ಹೈದರಾಬಾದ್: ಕರ್ನಾಟಕದಲ್ಲಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಖ್ಯಾತ ಆ್ಯಂಕರ್ ಅನುಶ್ರೀ ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡಿದ್ದಾರೆ ಎಂದು ಆರೋಪಿಯೊಬ್ಬ ಹೇಳಿದ್ದಾನೆ. ಈ ಮಧ್ಯೆ ತೆಲುಗು ಸಿನಿಮಾ ಲೋಕದಲ್ಲಿಯೂ ಮತ್ತದೆ ಡ್ರಗ್ಸ್ ಘಾಟು ಜೋರಾಗಿ ಬಡಿದಿದೆ. ಈ ಹಿಂದೆಯೂ ಕೆಲ ಖ್ಯಾತ ನಾಮರ ವಿರುದ್ಧ ಡ್ರಗ್ಸ್ ಸೇವನೆ/ ಮಾರಾಟ ಆರೋಪ ಕೇಳಿಬಂದಿತ್ತು.
ತಾಜಾ ಬೆಳವಣಿಗೆಯಲ್ಲಿ ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಚಾರ್ಜ್ಶೀಟ್ನಲ್ಲಿ F ಕ್ಲಬ್ ಸೇರಿದಂತೆ 12 ಜನರ ಹೆಸರು ದಾಖಲಿಸಲಾಗಿದೆ. 12 ಜನರ ಹೆಸರು ಉಲ್ಲೇಖಿಸಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಖ್ಯಾತ ನಟರಾದ ರವಿತೇಜ, ತರುಣ್, ಚಾರ್ಮಿ, ಮೊಮೈತ್ ಖಾನ್, ನಿರ್ದೇಶಕ ಪೂರಿ ಜಗನಾಥ್, ಸುಬ್ಬರಾಜು, ಸೇರಿದಂತೆ 12 ಜನರ ಹೆಸರು ಉಲ್ಲೇಖಿಸಿದ್ದಾರೆ.
Also read:
ಅನುಶ್ರೀ ವಿಚಾರದಲ್ಲಿ ಒತ್ತಡ ಹಾಕಿದ ಆ ಮಾಜಿ CM ಯಾರು? ಹೆಸರು ಹೇಳಿ -HDK ಒತ್ತಾಯ
(ED files charge sheet in drugs case actor ravi teja charmi names included)
Published On - 11:28 am, Wed, 8 September 21