ಸ್ ಬಳಕೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿದೆ. ಇಲ್ಲಿನ ಹಲವು ನಟರು, ನಟರ ಕುಟುಂಬದವರು ಡ್ರಗ್ಸ್​ಗೆ ದಾಸರಾಗಿದ್ದಾರೆ. ರವಿತೇಜ ಸಹೋದರ ಸಹ ಡ್ರಗ್ಸ್​ಗೆ ದಾಸನಾಗಿದ್ದ, ಅದರಿಂದಲೇ ಅವನ ಸಾವಾಯ್ತು, ಆಗ ರವಿತೇಜ ಆತನನ್ನು ನೋಡಲು ಸಹ ಹೋಗಿರಲಿಲ್ಲ’ ಎಂದಿದ್ದರು. ಡ್ರಗ್ಸ್ ಎಂಬುದು ಶ್ರೀಮಂತ ಜನರ ಮೋಜಿನ ವಸ್ತು, ಬಡವರಿಗೆ, ಮಧ್ಯಮ ವರ್ಗದವರಿಗೆ ಅದು ಎಟುಕುವುದಿಲ್ಲ ಹಾಗಾಗಿ ಅವರು ಸೇಫ್ ಆಗಿದ್ದಾರೆ. ಚಿತ್ರರಂಗದಲ್ಲಿ ಡ್ರಗ್ಸ್ ಅನ್ನು ಉದ್ಯಮ ಮಾಡಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿಗಳಿಗೆ ಡ್ರಗ್ಸ್ ಅನ್ನು ಮಾರಾಟ ಮಾಡಲಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ತಮಿಳು, ತೆಲುಗು ಚಿತ್ರರಂಗದಿಂದ ಇಲಿಯಾನಾ ಬ್ಯಾನ್ ಆಗಿದ್ದು ಏಕೆ?

ಸಿನಿಮಾಗಳಲ್ಲಿ ಶೃಂಗಾರ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ‘ನಟಿಯರಿಗೆ ಮಾಹಿತಿ ನೀಡದೆ ಅಂಥಹಾ ದೃಶ್ಯಗಳನ್ನು ತೆಗೆಯಲು ಸಾಧ್ಯವಿಲ್ಲ. ಯಾವ ನಟಿಗೂ ಸಹ ಬಲವಂತ ಮಾಡಿ ರೊಮ್ಯಾಂಟಿಕ್ ಸೀನ್​ಗಳಲ್ಲಿ ನಟಿಸುವಂತೆ ಮಾಡಲಾಗುವುದಿಲ್ಲ. ಒಂದೊಮ್ಮೆ ಬಲವಂತ ಮಾಡಿದರೆ ಅದಾದ ಬಳಿಕ ಆ ನಟಿ ವಿಷಯ ಬಹಿರಂಗ ಮಾಡಿಯೇ ಮಾಡುತ್ತಾಳೆ, ಈಗಲ್ಲದಿದ್ದರೂ ಮುಂದೆ ಯಾವಾಗಲಾದರೂ ಆ ವಿಷಯ ಬಹಿರಂಗ ಆಗಿಯೇ ಆಗುತ್ತದೆ’ ಎಂದಿದ್ದಾರೆ.

ಇನ್ನು ತೆಲುಗು ಚಿತ್ರರಂಗದಲ್ಲಿ ಅಫೇರ್​ಗಳು, ಅಕ್ರಮ ಸಂಬಂಧಗಳು ಬಹಳ ಕಾಮನ್ ಆಗಿಬಿಟ್ಟಿವೆ ಎಂದಿರುವ ಗೀತಾ ಕೃಷ್ಣ, ‘ತೆಲುಗು ಚಿತ್ರರಂಗದಲ್ಲಿ ಅಫೇರ್​ಗಳು ಬಹಳ ಸಾಮಾನ್ಯ. ಅವುಗಳ ಬಗ್ಗೆ ಯಾರೂ ತಲೆ ಸಹ ಕೆಡಿಸಿಕೊಳ್ಳುತ್ತಿಲ್ಲ. ಕೆಲವು ನಟಿಯರಿಗೆ ಕೇವಲ 50 ಲಕ್ಷ ರೂಪಾಯಿ ಕೊಟ್ಟರೆ ಸಾಕು ಬಂದು ಬಿಡುತ್ತಾರೆ’ ಎಂದು ಸಹ ಗೀತಾ ಕೃಷ್ಣ ಹೇಳಿದ್ದಾರೆ. ‘ಕೆಲವು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳಿಗೆ ನಾಯಕಿಯೊಟ್ಟಿಗೆ ಆತ್ಮೀಯ ಸಂಬಂಧಗಳು ಇವೆ. ಅದನ್ನೇ ಆಧಾರವಾಗಿಟ್ಟುಕೊಂಡು ಕೆಲವು ನಟಿಯರು ಆಸ್ತಿಗಳು ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ ನಿರ್ದೇಶಕ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ