ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ, ತಯಾರಿ ಬಗ್ಗೆ ದುನಿಯಾ ವಿಜಿ ಮಾತು
Duniya Vijay: ದುನಿಯಾ ವಿಜಯ್ ಜನವರಿ 20ರಂದು ತಮ್ಮ ಹುಟ್ಟೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಾಗಲಿದ್ದಾರೆ. ತಯಾರಿ ಹೇಗಿದೆ ಎಂಬುದನ್ನು ವಿಜಿ ವಿವರಿಸಿದರು.
ದುನಿಯಾ ವಿಜಯ್ (Duniya Vijay) ಜನವರಿ 20ರಂದು ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ದುನಿಯಾ ವಿಜಯ್, ವಾರದಿಂದ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೀವಿ, ಅಭಿಮಾನಿಗಳಿಗಾಗಿ ಸೌದೆ ಒಲೆಯಲ್ಲಿ ಅಡುಗೆ ಮಾಡಿಸುತ್ತಿದ್ದೀವಿ, ಎಲ್ಲ ನಮ್ಮ ಸಹ ನಿರ್ದೇಶಕರು, ನಮ್ಮ ಅಣ್ಣಯ್ಯ, ಬಂಧುಗಳು ಸಹ ತಯಾರಿಯಲ್ಲಿ ಭಾಗಿಯಾಗಿದ್ದರು ಎಂದ ದುನಿಯಾ ವಿಜಯ್, ಅಭಿಮಾನಿಗಳಾಗಿ ಮನವಿ ಮಾಡಿ, ಕೇಕ್, ಹಾರ ತರಬೇಡಿ, ನಿಮ್ಮೊಂದಿಗೆ ಕೂತು ಊಟ ಮಾಡುವ ಆಸೆ ಅಷ್ಟೆ ನನಗೆ. ನೀವು ಸುರಕ್ಷಿತವಾಗಿರುವುದೇ ನನಗೆ ಬೇಕಾಗಿರುವುದು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 14, 2024 11:52 PM